Hindi Translationबहती नदी की भाँति हो, तो वह भक्ति है ,
मिलकर भोग समर्पित करे तो वह भक्ति है,
अर्पित कर शेष की रखवालि करे
तो हमारे कूडलसंगमदेव लीन होंगे ॥
Translated by: Banakara K Gowdappa
English Translation This is devotion: to be like
The channel of a flowing stream,
To offer sacrificial gifts sincerely
If, having offered, you can reserve
What's left, Lord Kūḍala Saṅgama
Will be one with you!
Translated by: L M A Menezes, S M Angadi
Tamil Translationபாயும் நதியின் போக்கை உவமிக்க
வியலின் அதுபக்தி. உடனடியாக
சமைக்கும் பொருட்களை அளிக்கவியலின்
அதுபக்தி. அளித்து எஞ்சியதை
பிரசாதமாக ஏற்கவியலும் எனின் முக்தி
நம் கூடல சங்கமதேவன்
கூடிக் கொள்வான் ஐயனே.
Translated by: Smt. Kalyani Venkataraman, Chennai
Telugu Translationపాఱునదికి బోల్పవచ్చునే భక్తి ?
కూడు సంతృప్తికి సమమౌనె భక్తి
ప్రసాదమునకై వేచియున్న
సంగయ్య లోగూడునయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಐಕ್ಯಸ್ಥಲವಿಷಯ -
ಭಕ್ತಿ
ಶಬ್ದಾರ್ಥಗಳುತೆರೆ = ; ಸಯಿಧಾನ = ; ಹರವ = ;
ಕನ್ನಡ ವ್ಯಾಖ್ಯಾನಭಕ್ತಿಯನ್ನು ಹರಿಯುವ ನದಿಗೆ ಹೋಲಿಸಲಾಗಿದೆ. ನದಿಯ ಲಕ್ಷಣವೇನು ? ಅದು ಸಮುದ್ರದ ಕಡೆಗೇ ಪ್ರವಹಿಸಿ ಅದರಲ್ಲೇ ಲೀನವಾಗುವುದು. ಆ ಮುನ್ನ ತಾನು ಹರಿಯುವ ಪಾತ್ರದುದ್ದಕ್ಕೂ ಇಕ್ಕೆಲದಲ್ಲೂ ಸಸ್ಯಸಮೃದ್ಧಿಗೆ ನೆರವಾಗಿ-ಭೂಚರ ಖೇಚರ ಜೀವಕೋಟಿಗೆ ಪ್ರಾಣಾಧಾರಾವಾಗುವುದು.
ಭಕ್ತಿಯಾದರೋ ಶಿವನ ಕಡೆಗೇ ಗಮನಿಸಿ-ಅಲ್ಲಿ ಐಕ್ಯವಾಗುವ ಮುನ್ನ ತನ್ನ ಕಾರ್ಯಕ್ಷೇತ್ರದುದ್ದಕ್ಕೂ ಜೀವ ಜಾಲಕ್ಕೆ ಸಮೃದ್ಧಿದಾಯಕವಾಗಿರುವುದು. ಇಂಥ ಭಕ್ತಿವ್ಯವಹಾರವುಳ್ಳವನೇ ಭಕ್ತ. ಮೇಲೆಮೇಲೆ ತ್ಯಾಗ ಮಾಡುವುದಕ್ಕಾಗಿಯೇ ದಕ್ಷತೆಯಿಂದ ದುಡಿಯುತ್ತಿರುವ ಜೀವಕ್ಕೆ ಮತ್ತೊಂದು ಹೆಸರು “ಭಕ್ತ”ನೆಂಬುದು.
ಈ ವಚನದಲ್ಲಿ “ನೀಡಿ ಮಿಕ್ಕುದ ಕಾಯ್ದುಕೊಂಡಿರುವ” ಮಾತು ಬಹಳ ಗಮನಾರ್ಹವಾದುದು, ಭಕ್ತನ ಆರ್ಜನೆ-ಸ್ವತ್ತು ಸಂಪತ್ತು ಏನಿದೆಯೋ ಅದೆಲ್ಲಾ ಪರಾರ್ಥಕ್ಕಾಗಿ ನಿಯೋಜಿಸಲ್ಪಡಬೇಕು. ಉಳಿದುದು ಕೂಡ-ತನ್ನದಲ್ಲ ಎಂದು, ಶಿವನ ಸೊಮ್ಮು ಎಂದು, ಎಲ್ಲವೂ ಆಖೈರಾಗಿ ಸಮಾಜಕ್ಕೇ ಸಲ್ಲಬೇಕಾದ ಆಸ್ತಿಯೆಂದು, ಅಪವ್ಯಯವಾಗದಂತೆ ಸಂರಕ್ಷಿಸಲ್ಪಡಬೇಕು.
ಹೀಗಲ್ಲದೆ ಭಕ್ತನಾದವನು ಬರೀ ವಿಭೂತಿ ರುದ್ರಾಕ್ಷಿ ಮಂತ್ರ ಲಿಂಗವೆಂದು ಆಧ್ಯಾತ್ಮಿಕವಾಗಲಾರನು, ಭಕ್ತನು ಒಂದನೆಯದಾಗಿ-ದುಡಿಯಬೇಕು. ಎರಡನೆಯದಾಗಿ-ದುಡಿದುದನ್ನು ಭಕ್ತರಿಗೆ ತಲುಪುವಂತೆ ವಿತರಿಸಬೇಕು, ಮೂರನೆಯದಾಗಿ-ವಿತರಿಸಿ ಉಳಿದುದನ್ನು ಶಿವನ ಸೊಮ್ಮೆಂದು ರಕ್ಷಿಸಿಕೊಂಡಿರಬೇಕು. “ಶಿವನ ಸೊಮ್ಮ ಶಿವಂಗೆ ಮಾಡದೆ ಅನ್ಯಕ್ಕೆ ಮಾಡಿದರೆ ತನ್ನ ಭಕ್ತಿ ತನ್ನನೆ ಕೆಡಿಸುವುದು” (ನೋಡಿ ವಚನ 214).
ಹೀಗೆ ಬಸವಣ್ಣನವರ ಅಭಿಪ್ರಾಯದಲ್ಲಿ-ಭಕ್ತಿಯೆಂದರೆ ನಮ್ಮ ಅರ್ಥವ್ಯವಸ್ಥೆಯಲ್ಲಿ ಆರ್ಜನೆ-ಶಿವಾರ್ಪಣೆ-ಸಂರಕ್ಷಣೆ ಎಂಬ ತತ್ತ್ವತ್ರಯಗಳ ಸಮನ್ವಯಶೀಲವುಳ್ಳದು. (ಸೈದಾನ : ಪಡಿಪದಾರ್ಥ). (ಕಾಯ್ದುಕೊಂಡಿರು : ಉಳಿಸಿ ಸಂರಕ್ಷಿಸಿಕೊಂಡಿರು).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.