Hindi Translationरेंगते साँप से मैं नहीं डरता,
ज्वाला जिह्वा से नहीं डरता,
असि-धार से नहीं डरता,
एक से डरता हूँ, एक से काँपता हूँ;
परस्त्री, परधन-रूपी पिशाचों से डरता हूँ।
पहले रावण निर्भीक था, उसकी क्या दशा हुई?
मैं डरता हूँ कूडलसंगमदेव ॥
Translated by: Banakara K Gowdappa
English Translation I have no ear of streking snake,
Nor point of sword,nor tongue of flame:
There's one thing makes my whole heart shake;
I tremble at the hazardous game
Another's wife or wealthy may make!
In days of old,Rāvaṇa was bold,
But soon Rāvaṇa's knell was tolled:
Only to think, my heart grows cold,
O Kūḍala Saṅgama Lord !
Translated by: L M A Menezes, S M Angadi
Tamil Translationபாயும் பாம்பிற்கஞ்சேன், தீயின் நாவிற்கஞ்சேன்
கத்தியின் முனைக்கு அஞ்சேன்
ஒன்றனுக்கஞ்சுவேன், ஒன்றனுக்கு நடுங்குவேன்
பிறன்மனை, பிறர் செல்வமெனும் பிசாசிற் கஞ்சுவேன்
அஞ்சாத இராவணனே விதிக்கு ஆட்பட்டான்
கூடல சங்கமதேவனே, அஞ்சுவேன் ஐயனே.
Translated by: Smt. Kalyani Venkataraman, Chennai
Urdu Translationرینگتے دوڑتے افعی کا نہیں خوف مجھے،
میں بھڑکتے ہوئے شعلوں سے کہاں ڈرتا ہوں
سہم سکتا نہیں تلوارکی تیزی سے بھی میں
میںجو ڈرتا ہوںتودنیا میں پرائےدھن سے
میں زنِ غیرکےسائےسے بھی گھبراتاہوں
بس یہی خوف ہےان سے بہک جاؤں میں
مجھ کومعلوم ہے کیا حشر ہوا راون کا
جونہ ڈرتا تھا زمانےمیں کسی سے لیکن
آخرش ہوگیا برباد بہ ایں ناز وغرور
اس لیے کوڈلا سنگا میں بہت ڈرتا ہوں
Translated by: Hameed Almas
ಕನ್ನಡ ವ್ಯಾಖ್ಯಾನಹರಿದು ಬರುವ ಹಾವಿಗಂಜುವುದಿಲ್ಲ, ಉರಿದು ವ್ಯಾಪಿಸಿ ಬರುವ ಬೆಂಕಿಗಂಜುವುದಿಲ್ಲ, ಎದೆಗಾತುಬರುವ ಸುರಗಿಯ ಮೊನೆಗಂಜುವುದಿಲ್ಲ-ಬಸವಣ್ಣನವರು ಈ ಯಾವುದಕ್ಕೂ ಅಂಜುವುದಿಲ್ಲ-ಅವರಂಜುವುದು ಪರಸ್ತ್ರೀ ಗಮನಕ್ಕೆ ಮಾತ್ರ. ಪರಸ್ತ್ರೀಯರನ್ನು (ನಿಷಿದ್ಧಗಮನದೃಷ್ಟಿಯಿಂದ)-(ಯಮನ)ಎಮ್ಮೆಕೋಣಕ್ಕೆ ಹೋಲಿಸಿರುವರು. ಅದರತ್ತ ತಾನು ಹೋಗುವುದಾಗಲಿ, ತನ್ನತ್ತ ಅದು ಬರುವುದಾಗಲಿ ಸಾವು ಸಮೀಪಿಸಿದಂತೆಯೆ ! ಇದನ್ನು ತಿಳಿಯದ ರಾವಣನೇನಾದನೆಂಬುದನ್ನು ಬಸವಣ್ಣನವರು ಸ್ಮರಿಸಿರುವರು.
ವಿ : ಏವಿಧಿಯಾದನೆಂದರೆ ಏನುಗತಿಯಾದನೆಂದು. ಜೂಬು ಎಂಬುದಕ್ಕೆ ಒಂದು ವ್ಯಾಖ್ಯಾನದಲ್ಲಿ ಕೋರೆಹುಳು ಎಂಬರ್ಥ ಸಿಗುವುದು-ಜೂಬು ಎಂಬುದು ಜಂಬೂ (=ಆನೆ) ಎಂಬುದರ ಅಪಭ್ರಂಶವಿರಲೂಬಹುದು.
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ-ಎಂಬುದೇ ಎಲ್ಲೆಡೆಯಿರುವ ಪಾಠ. ಆದರೆ ಪರಸ್ತ್ರೀಯೆಂಬೀ ಜೂಬಿಂಗಂಜುವೆ ಎಂಬುದೇ ಸರಿಯಾದ ಪಾಠ. ಏಕೆಂದರೆ ಬಸವಣ್ಣನವರು ಅಂಜುವುದು ಅಳುಕುವುದು ಒಂದಕ್ಕೇ ಎಂದು ಹೇಳಿರುವುದನ್ನು ಗಮನಿಸಿರಿ. ಮತ್ತು ಮುನ್ನಂಜದ ರಾವಣನೇವಿಧಿಯಾದ-ಎಂದು ಕೊಟ್ಟಿರುವ ನಿದರ್ಶನ ಕೂಡ ಒಂದೇ. ರಾವಣನು ಕುಖ್ಯಾತನಾಗಿರುವುದು ಪರಸ್ತ್ರೀಗಮನ ಒಂದಕ್ಕೆ ಮಾತ್ರ-ಪರಧನಲೋಭಕ್ಕಾಗಿಯಲ್ಲವೆಂಬುದು ಪ್ರಸಿದ್ಧವೇ ಇದೆ. ಆದರೂ “ಒಂದಕ್ಕಂಜುವೆನೊಂದಕ್ಕಳುಕುವೆನೆಂಬ ವಚನ ಪಾಠವನ್ನು-ಒಂದಕ್ಕಂಜುತ್ತೇನೆ ಇನ್ನೊಂದಕ್ಕಳುಕುತ್ತೇನೆ ಎಂಬಂತೆ ತಪ್ಪಾಗಿ ಗ್ರಹಿಸಿ “ಪರಧನ” ಪಾಠವನ್ನು ಅಧಿಕವಾಗಿ ಯಾವನೋ ಪ್ರಕ್ಷೇಪಿಸಿರುವನು. ವಚನದ ಕೊನೆಗೆ ಅಂಜುವೆನಯ್ಯ ಎಂಬುದು ಮಾತ್ರವಿದ್ದು-ಅದರ ಸಮಾನಾರ್ಥಕವಾದ ಅಳುಕುವೆನೆಂಬುದನ್ನು ಪುನರಾವರ್ತಿಸದಿರುವುದನ್ನೂ ಗಮನಿಸಿ.
ರಾವಣನು ಶಿವಭಕ್ತನೇ ಆದರೂ ಅವನನ್ನು ಶಿವನು ರಕ್ಷಿಸಲಿಲ್ಲ-ಪರಸತೀಕಾಮವು ಅವನನ್ನು ಹಾವಾಗಿ ಉರಿಯಾಗಿ ಸುರಗಿಯಾಗಿ ಕೊಂದಿತು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.