Hindi Translationपलायक भृत्य नहीं, याचक भक्त नहीं
भृत्य को भागना नहीं चाहिए, भक्त को माँगना नहीं चाहिए
मैं न भागूँगा, न माँगूगा कूडलसंगमदेव ॥
Translated by: Banakara K Gowdappa
English Translation He is no servant-man who runs,
Nor devotee who begs...
No servant-man should run,
Nor devotee should beg.
I will not run nor beg,
O Kūḍala Saṅgama Lord!
Translated by: L M A Menezes, S M Angadi
Tamil Translationஓடுவோன் உயிரை ஈயும் தொண்டனன்று
வேண்டுவோன் பக்தனன்று
உயிரை ஈயும் தொண்டன் ஓடலாகாது
பக்தன் வேண்டக் கூடாது
ஓடேன் ஐயனே, வேண்டேன் ஐயனே
கூடல சங்கம தேவனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಬಸವಣ್ಣನವರು ತಮ್ಮನ್ನು ಒಬ್ಬ “ಭಕ್ತ”ನನ್ನಾಗಿಯೇ ಕರೆದುಕೊಂಡಿರುವುದು ಪ್ರಸಿದ್ದವೇ ಆಗಿದೆ. ಈ ವಚನದಲ್ಲಿ ಅವರು ಅಂಥ ಭಕ್ತನ ಲಕ್ಷಣವನ್ನು ಹೇಳಿರುವರು. ಶಿವಭಕ್ತನು ಶಿವನ ಸೈನಿಕ(ಲೆಂಕ)ನು, ಅವನು ಶಿವಭಕ್ತಿಸ್ಥಾಪನೆಗಾಗಿ ಅಮರಣ ಹೋರಾಡಲು ಸಿದ್ಧನಾಗಿರಬೇಕು-ಮತ್ತು ಯಾರನ್ನೂ ಬೇಡಿ ಜೀವನ ನಡೆಸಬಾರದು. -ಬೇಡುವ ಹಕ್ಕು ಅವನಿಗಿಲ್ಲ. ಅವನು ದುಡಿದು (ಕಾಯಕಮಾಡಿ) ಬದುಕಬೇಕು. ಅಂದರೆ ಶಿವಸಾಮ್ರಾಜ್ಯದಲ್ಲಿ ಪ್ರಜೆಯಾದ ಶಿವಭಕ್ತನು ಏಕಕಾಲಕ್ಕೆ ಒಬ್ಬ ವೀರಸೈನಿಕನೂ ಮತ್ತು ಶ್ರದ್ಧಾವಂತ ಕಾರ್ಮಿಕನೂ ಆಗಿರಬೇಕಾಗಿತ್ತು.
ಭಕ್ತ-ಶರಣ-ಜಂಗಮ ಈ ಮೂರು ಸೇರಿ ಬಸವಸಮಾಜ. ಇಡೀ ಸಮಾಜದ ಉದ್ಧಾರಕ್ಕಾಗಿ ಭಕ್ತ(ಮತ್ತು ಶರಣ)ರು (ಕಾಯಕದಿಂದ) ಧನಸಹಾಯ ಮಾಡಬೇಕಿತ್ತು. ಈ ಧನದ ಸಂಗ್ರಹಣೆಯ ಹೊಣೆಯು ಸನ್ಯಾಸಿಯಾದ ಜಂಗಮದ ಮೇಲಿತ್ತು. ಈ ಜಂಗಮರಿಗೆ ಶರಣರೂ ಸಹಾಯಕರಾಗಿರುತ್ತಿದ್ದರು. (ನೋಡಿ ವಚನ 433, 437)
ಈ ದೃಷ್ಟಿಯಿಂದ ಭಕ್ತನಿಗೆ ಬೇಡುವ ಹಕ್ಕಿಲ್ಲ. ಶರಣನು ಬೇಡಿದರೂ ಜಂಗಮದ ಪರವಾಗಿ ಮಾತ್ರ. ಹೀಗೆ ಜಂಗಮನೇತೃತ್ವದಲ್ಲಿ ಸಂಗ್ರಹವಾದ ನಿಧಿಯನ್ನು ಸಮಾಜೋದ್ಧಾರದ ಯೋಜನೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸುವ ಜವಾಬ್ದಾರಿ ಇದ್ದುದು ಈ ಶರಣನಿಗೇ.
ಲಕ್ಷಕ್ಕೊಬ್ಬ ಜಂಗಮ, ಸಾವಿರಕ್ಕೊಬ್ಬ ಶರಣ, ಮಿಕ್ಕವರೆಲ್ಲಾ ಭಕ್ತರು !
ವಿ. (1) ಲೆಂಕ : ಹಿಂದಿನ ಕಾಲದಲ್ಲಿ ರಾಜನ ಪರವಾಗಿ ಪ್ರಾಣವನ್ನು ಪಣವಾಗಿಟ್ಟು ಯುದ್ದಗಳಲ್ಲಿ ಹೋರಾಡುತ್ತಿದ್ದ ಪಟುಭಟರಲ್ಲಿ ಒಂದು ಬಗೆಯವರನ್ನು “ಲೆಂಕ”ರೆಂದು ಕರೆಯುತ್ತಿದ್ದರು. (2) ಬಸವ ಸಮಾಜದಲ್ಲಿ ಯಾರು ಬೇಡುವಂತಿಲ್ಲ. ಶರಣನಾಗಲಿ ಜಂಗಮನಾಗಲಿ ಬೇಡುವ ಹಕ್ಕನ್ನು ಪಡೆದಿದ್ದರೂ ತಮ್ಮ ಹೊಟ್ಟೆಪಾಡಿಗಾಗಿಯಲ್ಲ-ಸಮಾಜಸುಧಾರಣೆಗಾಗಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.