Hindi Translationएक की दस सुनाकर, आँखे लाल कर
वीरावेश से ‘भुजास्फालन’ देख
मैं डर जाता हूँ, पीछे हट जाता हूँ ।
मेरे भागने से अपमान हो तो,
मम कूडलसंगमदेव के शरणों के अननुभावियों की क्षेत्र सीमा में
ना रहुँगा, वहाँ से भाग जाऊँगा॥
Translated by: Banakara K Gowdappa
English Translation At sight of those who talk
Protesting for too much,
Roll their eyes red and strike
A hero’s pose, pugnaciously talk tall,
I tremble and retreat !
Let the disgrace of flight come if it will;
If I am close to the boundary
Of those who lack experience
Of our Kūḍala Saṅga’s Śaraṇaś
I leave my plot and run !
Translated by: L M A Menezes, S M Angadi
Tamil Translationஒன்றனுக்கு ஒன்பதை உரைத்து
கண்களைச் சிவக்க வைத்து, வீர உரைகளை
உரைத்து, அழிக்க எண்ணி, கூக்குரல்
இடுவோரைக் கண்டு அஞ்சுவேன், பின்னடைவேன்
ஓடினேன் எனும் பங்கம் வரினும் வரட்டும்
நம் கூடல சங்கனின் அடியாரை அறியாதோரின்
எல்லையை அடையேன், அங்கிருந்து ஓடுவேன்.
Translated by: Smt. Kalyani Venkataraman, Chennai
Telugu Translationఒకటికి పదివాగి కనులెర్రచేసి
మగటిమి జూపి చెనకి పేలెడివారల చూడ
వెఱతునయ్యా వెనుకంజ వేతునయ్యా
పాఱుబోతని పలికిన పరుల పలుకనీ
కూడల సంగని శరణుల అనుభావము లేని
వారి పొలిమేర దొక్కిన తొలుగునయ్యా నా పట్టు
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಮಾಹೇಶ್ವರಸ್ಥಲ
ಶಬ್ದಾರ್ಥಗಳುಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಓಸರಿಸು = ; ಕೆಂಚನೆ = ; ಕೆಲೆ = ; ಭಂಗ = ; ಮುಡು = ; ಹೊಂದೆ = ;
ಕನ್ನಡ ವ್ಯಾಖ್ಯಾನಶಿವಶರಣರ ಸಂಗ ಮತ್ತು ಪ್ರಸಂಗದಿಂದ ಶಿವಾನುಭಾವವನ್ನು ಸಂಪಾದಿಸದೆ-ಸಂಪಾದಿಸಬೇಕೆಂಬ ಹಂಬಲವೂ ಇಲ್ಲದೆ-ಏನೂ ತಿಳಿಯದೆ ಕೇವಲ ಖಂಡನೆ ಮಾಡುವ ಆತುರದಲ್ಲಿ ಒಂದು ಮಾತನಾಡಬೇಕಾದೆಡೆ ಒಂಭತ್ತು ಮಾತನಾಡುತ್ತ, ಯಾರಾದರೂ ತಿದ್ದಲು ಬಂದರೆ ಕಣ್ಣನ್ನು ಕೆಂಪಗೆ ಮಾಡುತ್ತ, ಮೈಯುಬ್ಬಿಸಿ ಮೀಸೆ ತಿರುವುತ್ತ, ಪ್ರತಿಜ್ಞೆಗಳನ್ನು ಮಾಡಿ ಷರತ್ತುಗಳನ್ನು ಹಾಕುತ್ತ, ತನ್ನ ತಲೆಯ ಮೇಲಿನ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆಸೆದು-ವಿದ್ವಾಂಸನಾದರೆ ಅದನ್ನು ಮೊದಲು ಮೇಲೆತ್ತು ನೋಡೋಣ-ಆಮೇಲೆ ನನ್ನೊಡನೆ ವಾದಮಾಡುವೆಯೆನ್ನುತ್ತ, ಆಹಾಕಾರವೆಬ್ಬಿಸಿ ಹಾರಾಡುವ ಅಸಭ್ಯನೊಡನೆ ತಾವೆಂದಿಗೂ ವಾದಕ್ಕಿಳಿಯುವುದಿಲ್ಲವೆನ್ನುತ್ತಿರುವರು ಬಸವಣ್ಣನವರು. ಮತ್ತೆ ಮುಂದುವರಿದು-ಆ ಜಾಗವನ್ನೇ ಬಿಟ್ಟುಹೋಗುತ್ತೇನೆ, ವಾದ ಮಾಡಲಾರದೆ ಅಂಜಿಹೋದನೆಂದು ಜನರಾಡಿಕೊಳ್ಳಲಿ. ಅವಮಾನವಾಗಲಿ-ವಿತಂಡವಾದಿಗಳನ್ನು ಕಂಡರೆ ತಮಗೆ ನಿಜವಾಗಿಯೂ ಅಂಜಿಕೆಯೆನ್ನುತ್ತ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿರುವರು. ಮತ್ತೊಮ್ಮೆ ಆ ದುರ್ವಿದಗ್ಧರ ಆಸುಪಾಸಿನಲ್ಲೂ ಅಡ್ಡಾಡುವುದಿಲ್ಲವೆನ್ನುತ್ತಿರುವರು.
ಬಸವಣ್ಣನವರು ಮಿಕ್ಕ ಆಚಾರ್ಯರಂತೆ ವಾದ ಮಾಡಿ ಸಿದ್ಧಾಂತವನ್ನು ಸ್ಥಾಪಿಸಿದವರಲ್ಲ-ಜನರ ಹೃದಯಪರಿವರ್ತನೆ ಮಾಡಿ ಸಮಾಜವನ್ನು ಕಟ್ಟಿದವರು. ಅವರು -750ನೇ ವಚನದಿಂದ ಮತ್ತು 531ನೇ ವಚನದಿಂದ ತಿಳಿದುಬರುವಂತೆ-ಮೀಮಾಂಸಕನೊಬ್ಬನೊಡನೆ ಒಮ್ಮೆ ವಾದ ಮಾಡಿದ್ದುಂಟು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.