Hindi Translationदास को शुभ-लक्षण क्यों?
दास को आचार क्यों?
दास को आगम क्यों?
अवशिष्ट प्रसाद के भोक्ता को?
तुम पर श्रद्धा रखना ही मेरा आचार है
कूडलसंगमदेव ॥
Translated by: Banakara K Gowdappa
English Translation What needs a drudge good looks?
What needs a braggart virtuous deeds?
What needs a drudge who feeds
Of what is left of offerings,
To read the Āgamas?
O Kūḍala Saṅgama Lord,
But to belive in Thee
Is virtue enough!
Translated by: L M A Menezes, S M Angadi
ಕನ್ನಡ ವ್ಯಾಖ್ಯಾನಬಸವಣ್ಣನವರ ಕಾಲದ ಸೇವಕವರ್ಗವನ್ನು ತೊತ್ತು-ಬಂಟ-ಡಿಂಗರಿಗ ಎಂದು ಮೂರು ಪಂಗಡವಾಗಿ ವಿಂಗಡಿಸಿರುವುದನ್ನು ಈ ವಚನದಲ್ಲಿ ಕಾಣಬಹುದು.
ತೊತ್ತು ಎಂದರೆ ಗುಲಾಮ-ಅವನಿಗೆ ಅಥವಾ ಅವಳಿಗೆ ಸಿಂಗಾರವಾಗಿರಲು ಸಾಧ್ಯವಿರಲಿಲ್ಲ. ಅವರು ತಲೆ ಬೋಳಿಸಿಕೊಂಡಿರಬೇಕಾಗಿತ್ತು. ಬಂಟನೆಂದರೆ ತೊತ್ತಿಗಿಂತಲೂ ಮೇಲಾದ ಒಬ್ಬ ಸೇವಕ. ಅವನು ಯಜಮಾನನ ಕೆಲಸಗಳನ್ನು ಹೋರಾಟ ಮಾಡಿಯಾದರೂ ನೆರವೇರಿಸಿಕೊಡಬೇಕಾಗಿತ್ತು. ಅವನಿಗೆ ಆಚಾರವನ್ನು ನಿಯತವಾಗಿ ಮಾಡಲಾಗುತ್ತಿರಲಿಲ್ಲ. ಇವರಿಬ್ಬರಿಗಿಂತಲೂ ಕೀಳಾಗಿ ಸ್ವಾಮಿಯ ಮನೆಯ ಬಾಗಿಲನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದವನು ಡಿಂಗರಿಗ. ಇವನಿಗೆ ಪೂಜಾದಿಗಳನ್ನು ಆಗಮಾನುಸಾರವಾಗಿ ಮಾಡಲಾಗುತ್ತಿರಲಿಲ್ಲ. ಆದರೇನು ಈ ತೊತ್ತು ಬಂಟ ಡಿಂಗರಿಗರು ಶಿವಶರಣರ ಮನೆಯಲ್ಲಿ ಸೇವೆ ಮಾಡುತ್ತ ಅವರು ಬಿಟ್ಟ ಅನ್ನಪ್ರಸಾದವನ್ನು ಉಂಡುಕೊಂಡಿದ್ದರೆ ಸಾಕು ದೇವರೊಲಿಯುವನು ಮುಕ್ತಿ ದೊರೆಯುವುದೆಂಬುದು ಬಸವಣ್ಣನವರು ಅವರಿಗೆ ಕೊಟ್ಟ ಆಶ್ವಾಸನೆ.
ಈ ತೊತ್ತು ಮುಂತಾದ ದಲಿತರನ್ನು ಶಿವಧರ್ಮೇತರವೈದಿಕರು ಮನೆಗೆ ಸೇರಿಸುತ್ತಿರಲಿಲ್ಲ. ಅವರಿಗೆ ಉದ್ಯೋಗವನ್ನು ಕೊಡುತ್ತಿರಲಿಲ್ಲ. ಹೀಗಾಗಿ ದಲಿತರ ಮಾನಮರ್ಯಾದೆ ಸೊನ್ನೆಯಾಗಿ, ನಿತ್ಯಜೀವನ ದುರ್ಭರವಾಗಿತ್ತು. ಆಗ ಶಿವಶರಣರು ಅವರನ್ನು ತಮ್ಮ ಮನೆಗೆಲಸಕ್ಕೆ ನೇಮಿಸಿಕೊಂಡರು. ಈ ರೀತಿಯ ಔದಾರ್ಯ ಕ್ರಿ.ಶ. 1930 ರಷ್ಟು ಇತ್ತೀಚೆಗೂ ಭಾರತದಲ್ಲಿ ಸಾಧ್ಯವಿರಲಿಲ್ಲವೆಂಬುದು ಡಾ. ಅಂಬೇಡ್ಕರರ ಜೀವನಚರಿತ್ರೆಯಿಂದ ತಿಳಿದುಬರುವುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.