Hindi Translationकाय-संग से निस्संग हूँ और कोई संग नहीं जानता ।
मैं अधिक अनुरक्त हूँ बिछुड नहीं सकता
हसन्मुखी महाप्रभो ध्यान दो, मैं तव मन चीरकर
समा जाऊँगा कूडलसंगमदेव ॥
Translated by: Banakara K Gowdappa
English Translation E'er since the fellowship of Desire has ceased,
I've known no other fellowship, O Lord!
Now that I've loved Thee so, parting is hard:
Hearken to me, O King of the smiling face,
O Kūḍala Saṅgama Lord,
I'll break Thy heart and enter it!
Translated by: L M A Menezes, S M Angadi
Tamil Translationஉடல் தொடர்பற்று, இன்னும் வேறு எந்தத்
தொடர்பையும் அறியேன் ஐயனே
மிகவும் விரும்புவதால் அகல மாட்டேன்
முறுவல் முகம் கொண்ட அரசனே, உடையனே.
கூடல சங்கம தேவனே, உம் மனத்தை
நான் உம் மனத்தைக் கிழித்துக்
கொண்டு செல்வேன் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಬಸವಣ್ಣನವರು ತಮ್ಮ ಕುಟುಂಬ ಜೀವನದ ಯಾವುದೋ ಒಂದು ಘಟ್ಟದಲ್ಲಿ ಕಾಮಸಂಗವನ್ನು ತ್ಯಜಿಸಿ ಸಂಪೂರ್ಣ ಬ್ರಹ್ಮಚರ್ಯವನ್ನು ಕೈಗೊಂಡರೆಂದು ಊಹಿಸಲು ಈ ವಚನದ-“ಕಾಮಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆ”ನೆಂಬ ಮಾತು ಆಧಾರವಾಗಬಲ್ಲುದು.
ಬರಬರುತ್ತ ಅವರ ಶಿವನೊಡತಣ ಅಧ್ಯಾತ್ಮಿಕ ಸಂಬಂಧಗಳು ಗಾಢವಾಗಿ-ಅವರಿಗೆ ತಮ್ಮ ಹೆಂಡತಿಯರಿಬ್ಬರನ್ನೂ ಕಾಮದೃಷ್ಟಿಯಿಂದ ಕಾಣುವ ಪ್ರವೃತ್ತಿಯೇ ಇಲ್ಲವಾಯಿತು. ಬದಲಾಗಿ ಶಿವನನ್ನು ಅಗಲಿ ಬದುಕಿರಲಾರೆನೆಂಬಷ್ಟು ವಿಕಳಾವಸ್ಥೆಯಲ್ಲಿ ಅವರು ಇರತೊಡಗಿದರು. ತಮ್ಮ ಧ್ಯಾನನೇತ್ರದ ಮುಂದೆ ರೂಪುಗೊಳ್ಳುತ್ತಿದ್ದ ಶಿವನ ಚೆಲುವನ್ನು ನಿಚ್ಚಳವಾಗಿ ಕಂಡ ಮೇಲೆ ಅವರಿಗೆ ಲೌಕಿಕ ರೂಪಸೀರೂಪಗಳೆಲ್ಲ ನಿಸ್ತೇಜವಾಗತೊಡಗಿದವು. ಆಗ ಅವರಿಗೆ ಬಹಿರ್ಮುಖವು ಬೇಡವಾಗಿ-ಅಂತರ್ಮುಖದಲ್ಲಿ ಸಮ್ಮುಖನೂ ಸುಮುಖನೂ ಆಗಿದ್ದ ಶಿವನ ಪ್ರೇಮಸುಮನರಾಶಿಯನ್ನು ಬಗಿದು ಅದರಲ್ಲೇ ಒಂದಾದರು.
ಆಗೀಗ ಆ ಶಿವಸಮಾಧಿಯಿಂದ ಹೊರಬರುತ್ತಿದ್ದರಾದರೂ ಅವರಿಗೆ ಆ ಹೆಂಡತಿಯರು ಜೋಡಿ ಪಾರ್ವತಿಯರಂತೆ ಕಾಣುತ್ತಿದ್ದರಾಗಬಹುದು. ಹರಿಹರನ ಪ್ರಕಾರವಾಗಿಯಾದರೋ-ಬಸವಣ್ಣನವರು ತಮ್ಮ ಸತಿ ನೀಲಲೋಚನೆ(ಮಾಯಿದೇವಿ)ಯರನ್ನಂತೂ ಒಂದು ನಿರ್ದಿಷ್ಟ ಸಂದರ್ಭದಿಂದಾಚೆಗೆ “ತಾಯಿ” ಎಂದು ಕರೆದುದಾಗಿ ತಿಳಿದು ಬರುವುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.