ಬಸವಣ್ಣ   
Index   ವಚನ - 428    Search  
 
ಲಿಂಗದಲ್ಲಿ ದಿಟವನರಸುವರೆ ಜಂಗಮವ ನೆರೆ ನಂಬುವುದು: ನಡೆಲಿಂಗ, ನುಡಿಲಿಂಗ, ಮುಖಲಿಂಗವೆಂದೇ ನಂಬೋ! `ಯತ್ರ ಮಹೇಶ್ವರತತ್ರಸನ್ನಿಹಿತʼನಾಗಿ ಅಧರ ತಾಗಿದ ರುಚಿಯ ಉದರ ತಾಗಿದ ಸುಖವ ಉಣ್ಬ, ಉಡುವ ಕೂಡಲಸಂಗಮದೇವ, ಜಂಗಮಮುಖದಲ್ಲಿ.