Hindi Translationअष्टदल कमल का परिक्रामक
जीवात्मा को कुचले हुए दल को न जानने पर
अपने को भक्त कैसे कहूँ?
अपने को शरण कैसे कहूँ?
अपने को “लिंगैक्य” कैसे कहूँ?
मेरा मन शांत न होने तक
कूडलसंगमदेव।
Translated by: Banakara K Gowdappa
English Translation In ignorance of the power
That has trampled on my soul
Which round the eight-leaved lotus flits,
How can I claim to be
A devotee?
How can I claim to be
A Śaraṇa ?
How can I claim
The consubstantial unity
With God, unless,
O Kūḍala Saṅgama Lord,
My spirit is serene?
Translated by: L M A Menezes, S M Angadi
Tamil Translationஎட்டு தள தாமரையைச் சுற்றும் ஜீவான்மாவை
அடையும் தளத்தை அறியாமல்
நான் எங்ஙனம் பக்தனாவேன்?
நான் எங்ஙனம் சரணனாவேன்?
நான் இலிங்கத்துடனொன்றியவனாவேன்?
கூடல சங்கம தேவனே, எம்மனம்
அமைதியை எய்தும் வரையில் ஐயனே.
Translated by: Smt. Kalyani Venkataraman, Chennai
Telugu Translationఅష్టదళకమలము జుట్టుచు జీవాత్ముడు
దొక్కెడి దళము తెలియకున్న
నేనెట్టి భక్తుడయ్యా? నేనెట్టి శరణుడయ్యా
లింగై క్యుడగుట నే నెట్ల య్యా?
సంగా నా మది కుదుటబడకుండెనేని
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಪ್ರಾಣಲಿಂಗಿ ಸ್ಥಲವಿಷಯ -
ಮೂಢತೆ
ಶಬ್ದಾರ್ಥಗಳುಎಂತೆಂಬೆ = ; ಜೀವಾತ್ಮ = ;
ಕನ್ನಡ ವ್ಯಾಖ್ಯಾನಅಯ್ಯ, ಜೀವನು ಕರ್ಮವಶದಿಂದ ಈ ತನುಮಧ್ಯ ಕಮಲದಲ್ಲಿ ಸುಳಿದಾಡುವಾಗ-ಅವನಿಗೆ ಮನವೇ ರಥ, ಅದನ್ನು ಅವನು ಏರಿ-ದಿಕ್ಕಿಗೊಂದೊಂದರಂತೆ ಇರುವ ಆ ಕಮಲ ದಳಗಳ ಮೇಲೆ ಸಂಚರಿಸಿದಂತೆಲ್ಲಾ-ಆಯಾ ದಳಕ್ಕೆ ನಿಯುಕ್ತವಾದ ಫಲಗಳನ್ನು ಅನುಭವಿಸುತ್ತಿರುವನು. ಈ ಮುಂದಿನ ವೇದವಾಕ್ಯವನ್ನು ಗಮನಿಸು-“ಪೂರ್ವೇ ಭುಕ್ತಿಃ, ಕ್ಷುಧಾಗ್ನೇಯೇ, ಯಾಮೇ ಕೋಪಸ್ತು, ನೈರುತೇ | ಪಾಪಧೀ:, ವಾರುಣೇ ಲೀಲಾ, ವಾಯವ್ಯೇ ಗಮನಂ ತಥಾ | ಉತ್ತರೇ ಸುರತಂ ಚೈವ ಧನದಾನಂ ತಥಾಪರೇ” (2-4-3). ಹೀಗೆ ಜೀವನು ಮನದ ರಥವೇರಿ ಹೃದಯಪದ್ಮದ ಒಂದು ದಳದಿಂದ ಇನ್ನೊಂದು ದಳಕ್ಕೆ ಅಲೆಯುತ್ತಿದ್ದರೆ ಅಲ್ಲಲ್ಲಿಗೆ ಭುಕ್ತಿ ಕ್ಷುಧೆ ಕೋಪ ಪಾಪ ಲೀಲೆ ಗಮನ ಸುರತ ಧನದಾನ ಎಂಬ ಕರ್ಮಗಳನ್ನು ಅನುಭವಿಸುತ್ತಲೇ ಇರುವನು (2 4 4). ಹೀಗೆ ಈ ಕರ್ಮದ ದಳಗಳ ಮೇಲೆ ಸಂಚರಿಸುವುದನ್ನು ಬಿಟ್ಟು, ಅದೇ ಕಮಲದ ನಡುವಲಯ (ಕರ್ಣಿಕಾ)ಕ್ಕೆ ಕಾಲಿಟ್ಟು ನಿಂತರೆ-ಆ ಒಡನೆಯೇ ಅವನಿಗೆ ವಿರತಿ ಮತ್ತು ಜ್ಞಾನ ಉಂಟಾಗುವುದೆಂಬುದು ಶ್ರುತಿಸಿದ್ಧವಾದ ಮಾತು (2-4-5) ನೋಡಿ ನಿಜಗುಣ ಶಿವಯೋಗಿಯ ಅನುಭವಸಾರದ ಸರಳಾನುವಾದ ಡಾ. ಎಲ್. ಬಸವರಾಜು ಅವರಿಂದ.
ಯೋಗಶಾಸ್ತ್ರದ ಪ್ರಕಾರ ಹೃದಯಸ್ಥಾನದಲ್ಲಿರುವುದು ಅನಾಹತ ಚಕ್ರ. ಆ ಸ್ಥಾನದ ಕಮಲದ ಹನ್ನೆರಡು ದಳಗಳಲ್ಲಿ ಎಂಟು ದಳ ಅಧೋಮುಖವಾಗಿರುವುದು. ಇನ್ನು ನಾಲ್ಕು ದಳ ಊರ್ಧ್ವಮುಖವಾಗಿರುವುದು. ಅಧೋಮುಖದಲ್ಲಿ ಜೀವನೂ ಊರ್ಧ್ವಮುಖದಲ್ಲಿ ಈಶ್ವರನೂ ಇರುವರೆಂಬುದು ಇನ್ನೊಂದು ಕಲ್ಪನೆ-“ದ್ವೌ ಸುಪರ್ಣೌ ಶರೀರೇಸ್ಮಿನ್ ಜೇವೇಶಾಖ್ಯೌ ಸಹಸ್ಥಿತೌ | ತಯೋರ್ಜೀವಃ ಫಲಂ ಭುಂಕ್ತೇ ಕರ್ಮಣೋ ನ ಮಹೇಶ್ವರಃ.”
ಈ ಮುಂತಾದ ಯೋಗ ವಿಚಾರವನ್ನು ತಿಳಿಯದೆ ಯಾವನೂ ಭಕ್ತನೆನಿಸಲಾರ. ಮುಂದೆ ಶರಣನೆನಿಸಲಾರ. ಅಲ್ಲಿಂದ ಮುಂದೆ ಲಿಂಗೈಕ್ಯನೆನಿಸಲಾರ. ಈ ಭಕ್ತ-ಶರಣ-ಲಿಂಗೈಕ್ಯವೆಂಬ ಅಧಿಮಾನಸಸ್ಥಿತಿಗೇರಲು-ಮೂಲತಃ ಈ ಅಧೋಮನ ಊರ್ಧ್ವಮುಖವಾಗಿ ಸದಾಚಾರದಲ್ಲಿ ಪ್ರವೇಶಿಸಿ ಸಮಧಾತುಸ್ಥಿತಿಗೆ ಬರಬೇಕೆಂಬುದು ಈ ವಚನದ ಅಭಿಪ್ರಾಯ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.