Hindi Translationघड़े में शक्कर भरकर
बाहर चाटने से स्वाद मिलेगा?
गाढालिंगन से लिंगदेव का स्पर्श न कर
हाय, जीवन व्यर्थ चला गया।
वह कैसे भक्ति है? कैसी युक्ति है?
आ मिलो कूडलसंगमदेव ॥
Translated by: Banakara K Gowdappa
English Translation Suppose you fill a pot
With sugar and lick it outwardly,
Would it taste sweet?
Unless you hold the Liṅga
And hug it round and round,
Alas, this world is gone in vain!
What sort of piety is it?
What sort of discipline?
O Kūḍala Saṅgama Lord,
Come, come, into my heart!
Translated by: L M A Menezes, S M Angadi
Tamil Translationசர்க்கரையை குடத்தில் நிறைத்து
புறத்திலே சுவைத்தால் சுவைக்குமோ?
தோளில் அணைத்து இலிங்கத்தை உணராமல்
அடடா வாழ்க்கை வீணாயிற்று அன்றோ
அது எத்தகைய பக்தி? அது எத்தகைய யுக்தி?
கூடிக் கொள்வாய், கூடல சங்கம தேவனே.
Translated by: Smt. Kalyani Venkataraman, Chennai
Telugu Translationపాత్ర నిండుగ చక్కెర నింపి
పై పై రుచిచూడ ఫలమున్నదే?
శివుని చేతులార కౌగిలింపక
కటా! సంసారము వృథాపోయె కదరా!
అది యెట్టి భక్తి యో! అది యెట్టి యుక్తి యో!
కూడుకొనుమా కూడల సంగమదేవుని.Translated by: Dr. Badala Ramaiah
ಕನ್ನಡ ವ್ಯಾಖ್ಯಾನಕೊಡದ ಒಳಗೆ ಸಕ್ಕರೆಯನ್ನು ತುಂಬಿಟ್ಟು ಹೊರಗಿಂದ ಆ ಕೊಡವನ್ನು ನೆಕ್ಕಿದರೆ ಆ ಸಕ್ಕರೆಯ ಸ್ವಾದ ಹತ್ತುವುದೇ ? ಶಿವಲಿಂಗವಿರುವ ಗುಡಿಯನ್ನು ಸುತ್ತಿ ಆ ಗುಡಿಗೆ ನಮಸ್ಕರಿಸಿದರೆ ಸಾಕೆ ? ಅದೇತರ ಭಕ್ತಿ ? ಶಿವಲಿಂಗವನ್ನು ತೋಳುಚಾಚಿ ಭುಜತುಂಬಿ ತಬ್ಬಿ ಆದ ಸ್ಪರ್ಶಸುಖದಿಂದ ಐಕ್ಯಾನಂದವನ್ನು ಆಸ್ವಾದಿಸಬೇಕು. ಇಲ್ಲದಿದ್ದರೆ ಅದೇತರ ಭಕ್ತಿ ? ಇದನ್ನು ತಿಳಿಯದ ನನ್ನ ಜೀವನ ವ್ಯರ್ಥವಾಯಿತು. ಎಲೆ ಶಿವನೇ ನೀನೇ ನನ್ನನ್ನು ನಡೆಸಿಕೋ ಕೂಡಿಕೋ ಎಂದು ಬಸವಣ್ಣನವರು ತಮ್ಮ ಭಕ್ತಿಸಾಮರ್ಥ್ಯವನ್ನು ಶಿವನಿಗೇ ನಿರ್ವಹಿಸಿ ಕೊಟ್ಟು-ಅವನೇ ತಮ್ಮನ್ನು ಪಾರವೈದಿಸಲೆಂದು ಪ್ರಾರ್ಥಿಸುತ್ತಿದ್ದಾರೆ.
ವಚನದಲ್ಲಿ ಬರುವ-“ತರ್ಕೈಸಿ ಭುಜತುಂಬಿ ಲಿಂಗಸ್ಪರ್ಶನವ ಮಾಡದೆ ಅಕಟಾ ಸಂಸಾರ ವೃಥಾ ಹೋಯಿತ್ತಲ್ಲಾ”ಎಂಬ ಮಾತಿನಿಂದ-ಬಸವಣ್ಣನವರು ಶಿವಾಲಯದ ಶಿವಲಿಂಗವನ್ನು ಕುರಿತಿರುವರೆನ್ನುವುದು ಸ್ಪಷ್ಟವೇ ಇದೆ-ಅಂಗೈಯ ಇಷ್ಟಲಿಂಗವನ್ನು ಭುಜತುಂಬಿ ತಬ್ಬುವುದೆಲ್ಲಿ ಸಾಧ್ಯ ? ಆದ್ದರಿಂದ ಶಿವಾಲಯವನ್ನಾಗಲಿ, ಅಲ್ಲಿರುವ ಶಿವಲಿಂಗವನ್ನಾಗಲಿ ಬಸವಣ್ಣನವರು ಅವಗಣನೆ ಮಾಡುವರೆಂಬ ನಂಬಿಕೆ ನಿರಾಧಾರವಾದುದು. ಮತ್ತು ಮೇಲೆ ಉಲ್ಲೇಖಿಸಿರುವ ವಚನಖಂಡದ ಸಂದರ್ಭದಲ್ಲಿ-ಯಮನು ಬಂದೆಳೆದಾಗ ಶಿವಲಿಂಗವನ್ನು ತಬ್ಬಿಹಿಡಿದು ಮೃತ್ಯುವನ್ನು ಜಯಿಸಿ ಅಮೃತತ್ವವನ್ನು ಪಡೆದನೆಂಬ ಮಾರ್ಕಂಡೇಯನ ನೆನಪಾಗಿರಬೇಕು ಬಸವಣ್ಣನವರಿಗೆ. ತರ್ಕೈಸಿ<ತಳ್ಕೈಸಿ : ತಬ್ಬಿ, ಸಂಸಾರ : ಜನ್ಮ, ಲೋಕ, ಜೀವನ. ಯುಕ್ತಿ : ಕೂಟ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.