Hindi Translationभक्ति रूपि पृथ्वि पर गुरु रुपी बीज अंकुरित हुआ।
लिंग रूपि पत्र पल्लवित हुआ॥
लिंग रूपि पत्र पर विचार रूपी पुष्प पुष्पित हुआ।
आचार रूपि बतिया हुई और निष्पत्ति रूपि फल,
निष्पत्ति रूपि फल वृक्ष से गिरने पर
कूडलसंगमदेव ने स्वयं चाहकर उठा लिया ॥
Translated by: Banakara K Gowdappa
English Translation Upon the soil of piety
Sprouted Guru, the seed,
And Liṅga , the leaf, was born;
Then Thought came for the flower,
And Deed for tender fruit,
And Knowledge for the ripened one
And when the fruit of Kowledge broke
Loose from the stalk and fell,
Look, Kūḍala Saṅgama, wanting it Himself,
Gathered it up.
Translated by: L M A Menezes, S M Angadi
Tamil Translationபக்தி என்னும் நிலத்தின் மீது
குரு என்னும் விதைமுளைத்து
இலிங்கம் எனும் இலை ஆயிற்று
இலிங்கம் எனும் இலையின் மீது
எண்ணம் எனும் மலர்மலர்ந்தது
ஆசாரம் எனும் காய் ஆயிற்று
பக்குவம் என்னும் பழமாயிற்று
பக்குவம் என்னும் பழம் காம்பிலிருந்து
அகன்று, வீழும்பொழுது கூடலசங்கமதேவன்
தனக்கு வேண்டுமென்று எடுத்துக் கொண்டனன்.
Translated by: Smt. Kalyani Venkataraman, Chennai
Telugu Translationభక్తి యను పృథ్విపై, గురువను బీజ మంకురించె
లింగమను పత్రమయ్యె
లింగమను పత్రంబుపై
విచార మను పువ్వు పూచె
ఆచారమను కాయ పుట్టె
నిష్పత్తి యను ఫలమయ్యె
నిష్పత్తి యను పంటి తొటిమ వదలి
పడుచుండ సంగయ్య
ఆశతో నెత్తుకొనునయ్య!
Translated by: Dr. Badala Ramaiah
Urdu Translationبھگتی کی کشت پرجوگرا تھا گُرو کا بیج
پھٹ کروہ نرم نرم سے پودے میں ڈھل گیا
پھوٹا پھراس کی شاخ پہ اک برگ لِنگ کا
پھراس کے بعد فکرکا اک پُھول کِھل گیا
یہ گل تھا گویا میرےعمل کاہی خام پھَل
اورپک کےٹوٹنےکوتھا مُکتی کاجب وہ پھَل
بڑھ کرہمارے کوڈلا سنگما نے لے لیا
کہتےہوئے یہ پھَل ہےمرامجھ کوچاہیے
Translated by: Hameed Almas
ಕನ್ನಡ ವ್ಯಾಖ್ಯಾನಪರಶಿವ(ಸ್ಥಲ)ವು ಲೀಲೆಯಿಂದ ಲಿಂಗವೆಂದು ಅಂಗವೆಂದು ಎರಡಾದಾಗ-ಆ ಪರಶಿವನಲ್ಲಿರುವ ಶಕ್ತಿಯು-ಲಿಂಗಸ್ಥಲದಲ್ಲಿ ಕಲೆಯಾಗಿಯೂ ಅಂಗಸ್ಥಲದಲ್ಲಿ ಭಕ್ತಿಯಾಗಿಯೂ ಅವತರಿಸಿತು. ಲಿಂಗಸ್ಥಲದ ಶಕ್ತಿಯು ಪ್ರಪಂಚವನ್ನು ವರ್ಧಿಸುವಂತೆ ಮಾಡಿದರೆ, ಅಂಗಸ್ಥಲದ ಭಕ್ತಿಯು ಪ್ರಾಪಂಚಿಕತೆಯನ್ನು ಕಳೆದು ಅಂಗ(ಜೀವ)ವನ್ನು ಮರಳಿ ಆ ಲಿಂಗದಲ್ಲಿ ಒಂದುಗೂಡಿಸುವುದು.
ಅಂದರೆ ಭವಕ್ಕೆ ಅವತರಿಸಿದ ಜೀವ ತನಗಂಟಿದ ಪಶುತ್ವವನ್ನು ಕಳೆದುಕೊಂಡು ಪಶುಪತಿತ್ವವನ್ನು ಪಡೆಯಲು ಸಾಧಕನಾಗಿರಬೇಕಾದ ಮೂಲಬಂಡವಾಳ ಭಕ್ತಿ ಎಂದಂತಾಯಿತು. ಆ ಭಕ್ತಿಯ ಆಧಾರದ ಮೇಲೆ ಗುರುದರ್ಶನ, ಆ ಗುರುದರ್ಶನದಿಂದ ಲಿಂಗದೀಕ್ಷೆ. ಆ ಲಿಂಗೋಪಾಸನೆಯಿಂದ ವೈಚಾರಿಕತೆ, ಆ ವೈಚಾರಿಕತೆಯಿಂದ ಆಚಾರ, ಆ ಆಚಾರದಿಂದ ಭಾವ ಪರಿಪಾಕ(ಮುಕ್ತಸ್ಥಿತಿ) ಆಗುವುದು. ಆ ಭಾವಪರಿಪಾಕವು ಶಿವನಿಗೆ ಸಮರ್ಪಿತವಾಗುವುದು.
ಹೀಗೆ ಜೀವನಿಗೆ ಮುಕ್ತಿಸ್ಥಿತಿಯು ಲಭಿಸುವ ಹಂತಗಳನ್ನು-ಭೂಮಿಯಲ್ಲಿ ಬಿತ್ತಿದ ಬೀಜವು ಹಣ್ಣಾಗುವ ಪರಿಣಾಮಪರಂಪರೆಯಲ್ಲಿ ಚಿತ್ರಿಸಿರುವರು ಬಸವಣ್ಣನವರು.
ಈ ಪರಿಣಾಮ ಪರಂಪರೆಗೆಲ್ಲಾ ಮೂಲಭೂತವಾದುದು ಭಕ್ತಿ-ಅದರ ಫಲಸ್ವರೂಪಿಯಾದುದು ನಿಷ್ಪತ್ತಿ. ಈ ನಿಷ್ಪತ್ತಿಯನ್ನು ವೈದಿಕ ಪರಿಭಾಷೆಯಲ್ಲಿ “ಜೀವನ್ಮುಕ್ತಿ”ಯೆಂದು ಕರೆಯಬಹುದು. “ಕೂಡಲ ಸಂಗಮದೇವ ತನಗೆ ಬೇಕೆಂದೆತ್ತಿಕೊಂಡುದನ್ನು “ವಿದೇಹಮುಕ್ತಿ” ಎನ್ನಬಹುದು.
ವಿ : ಲಿಂಗೋಪಾಸನೆಯಿಂದ ವೈಚಾರಿಕತೆಯೂ, ಆ ವೈಚಾರಿಕತೆಯಿಂದಲೇ ಆಚಾರ(ಜೀವನ ವ್ಯವಹಾರ)ವೂ ನಿರ್ಣಯವಾಗುವುದೆಂಬ ಬಸವಣ್ಣನವರ ವೈಜ್ಞಾನಿಕ ಮನೋಭಾವವು ಅವರು ಬೋಧಿಸಿದ ಧರ್ಮದಲ್ಲಿ_ಎಷ್ಟು ಆಧುನಿಕವಾಗಿ ಹೊಂದಿಕೊಂಡಿದೆಯೆಂಬುದನ್ನು ಗಮನಿಸಬೇಕು. ಈ ಆಧುನಿಕತೆಯಲ್ಲಿ ಜೀವನ್ಮುಕ್ತ(ನಿಷ್ಪತ್ತಿ)ಸ್ಥಿತಿಯನ್ನು ಕಲ್ಪಿಸಿಕೊಂಡುದೇ ಆದರೆ_ಭಕ್ತನ ಪಾತ್ರ ಈ ಲೋಕದಲ್ಲಿ ಅತ್ಯಂತ ಉದಾತ್ತವೂ, ಅದೇ ಕಾಲಕ್ಕೆ ಅತೀತವೂ ಆದುದಾಗಿ-ವಾಮನನಲ್ಲಿ ತ್ರಿವಿಕ್ರಮನಡಗಿರುವ ಪರಿಯಲ್ಲಿ ಎಲ್ಲ ಕಾಲಕ್ಕೂ ಪ್ರಸ್ತುತವಾದುದಾಗಿರುವುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.