ಎಲ್ಲರೂ ವೀರರು, ಎಲ್ಲರೂ ಧೀರರು;
ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು;
ಕಾಳಗದ ಮುಖದಲ್ಲಿ ಕಾಣಬಾರದು,
ಓಡುವ ಮುಖದಲ್ಲಿ ಕಾಣಬಹುದು!
ನಮ್ಮ ಕೂಡಲಸಂಗನ ಶರಣರು ಧೀರರು,
ಉಳಿದವರೆಲ್ಲರೂ ಅಧೀರರು.
Hindi Translationसभी वीर हैं, सभी धीर,
सभी महिमावान हैं, सभी प्रमथ ।
किंतु युद्ध-मुख में देखना कठिन है,
पलायकों के यहाँ देख सकते हैं ।
मम कूडलसंगमदेव के शरण धीर हैं
शेष सभी भीरु हैं ॥
Translated by: Banakara K Gowdappa
English Translation Everybody is brave and resolute,
Everybody a glorious one,
Everybody a Pioneer!....
You cannot see them at the battle-front,
Can see them only where they run!
Our Kūḍala Saṅga's Śaraṇās
Are resolute-and all the rest
Irresolute!
Translated by: L M A Menezes, S M Angadi
Tamil Translationஅனைவரும் வீரர்கள், அனைவரும் தீரர்கள்
அனைவரும் மகிமையோர், அனைவரும் கணங்கள்
போர்முனையில் காணவியலாது
ஓடும் முகத்திலே காணலாம்
நம் கூடல சங்கனின் அடியார் தீரர்கள்
எஞ்சியோர் தீரமற்றவர்கள்
Translated by: Smt. Kalyani Venkataraman, Chennai
Telugu Translationఅందరూ వీరులే అందరూ ధీరులే
అందరూ మహిమాన్వితులే
అందరు ప్రమథులే కాని
కలహమందు కనుపింపరు
కాలికి బుద్ది చెప్పుచు కనపడుదురు
మా కూడల సంగని శరణులు ధీరులు
తక్కినవా రెల్లా ;óరులు
Translated by: Dr. Badala Ramaiah
ಕನ್ನಡ ವ್ಯಾಖ್ಯಾನಎಲ್ಲರೂ ಪ್ರಮಥರೇ-ಆದರೆ ನಮ್ಮ ಶರಣಪಂಥದವರು ನಿಜಪ್ರಮಥರು-ಎನ್ನುತ್ತ ಬಸವಣ್ಣನವರು ತಮ್ಮ ಸಮಕಾಲೀನ ಸಂಪ್ರದಾಯಸ್ಥರನ್ನೂ ಅವರ ಪ್ರತಿಗಾಮೀ ಧೋರಣೆಯನ್ನೂ ಟೀಕಿಸುತ್ತಿರುವಂತಿದೆ ಈ ವಚನದಲ್ಲಿ :
ಎಲ್ಲರೂ ವೀರರು ಧೀರರು ಮಹಿಮಾನ್ವಿತರು ಪ್ರಮಥರು ಎಂಬಂತೆ ಕಾಣುವರು. ಆದರೆ ಒಂದು ವೈಚಾರಿಕ ಪರಿಸ್ಥಿತಿಯೇರ್ಪಟ್ಟು ಕಠಿಣವಾದ ಸವಾಲುಗಳನ್ನು ಎದುರಿಸಬೇಕಾದಾಗ ನಮ್ಮ ಪ್ರಮಥರು ಮಾತ್ರ ಮುಂಚೂಣಿಯಲ್ಲಿರುವರು-ಉಳಿದವರು ಪಲಾಯನಸೂತ್ರವನ್ನು ಪಠಿಸುತ್ತ ಹಿಮ್ಮೆಟ್ಟುವರಿಗೆಲ್ಲಾ ಪ್ರಮುಖರಾಗಿರುವರು.
ವಿ : ಬಹುಶಃ ಬಸವಣ್ಣನವರು ತಮ್ಮ ಶಿವಧರ್ಮದಲ್ಲೇ ಸಂಪ್ರದಾಯಸ್ಥರಾದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ವಿಫಲರಾದರೆನಿಸುವುದು.
ಪ್ರಮಥರೆಂದರೆ ಶರಣರು-ನೋಡಿ ವಚನ 411, 328, 712. ಧೀರರೆಂದರೆ ದೈಹಿಕವಾಗಿಯೂ ಮಾನಸಿಕವಾಗಿಯೂ ಸಾಹಸಿಗಳಾದವರು. ಕಾಳಗದ ಮುಖ : ಯುದ್ಧದ ಮುಂಚೂಣಿ, ಓಡುವ ಮುಖ : ಹಿಂಚೂಣಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.