Hindi Translationसिर मुंड़ाकर पुरुष-सेवक बनती हूँ
लाज छोडकर भी लिंगदेव को प्रसन्न करती हूँ
व्रीडा छोडकर भी लिंगदेव को प्रसन्न करती हूँ
पडोस के पारिवारिक लोग चाहे हँसे;
कूडलसंगमदेव मैं तव शरण आयी हूँ ॥
Translated by: Banakara K Gowdappa
English Translation Shaving my head, I turn
Into a serving-man!
Even by losing all my shame, I draw
Liṅga to me!
Even by ceasing to be coy, I draw
Liṅga to me!
Let worldings round about
Make me their laughing-stock;
To Thee I do surrender me,
O Kūḍala Saṅgama Lord!
Translated by: L M A Menezes, S M Angadi
Tamil Translationதலையை மழித்து, ஆண் தொண்டனாகச்
சென்றேன் ஐயனே, நாணம் கெட்டாவது
இலிங்கத்தை விரும்புவேன் ஐயனே
நாணம் கெட்டாவது இலிங்கத்தை நயப்பேன்
உலகியலில் உள்ள சிலர் நகைக்கட்டும்
கூடல சங்கம தேவனே
தஞ்சம் அடைந்துள்ளேன் ஐயனே.
Translated by: Smt. Kalyani Venkataraman, Chennai
Telugu Translationతల బోడిరచుకొని మగదాసినై నినుగొల్తు
సిగ్గు చెడినా శివా ! నిన్నే వలతు
నాన చచ్చినా ప్రభూ! నిన్నే వలతు
సరి సంసారులెల్ల నవ్విన నవ్విపోనీ
సంగా నీ శరణుల గతినే బోదునయ్య:
Translated by: Dr. Badala Ramaiah
ಕನ್ನಡ ವ್ಯಾಖ್ಯಾನಕೂಡಲ ಸಂಗಮಕ್ಕೆ ಬರುವ ಮುನ್ನ ಬಾಗೇವಾಡಿಯಲ್ಲಿದ್ದ ಹದಿನಾರು ವರ್ಷದ ಹರೆಯದ ಬಸವಣ್ಣನವರ ಒಂದು ಭಕ್ತಿವರ್ಣಚಿತ್ರವನ್ನು ಹರಿಹರನು ಕೊಡುತ್ತ-ಶಿವಪ್ರಸಾದವನ್ನು ಹೊತ್ತು ನಿತ್ತರಿಸುವರು ಎಂಬಂತಿದ್ದ ಅವರ ಬಟ್ಟದುರುಬನ್ನು ಮೊದಲು ವರ್ಣಿಸಿರುವನು. ತಲೆಯಲ್ಲಿ ಮೇಲ್ಮುಖವಾಗಿ ಕಟ್ಟಿದ ಆ ತುರುಬಿನಲ್ಲಿ ಮಲ್ಲಿಗೆ ಮೊಲ್ಲೆ ಜಾಜಿ ಕೇತಕಿ ಮುಂತಾದ ಹೂಗಳನ್ನು ಅಳವಡಿಸಲಾಗಿತ್ತು, ಅದರೊತ್ತಿಗೇ ರುದ್ರಾಕ್ಷಿಯ ಮಾಲೆ ತುರುಬನ್ನು ಸುತ್ತಿತ್ತು. ಆ ತುರುಬಿನಿಂದ ಕೆಳಗೆ ಮುಂಗುರುಳು ಕೆಲವು ಜಾರಿ ಹಣೆಯ ಮೇಲೆ ನಲಿದಾಡುತ್ತಿದ್ದವು ಎಂದು ಮುಂತಾಗಿ ವರ್ಣನೆ ಮಾಡಿರುವನು.
ಬಸವಣ್ಣನವರು ಕೂಡಲಸಂಗಮಕ್ಕೆ ಬಂದಾಗ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುವುದಕ್ಕೆ ಸಂಕೇತವಾಗಿ ಆ ತಮ್ಮ ಕೇಶರಾಶಿಯನ್ನೇ ಕತ್ತರಿಸಿ ಸಂಗಮೇಶ್ವರನಿಗೆ ಮುಡಿಪಿಟ್ಟಿರಬೇಕು. ಬಸವಣ್ಣನವರ ಈ ಬೋಳು (ನೋಡಿ ವಚನ 358) ಕಲ್ಯಾಣದಲ್ಲಿ ಕೇಶಾಲಂಕಾರಪ್ರಿಯರಾದ ಕೆಲವು ಸಂಸಾರಿಗಳಿಗೆ ನಗೆಯನ್ನು ತಂದಿರಬಹುದು. ಆದರೇನು ತ್ಯಾಗದ ಮತ್ತು ಕೈಂಕರ್ಯದ ಚಿಹ್ನೆಯಾಗಿ ತಾವು ಕೈಗೊಂಡ ಆ ವೇಷಕ್ಕಾಗಿ ತಾವು ಗೇಲಿಗೊಳಗಾದರೂ ಸರಿಯೆ-ಅದೇ ರೂಪದಲ್ಲಿ ತಮ್ಮ ಭಂಡಾರಿತನವನ್ನೂ ನಡೆಸಲು ನಿಷ್ಕರ್ಷಿಸಿರಬೇಕು-ಬಸವಣ್ಣನವರು.
ಸಮಕಾಲೀನ ಸಮಾಜದಲ್ಲಿ ತಮಗಾದ ಅವಮಾನವನ್ನೂ ಬಸವಣ್ಣನವರು ಅಭಿಮಾನದಿಂದಲೇ ಕಾವ್ಯಮಯವಾಗಿ ಹೇಳುತ್ತಿರುವರು. ಶಿವನಿಗೆ ಶರಣಾಗತರಾದ ಮೇಲೆ ವ್ಯಕ್ತಿಗತವಾದ ಮಾನ ಅವಮಾನ ವಿಭಾವಕ್ಕೆ ಆಸ್ಪದವೆಲ್ಲಿದೆ ಶಿವಶರಣರಿಗೆ ?!
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.