ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು, ನೋಡಾ
ಬ್ರಹ್ಮ ತನ್ನ ಶಿರವನ್ನೇಕೆ ಹುಟ್ಟಿಸಲಾರ?
ವಿಷ್ಣು ತನ್ನ ಮಗನನ್ನೇಕೆ ರಕ್ಷಿಸಲಾರ?
ದುಷ್ಟನಿಗ್ರಹ ಶಿಷ್ಟಪರಿಪಾಲಕ
ನಮ್ಮ ಕೂಡಲಸಂಗಮದೇವ.
Hindi Translationब्रह्म को सृष्टा कहते हैं,
विष्णु को रक्षक कहते हैं,
ब्रह्म अपने सिर की सृष्टि क्यों न कर सका?
विष्णु अपने पुत्र की रक्षा क्यों न कर सका?
दुष्ट निग्रह, शिष्ट परिपालक हैं, मम कूडलसंगमदेव ॥
Translated by: Banakara K Gowdappa
English Translation They call him Brahma who creates,
Him Viṣṇu who protects:
Why, then, couldn't Brahma create his head,
Nor Viṣṇu could protect his son?
The punisher of the wicked and
Protector of the good
Is our Lord Kūḍala Saṅgama!
Translated by: L M A Menezes, S M Angadi
Tamil Translationபடைப்பவனைப் பிரம்மன் என்பர்
காப்பவனைத் திருமால் என்பர் காணாய்
பிரம்மன் தன் தலையை ஏன் தோற்றுவிக்கவில்லை?
திருமால் தன் மகனை ஏன் காப்பாற்றவில்லை?
நம் கூடலசங்கமதேவன், தீயோரைத் தண்டித்து
நல்லோரைக் காப்பவன் ஆவான்.
Translated by: Smt. Kalyani Venkataraman, Chennai
Telugu Translationపుట్టించువాడు బ్రహ్మ యందురు
రక్షించువాడు విష్ణువందురు
తన తలనేల పుట్టించుకొనడో బ్రహ్మ !
తన సుతు నేల దక్కించుకొనడో విష్ణువు?
దుష్ట శిక్షణ శిష్ట పాలన మా
కూడల సంగడు సేయునయ్యా
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲವಿಷಯ -
ದೇವರು
ಶಬ್ದಾರ್ಥಗಳುದುಷ್ಟ = ; ನಿಗ್ರಹ = ; ಪರಿಪಾಲಕ = ;
ಕನ್ನಡ ವ್ಯಾಖ್ಯಾನಈ ವಚನಧೋರಣೆ ಸಂಪೂರ್ಣವಾಗಿ ಪುರಾಣಾತ್ಮಕವಾದುದು. ಶಿವನು ಬ್ರಹ್ಮನ ಶಿರವನ್ನು ಚಿವುಟಿದಾಗ-ಅವನು ತನ್ನ ಶಿರವನ್ನು ಮರಳಿ ಸೃಷ್ಟಿಸಿಕೊಳ್ಳಲಾರದವನಾಗಿ-ಆ ಬ್ರಹ್ಮನು ಸೃಷ್ಟಿಕರ್ತನಲ್ಲ. ಶಿವನು ವಿಷ್ಣುವಿನ ಮಗನಾದ ಕಾಮನನ್ನು ಸುಟ್ಟಾಗ-ಅವನು ಆ ಮಗನನ್ನು ರಕ್ಷಿಸಿಕೊಳ್ಳಲಾರದವನಾಗಿ-ಆ ವಿಷ್ಣು ಸ್ಥಿತಿಕರ್ತನಲ್ಲ. ಆದ್ದರಿಂದ ಸೃಷ್ಟಿಕರ್ತನೆಂದು ಬ್ರಹ್ಮನನ್ನು. ಸ್ಥಿತಿಕರ್ತನೆಂದು ವಿಷ್ಣುವನ್ನು ಉಪಾಸಿಸಬೇಕಾಗಿಲ್ಲ. ಸರ್ವಕರ್ತನಾದ ಶಿವನೊಬ್ಬನೇ ಉಪಾಸ್ಯನು.
ವಿ : (1) ಕಾಮವಾಚ್ಯನಾದ ಮನ್ಮಥನು ಕೃಷ್ಣನ ಮಗನೆಂದು ಭಾಗವತ ಮುಂತಾದೆಡೆ ಹೇಳಿದೆ. ಕೃಷ್ಣನು ವಿಷ್ಣುವಿನ ಅವತಾರವೇ ಆಗಿ-ಮನ್ಮಥನು ವಿಷ್ಣುವಿನ ಮಗನೇ ಆಗುವನು. (2) ಬ್ರಹ್ಮನು ದುಷ್ಟನೆಂದೂ, ಕಾಮ(ಮನ್ಮಥ)ನು ಶಿಷ್ಟನೆಂದೂ ಈ ವಚನದಲ್ಲಿ ಅರ್ಥೈಸಿಕೊಳ್ಳಬೇಕಾಗಿರುವುದು ಒಂದು ವಿಪರ್ಯಾಸ. ಒಂದು ಪಕ್ಷ ಈ ವಚನ ಬಸವಣ್ಣನವರ ನಿಜವಚನವೇ ಆದರೆ-ಬ್ರಹ್ಮನು ಬುದ್ದಿಜೀವಿಯಾಗಿಯೂ ಶಿವನ ಪಾರಮ್ಯವನ್ನು ಮನಗಾಣಲಿಲ್ಲವಾದ್ದರಿಂದ ಅವನು ದುಷ್ಟ, ಮನ್ಮಥನು ಮುಗ್ಧನಾದ್ದರಿಂದ ಮತ್ತು ಜಗತ್ಕಲ್ಯಾಣಕ್ಕಾಗಿ ಶಿವನ ತಪೋಭಂಗಕ್ಕೆ ಯತ್ನಿಸಿ ಹುತಾತ್ಮನಾದುದರಿಂದ ಅವನು ಶಿಷ್ಟನು, ಆದ್ದರಿಂದಲೇ ಶಿವನು ಮನ್ಮಥನನ್ನು ಮೊದಲು ಸುಟ್ಟರೂ- ಆಮೇಲೆ ಅವನು ಮನಸಿಜನಾಗಿ ಉಳಿಯಲೆಂದು ರತಿಗೆ ವರವನ್ನು ಕೊಡುವನು. ಬ್ರಹ್ಮನು ದುಷ್ಟನಾದ್ದರಿಂದ ಅವನ ಐದನೇ ತಲೆಯನ್ನು ಕತ್ತರಿಸಿ ಅದನ್ನು ಮರಳಿ ಕೊಡಲಿಲ್ಲ ಶಿವ. ಹೀಗಾಗಿ ಶಿವನು ದುಷ್ಟನಿಗ್ರಹನು ಮತ್ತು ಶಿಷ್ಟಪರಿಪಾಲಕನು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.