ಭವವಿರಹಿತ ಭಕ್ತನಾದ ಬಳಿಕ,
ಭಕ್ತಿಭಾಜನದಲ್ಲಿ ಮಾಡಿ ಭವಿಗಿಕ್ಕಲಾಗದಯ್ಯಾ:
ಯುಕ್ತಿಶೂನ್ಯರಿಗೆ ಮುಂದೆ ಪ್ರಸಾದ ದೂರ!
ಮುಕ್ತಿಯಿಲ್ಲ.ಮುಂದೆ ನಾಯ ಬಸುರಲ್ಲಿ
ಬಪ್ಪುದು ತಪ್ಪದು ಪೃಥ್ವಿಯೊಳಗೆ!
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ,
ಅನಾಚಾರಕ್ಕೆಲ್ಲಿಯದೋ?
Hindi Translationभवरहित भक्त बनने के पश्चात्
भक्ति-भाजन में सिद्ध भोजन
‘भवि’ को परोसना नहीं चाहिए ।
युक्ति-शून्यों को आगे प्रसाद दूर होगा,
मुक्ति नहीं होगी
भविष्य में श्वान गर्भ से पृथ्वी पर आना अवश्यंभावी है
कूडलसंगमदेव तव शरणों के अतिरिक्त
वह अनाचारियों को कैसे मिलेगा?
Translated by: Banakara K Gowdappa
English Translation Once you are a devotee
Beyond the wheel of births,
You should not feed a wordling food
Cooked in a pious pot,
Prasāda is a long way off
To one who's empty of piety
No liberation is for him!
And such must sure return to earth
In a dog's womb.
It,s only for Thy Saints,
O Kūḍala Saṅgama Lord,:
How could it be
For them who sin?
Translated by: L M A Menezes, S M Angadi
Tamil Translationஉலகியலை விட்டு பக்தனானபின்பு
பக்தியுடன்சமைத்து, நெறியிலிக்கு ஈயலாகாது
யுக்தியற்றோருக்குத் திருவமுது தொலைவாம்
முக்தியில்லை. பிறகு பூமியிலே நாயின்
சூலில் வருவது தவறுமோ ஐயனே
கூடல சங்கமதேவனே, உம் அடியார்க்கின்றி
நெறியற்றோருக்கு ஈயலாகுமா?
பக்தனின் பிரசாதித்தலம்
Translated by: Smt. Kalyani Venkataraman, Chennai
Telugu Translationభవరహితుడు భక్తుడైన వెనుక
ఉండం భక్తి భాజనమున భవికి వండి వడ్డింపరాదు
యుక్తి శూన్యులకు ముందె
ప్రసాదములేదు ముక్తి లేదు;
ముందు కుక్కకడుపున పుట్టుట తప్పదు
కూడల సంగమదేవ! నీ శరణులకుగాక
అనాచారులకివి లేవయ్యా !
Translated by: Dr. Badala Ramaiah
ಕನ್ನಡ ವ್ಯಾಖ್ಯಾನಈ ವಚನದ ಆಶಯ ಗಂಭೀರವಾದುದಲ್ಲ-ತೀರ ಕ್ಷುದ್ರವಾದುದು. ಶಿವಭಕ್ತನ ಮನೆಯಲ್ಲಿ (ಲಿಂಗನೈವೇದ್ಯಕ್ಕಾಗಿಯೇ ಆಗಲಿ) ಮಾಡಿದ ಅಡಿಗೆಯನ್ನು ಭವಿಗೆ ನೀಡಬಾರದಂತೆ, ನೀಡಿದರೆ ಯುಕ್ತಿಶೂನ್ಯವಾದ (ಅಂದರೆ ಅನಾಚಾರದ) ಆ ನಡೆವಳಿಕೆಯಿಂದ ಪ್ರಸಾದ ಸಿದ್ಧಿಸದಾಗಿ ಮುಕ್ತಿ ದೊರೆಯುವುದಿಲ್ಲವೆಂದೂ, ಬದಲಾಗಿ ಮುಂದಿನ ಜನ್ಮದಲ್ಲಿ ನಾಯಾಗಿ ಹುಟ್ಟಬೇಕಾಗುವುದೆಂದೂ ಈ ವಚನ ಹೆದರಿಸುತ್ತಿದೆ.
“ನೀನಾವ ಮುಖದಲು ಬಂದು ಬೇಡಿದೊಡೀವೆ” (ನೋಡಿ ವಚನ-432) ಎಂದು ದಾನಕ್ಕಾಗಿ ಸದಾ ತವಕಗೊಂಡಿದ್ದ ಬಸವಣ್ಣನವರು-ಹಸಿವಿನಿಂದ ಬಳಲಿ ಬಂದು, ತಮ್ಮ ಮನೆಯ ಬಾಗಿಲಲ್ಲಿ ನಿಂತು ತುತ್ತನ್ನವನ್ನು ಕೇಳಿದವರಿಗೆ ಬರಿಹೊಟ್ಟೆಯಲ್ಲಿ ಹಿಂದಕ್ಕೆ ಕಳಿಸುವರೇನು ? ಇಂಥ ವಚನಗಳನ್ನು ಜಾತಿವಾದಿಗಳಾದ ಶಿವಭಕ್ತರು ಬರೆದು ಸೇರಿಸಿರುವರೆಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. (ಮತ್ತು ಈ ವಚನ ಭಕ್ತನ ಮಾಹೇಶ್ವರ ಎಂಬ ವಿಭಾಗದ ಕೊನೆಯದೆಂಬುದನ್ನೂ ನೆನೆಯಿರಿ).
ಯಾವನಾದರೊಬ್ಬನು ಶಿವಧರ್ಮಕ್ಕೆ ಸೇರಿ ಶಿವಭಕ್ತನಾದ ಮೇಲೆ-ಭವಿಗಳಾದ ತನ್ನ ಪೂರ್ವ ಸಂಬಂಧಿಕರಿಗೆ ತನ್ನ ಮನೆಯಲ್ಲಿ (ಭಕ್ತಿಭಾಜನದಲ್ಲಿ) ಮಾಡಿದ ಅಡಿಗೆಯನ್ನು ಇಟ್ಟು ಸತ್ಕರಿಸಬಾರದೆಂಬುದಾದರೆ-ಯುಕ್ತಿವಾದವಾಯಿತೇ ಹೊರತು-ಅದು ಬಸವಣ್ಣನವರು ಆಡಲು ಅರ್ಹವಾದ ಮಾತಾಗಲಿಲ್ಲ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.