Hindi Translationजो श्रुति को अगम्य और द्वादशादित्यों से अधिक है
उस अप्रतिम महिमावान सम कोई है?
’सोमः पवते’ यह श्रुति जानकर
‘शिव एको देवः, रुद्र अद्वितीय’
भाई इस पर विश्वास रखो
वेद कहता है, कूडलसंगमदेव के सिवा और कोई नहीं ॥
Translated by: Banakara K Gowdappa
English Translation Is there a parallel to the majesty,
Peerless, above the twelve, beyond
The understanding of the holy books?
They know that 'Uma's husband purifies';
Mark you, My brothers: you should believe
That 'Śiva' is the only God,
Rudra without a second.' I sing
Hosannas that the world may know:
'Tere is no God
But Kūḍala Saṅgama'.
Translated by: L M A Menezes, S M Angadi
Tamil Translationசுருதிகள் அறியாத, பன்னிரு ஆதித்யர்களுடன் ஒப்பிடவியலா
மகிமையுடையவனுக்கு ஈடு உண்டோ?
“ஸோம: பவதே” என்னும் சுருதியை அறிந்து
சிவ ஏகோ தேவ: ருத்ரோ ந த்விதீய:”
என்று நம்புமின், காணீர்
கூடல சங்கம தேவனின்றி இல்லை என்று
உலகெலாம் அறிய புகழை விளங்கச் செய்தேன்
Translated by: Smt. Kalyani Venkataraman, Chennai
Telugu Translationశ్రుతి కగమ్యుడు; ద్వాదశాంత్యుడు
అప్రతిమ మహిమునకు ప్రతియున్నదే
‘‘సోమః పవతే’’ యను శ్రుతి తెలిపె
శివుడొకడే దేవుడు; రుద్రుడద్వితీయు
డని నమ్మదగునయ్యాకూడల
సంగమదేవుడు గాక వేరు
లేడను బిరుదుండె జగమెల్ల తెలియ
Translated by: Dr. Badala Ramaiah
ಕನ್ನಡ ವ್ಯಾಖ್ಯಾನಈ ವಚನದಲ್ಲಿ ಪರಶಿವನ ತಾತ್ತ್ವಿಕಪಾರಮ್ಯವನ್ನು ನಿರೂಪಿಸಲಾಗಿದೆ. ತತ್ತ್ವಗಳು(ಷಟ್ತ್ರಿಂಶತ್) ಮೂವತ್ತಾರು. ಅವುಗಳಲ್ಲಿ ಮೊದಲನೆಯದು ಶಿವತತ್ತ್ವ-ಇದು ನಿಷ್ಕಳ. ಈ ಶಿವತತ್ತ್ವದಿಂದ ಹೊಮ್ಮಿದ ಸದಾಶಿವತತ್ತ್ವವು ಶಿವಸಾದಾಖ್ಯ ಮುಂತಾದ ಐದು ಸಾದಾಖ್ಯಗಳನ್ನು, ಶಾಂತ್ಯತೀತ ಮುಂತಾದ ಐದು ಕಲೆಗಳನ್ನು ಒಳಗೊಂಡಿರುವುದು. ಈ ಸದಾಶಿವತತ್ತ್ವದಶಕವನ್ನು ವಿದ್ಯಾತತ್ತ್ವ ಎಂದು ಕರೆಯುವರು-ಇವು ಸಕಳನಿಷ್ಕಳ. ಈ ಸದಾಶಿವತತ್ತ್ವದಿಂದ ಹೊಮ್ಮಿದ(ಉಮಾ)ಮಾಹೇಶ್ವರತತ್ತ್ವವು ಆಕಾಶಾದಿ ಐದು ಭೂತಗಳನ್ನೂ, ಶ್ರೋತ್ರಾದಿ ಐದು ಜ್ಞಾನೇಂದ್ರಿಯಗಳನ್ನು, ಶಬ್ದಾದಿ ಐದು ವಿಷಯ(ತನ್ಮಾತ್ರ)ಗಳನ್ನು, ಮನ-ಚಿತ್ತ-ಬುದ್ಧಿ-ಅಹಂಕಾರವೆಂಬ ನಾಲ್ಕು ಅಂತಃಕರಣಗಳನ್ನು-ಮತ್ತೆ ಜೀವಾತ್ಮ ಒಂದನ್ನು-ಒಟ್ಟು ಇಪ್ಪತ್ತೈದು(ಪಂಚವಿಂಶತಿ)ತತ್ತ್ವಗಳನ್ನು ಒಳಗೊಂಡಿರುವುದು. ಈ ಪಂಚವಿಂಶತಿ ತತ್ತ್ವಗಳನ್ನು ಆತ್ಮತತ್ತ್ವವೆಂದು ಕರೆಯುವರು- ಇದು ಸಕಳ. ಷಟ್ತ್ರಿಂ ಶತ್ ತತ್ತ್ವಗಳಲ್ಲಿ ಈ ಸಕಳವಾದ ಪಂಚವಿಂಶತಿ ತತ್ತ್ವಗಳನ್ನು ಬಿಟ್ಟು ಉಳಿದ ಹನ್ನೊಂದು (ಪಂಚಸಾದಾಖ್ಯ+ಪಂಚಕಲೆ+ಶಿವ) ತತ್ತ್ವಗಳಿಗೆ ಅತೀತವೂ ಪರಾತ್ಪರವೂ ಆದ ಪರಶಿವ ಸಚ್ಚಿದಾನಂದವು ಹನ್ನೆರಡನೆಯದಾಗುವುದು. ಅದನ್ನೇ “ದ್ವಾದಶಾಂತ್ಯ” ಎಂದು ಈ ವಚನದಲ್ಲಿ ನಿರ್ದೇಶಿಸಲಾಗಿದೆ.
ಸೃಷ್ಟಿಗೆಲ್ಲಾ ಪರಶಿವನೇ ಮೂಲಾಧಾರನೆಂಬ ಮಾತನ್ನು-“ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾಃ” ಎಂಬ ಋಗ್ವೇದೋಲ್ಲೇಖದಿಂದಲೂ, “ಏಕೋ ಹಿ ರುದ್ರೋ ನ ದ್ವಿತೀಯಾಯ ತಸ್ಥುರ್ಯ ಇಮಾಲ್ಲೋಕಾನೀಶತ ಈಶನೀಭಿಃ | ಪ್ರತ್ಯಙ್ ಜನಾಸ್ತಿಷ್ಠತಿ ಸಂಚುಕೋಚಾಂತಕಾಲೇ ಸಂಸೃಜ್ಯ ವಿಶ್ವಾಭುವನಾನಿ ಗೋಪಾಃ”(ಶ್ವೇತಾಶ್ವತರ 3-2) ಎಂಬ ಉಪನಿಷದ್ವಾಕ್ಯದಿಂದಲೂ ಸಮರ್ಥಿಸುತ್ತಿರುವರು ಬಸವಣ್ಣನವರು. ಈ ರೀತಿಯ ನೂರು ಉಲ್ಲೇಖಗಳಿಂದಲೂ ಪರಶಿವನ ಪೂರ್ಣದರ್ಶನವಾಗುವುದಿಲ್ಲವಾದ್ದರಿಂದ-ಸಂಪೂರ್ಣ ನಂಬಬೇಕೆಂದೂ-ತಾವು ನಂಬಿ ಎತ್ತಿಹಿಡಿದಿರುವ ಶಿವನ ಬಿರುದನ್ನು ಜನರೂ ನಂಬಬೇಕೆಂದೂ-ಆ ಶಿವನಿಗಿಂತ ಅನ್ಯವಾದ ಮಹಾದೈವವಿನ್ನೊಂದಿಲ್ಲವೆಂದೂ ಬಸವಣ್ಣನವರು ಉದ್ಘೋಷಿಸುತ್ತಿರುವರು.
ವಿ : ಏಕೋ ಹಿ ರುದ್ರಕ್ಕೆ ಸರಳಾನುವಾದ : ಯಾವನು ಈ ಲೋಕಗಳನ್ನು ತನ್ನ ಶಕ್ತಿಯಿಂದ ಅಧಿಕರಿಸಿಕೊಂಡಿರುವನೋ ಆ ರುದ್ರನೊಬ್ಬನೇ ನಿಜ-ಎರಡನೆಯದಾದುದೇನೊಂದೂ ನಿಲ್ಲದು. ಎಲ್ಲ ಜನರಲ್ಲಿ ಅಂತರ್ಯಾಮಿಯಾಗಿ ಅವನಿದ್ದಾನೆ. ಎಲ್ಲ ಭುವನಗಳನ್ನೂ ಸಂಸೃಜಿಸಿ ಗೋಪ(ರಕ್ಷಕ)ನಾಗಿ-ಅಂತ್ಯಕಾಲದಲ್ಲಿ ಆ ಎಲ್ಲವನ್ನೂ ತನ್ನೊಳಗುಮಾಡಿಕೊಂಡವನು ಅವನೇ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.