ಒಡೆಯರಾಡುವ ಮಾತ ಕಡೆ ಪರಿಯಂತರ ಕೇಳಿ,
ಇದಿರು ಹೋಗಿ ಕಿಂಕರನಾಗಿ ಬಿನ್ನಹವ ಮಾಡುವ
ಸದ್ಭಕ್ತರ ತೋರಯ್ಯಾ!
ಒಡೆಯರಾಡುವ ಮಾತ ಕಂಡು, ಕರೆವಲ್ಲಿ ಕೆಡೆಮೆಟ್ಟಿ
ಬಾಯಿ ಘನವೆಂದು ಆಡುವವನ ತೋರದಿರಯ್ಯಾ,
ಅವನ ಸಂಗದಲ್ಲಿರಿಸದಿರಯ್ಯಾ,
ಅವನ ಸಹಪಂಕ್ತಿಯಲ್ಲಿ ಕುಳ್ಳಿರಿಸದಿರಯ್ಯಾ!
ಕೂಡಲಸಂಗಮದೇವಯ್ಯಾ, ನಿಮ್ಮ ಬೇಡುವುದೊಂದೇ ವರವು.
Hindi Translationप्रभुओं की बातें अंत तक सुनकर
विनम्रता से आगे बढ विनती करनेवाले
सद्भक्त दिखा दो स्वामी;
प्रभुओं की बातें सुन, उनकी पुकार अनसुनी करनेवाले
मुँहजोर वाचाल मत दिखाओ;
उसके संग में मत रखो;
उसकी पंक्ति में मुझे बैठने न दो;
कूडलसंगमदेव, तुमसे यही वर माँगता हूँ ॥
Translated by: Banakara K Gowdappa
English Translation Show me, O Lord, such as
Obey the Masters, word until the end;
Who, in humility, go out
To meet them and entreat!
But show me not, O Lord,
The man who, thinking that his mouth
Is big, talks loud as if to drown
The masters' word when they,
At sight of one, should call!
Do not, Lord, place me in his company;
Let me not sit, O Lord,
In the same row as he.
This is the one gift, pray,
I beg of Thee,
Kūḍala Saṅgama Lord!
Translated by: L M A Menezes, S M Angadi
Tamil Translationஉடையர் கூறும் உரையை இறுதிவரை கேண்மின்
எதிரில் சென்று, தொண்டனாக நடுங்கி
விண்ணப்பிக்கும் நல்ல பக்தனை காட்டுவீர்
உடையர் கூறும் உரையைக் கண்டு அழைக்கும்
பொழுது வீழ்த்தி, மிதித்து செருக்குற்று
உரைப்போனைக் காட்டது இருப்பாய்
அவன் தொடர்பில் வைக்காதீர் ஐயனே
அவனுடன் பந்தியில் அமர்த்தாதீர் ஐயனே!
கூடல சங்கம தேவனே, உம்மிடம்
இந்த ஒரு வரத்தையே வேண்டுகிறேன்.
Translated by: Smt. Kalyani Venkataraman, Chennai
Telugu Translationఒడయు లాడెడిమాట తుదిదాక ఆలించి
ఎదురేగి కింకరుడై విన్నప మొనరించు
సద్భక్తుల చూపుమయ్యా
ఒడయు లాడెడిమాట వినక పిలిచిన
చెలరేగి గళము ఘనమంచు
వాగువానిని చూపింపకయ్యా
వారిమధ్య నన్ను పడవేయకయ్యా
కూర్చొన చేయకయ్య వారి మధ్య
ఈ వరమొక్కటే నిను గోరెద
కూడల సంగమదేవా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಜಂಗಮರಾಡುವ ಮಾತನ್ನು ದೂರದಿಂದ ಪೂರ್ತಿ ಕೇಳಿ ಬಳಿ ಹೋಗಿ ಹೇಳುವುದನ್ನು ಬಿನ್ನೈಸಿಕೊಳ್ಳಬೇಕು. ಶರಣರು ಕಂಡು ಕರೆದರೆ ದೂರ ಹೋಗುತ್ತ ಬಾಯಿಜೋರು ಮಾಡುವನನ್ನು ನನಗೆ ತೋರಿಸಬೇಡ, ನನ್ನನ್ನು ಅವನ ಸಂಗದಲ್ಲಿರಿಸಬೇಡ, ಅವನ ಸಹಪಂಕ್ತಿಯಲ್ಲಿ ಕುಳ್ಳಿರಿಸಬೇಡ-ಎಲೇ ಶಿವನೇ ನಿನ್ನನ್ನು ನಾನು ಬೇಡುವುದಿದೊಂದೇ ವರವನ್ನು-ಎಂಬುದು ಈ ವಚನದ ಸರಳಾನುವಾದ.
ಈ ವಚನದಲ್ಲಿ ಇದಿರುವೋಗಿ ಕೆಡೆಮೆಟ್ಟಿ ಮುಂತಾದ ಪದಪ್ರಯೋಗ ಸರಿಯಾಗಿಲ್ಲ. ಕ್ಷುದ್ರ ಶೈಲಿಯಿಂದಲೂ ಕ್ಷುದ್ರತರ ಧೋರಣೆಯಿಂದಲೂ ಈ ವಚನ ಬಸವಣ್ಣನವರ ನಿಜವಚನವಲ್ಲವೆನ್ನಲು ಹಿಂಜರಿಯಬೇಕಾಗಿಲ್ಲ.
ಶರಣರಿಗೆ ಶಿವಭಕ್ತರು ವಿನಯವಾಗಿ ನಡೆದುಕೊಳ್ಳಬೇಕೆಂಬುದು ಬಸವಣ್ಣನವರ ಅಭಿಪ್ರಾಯವೆಂಬುದರಲ್ಲಿ ಸಂಶಯವಿಲ್ಲ. ಆದರೆ “ಶರಣರಿಗೆ ಮುಳಿಸತಾಳಿ ಎನ್ನ ಭಕ್ತಿ ಅರೆಯಾಯಿತ್ತು” (ನೋಡಿ ವಚನ 256) ಎಂಬ ಪ್ರಜ್ಞೆಯಿರುವ ಬಸವಣ್ಣನವರು-ಒಬ್ಬ ಭಕ್ತನ ಬಗೆಗೇ ಆಗಲಿ-“ಅವನ ಸಹಪಂಕ್ತಿಯಲು ಕುಳ್ಳಿರಿಸದಿರಯ್ಯ” ಎಂಬಷ್ಟು ಶಾಠ್ಯದಿಂದ ನಡೆದುಕೊಳ್ಳುವರೆಂಬುದಕ್ಕೆ ಬೇರೆ ಯಾವ ಸಾಕ್ಷಿಯೂ ಇಲ್ಲ. ಶಿವಭಕ್ತರು ನಡೆವಳಿಯಲ್ಲಿ ಕೊಂಚ ತಪ್ಪಿದಾಕ್ಷಣವೇ ಅವರನ್ನು ಬಹಿಷ್ಕರಿಸುವಂಥ ಮನೋಭಾವ ಬಸವಣ್ಣನವರಿಗಿರಲಿಲ್ಲ.
ವಚನ 237, 276 ವಚನಗಳೊಡನೆ ಈ ವಚನವನ್ನು ಹೋಲಿಸಿ ನೋಡಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.