Hindi Translationखाने और पहनने के लिए ‘मारी’ है?
क्या मारने और रक्षा करने के लिए है ?
जब उसके पुत्र को यम ले गया
तब मारी कहाँ गई थी?
देने और रक्षा करने के लिए
कूडलसंगमदेव के अतिरिक्त और कोई देव नहीं है ॥
Translated by: Banakara K Gowdappa
English Translation Mari should serve to eat and wear;
But does she serve to slay and save?
Where had she gone when Death
Snatched off her own son? To give and guard
There is no other god
Than Lord Kūḍala Saṅgama!
Translated by: L M A Menezes, S M Angadi
Tamil Translationஉண்ண, உடுக்க மாரியல்லதே
கொல்ல, மாரியே?
தன் மகனை யமன் கொண்டு சென்ற பொழுது
அன்று எங்கு சென்றனள் மாரி?
ஈவதற்கு, காப்பதற்கு நம் கூடல சங்கய்யன்
இன்றி, வேறொரு கடவுள் இல்லை.
Translated by: Smt. Kalyani Venkataraman, Chennai
Telugu Translationతిన కట్ట మారియగు గాని
చంప రక్షింప మారియగునే?
తన బిడ్డను యముడు చంపగ
యెట కురికెనో యీ మహామారి?
వీరేమి కాతురు కూడల సంగయ్య దప్ప
వేరు దైవము లేదు.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಢಕ್ಕೆಯ ಬೊಮ್ಮಣ್ಣ(ಮಾರಯ್ಯ)ನ ವಚನಗಳಲ್ಲಿ-ಮಾರಿಯ ಒಂದು ಮೂರ್ತಿಚಿತ್ರ ಸಿಗುವುದು. ಆ ಮಾರಿಯನ್ನು ಮುಮ್ಮೂಲೆಯ ಒಂದು ಮೊರದಲ್ಲಿ ಮುಹೂರ್ತಮಾಡಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಢಕ್ಕೆಯನ್ನು ಬಾರಿಸುತ್ತ ಹೊತ್ತು ತರುವರು. ಆ ಮಾರಿಯ ಒಂದು ಕೈಯಲ್ಲಿ ಕತ್ತಿ, ಇನ್ನೊಂದು ಕೈಯಲ್ಲಿ ಬಟ್ಟಲಿರುತ್ತದೆ. ಎರಡೂ ಕೈಯಲ್ಲಿ ಬಳೆ ತೊಟ್ಟಿರುವಳು, ಇಂಥ ಮಾರಿಯನ್ನು ಹೊತ್ತು ಮನೆ ಮನೆಯ ಮುಂದೆ ನಿಂತು ಢಕ್ಕೆಯನ್ನು ಬಾರಿಸುತ್ತ, ನಡುನಡುವೆ ಅವಳ ಮಹಿಮೆಯನ್ನು ಸಾರುತ್ತ ಭಕ್ತರಿಂದ ಪಡಿಪದಾರ್ಥವನ್ನೂ ಕಾಣಿಕೆಯನ್ನೂ ಸಂಗ್ರಹಿಸುವರು. ಹೀಗೆ ಭಕ್ತರು ಅರ್ಪಿಸಿದ್ದನ್ನು ಉಣ್ಣಲು ಉಡಲು ಮಾತ್ರ ಬಲ್ಲಳು ಮಾರಿದೇವಿ-ಭಕ್ತರಿಗೆ ವರಗಳನ್ನು ಕೊಡಲಾಗಲಿ, ಬಂದ ಕಷ್ಟಗಳನ್ನು ಪರಿಹರಿಸಲಾಗಲಿ ಅವಳಿಗಾಗದು-ಎನ್ನುತ್ತ ಉದಾಹರಣೆಗಾಗಿ-ತನ್ನ ಮಗನನ್ನೇ ಯಮನು ಎಳೆದುಕೊಂಡು ಹೋಗುವಾಗ ಅವಳು ಆ ಬಳಿಯೇ ಸುಳಿಯಲಿಲ್ಲವೆಂಬ ಘಟನೆಯೊಂದನ್ನು ಪ್ರಸ್ತಾಪಿಸಿರುವರು ಬಸವಣ್ಣನವರು. ಭಕ್ತರಿಗೆ ವರಗಳನ್ನು ಕೊಡು(ಈಯು)ವುದಾಗಲಿ, ಅವರನ್ನು ರಕ್ಷಿಸು(ಕಾಯು)ವುದಾಗಲಿ ಶಿವನೊಬ್ಬನಿಗೇ ಸಾಧ್ಯ-ಶಿವನ ಈ ಮಹಾದಾನಗುಣ ಮತ್ತು ಸಂರಕ್ಷಣಶಕ್ತಿ ವಿಷ್ಣು ಮುಂತಾದ ದೊಡ್ಡ ದೈವಗಳಿಗೇ ಇಲ್ಲವೆಂದ ಮೇಲೆ-ಈ ಪಾಮರಿ ಮಾರಿಗೆಲ್ಲಿಯದೆಂಬುದು ತಾತ್ಪರ್ಯ(ನೋಡಿ ವಚನ 548).
ಈ ಮಾರಿಯ ಮಗ ಜೋಕುಮಾರನು ಸುಭಿಕ್ಷದ ಮತ್ತು ಸಂತಾನದ ದೈವವೆಂಬ ಅಭಿಪ್ರಾಯವಿದೆ. ಈ ಫಲವಂತಿಕೆಗಾಗಿ ರಾಷ್ಟಮಟ್ಟದಲ್ಲಿ ಕಾಮನು, ಪ್ರಾಂತ್ಯಮಟ್ಟದಲ್ಲಿ ಜೋಕುಮಾರನು ಅಸಂಖ್ಯ ಭಕ್ತಕೋಟಿಯನ್ನು ಆಕರ್ಷಿಸಿದ್ದಾರೆ.
ಜೋಕುಮಾರನ ಅಗಲವಾದ ಮುಖ, ಅಗಲವಾದ ಕಣ್ಣು, ನಿಗುರಿದ ನೀಳವಾದ ಶಿಶ್ನ-ಅವನೊಬ್ಬ ಬೆದೆದೇವರೆಂಬುದಕ್ಕೆ ಸಾಕ್ಷಿ. ಕಿಸಿದ ಹಲ್ಲಿನ ಅವನ ನಗೆ-ಅವನ ಭಂಡಕಾಮುಕತನಕ್ಕೆ ದ್ಯೋತಕವಾಗಿದೆ.
ಈ ಜೋಕುಮಾರನ ಸಂಬಂಧವಾಗಿ ಬಸವೇಶ್ವರ ಷಟ್ಸ್ಥಲ ವಚನದ ಕಥಾಸಾರದಲ್ಲಿ ಸಿಗುವ ವಿವರವನ್ನು ಈ ಮುಂದೆ ಕೊಟ್ಟಿದೆ : ಒಬ್ಬ ಗಂಧರ್ವನು ಸ್ವರ್ಗದಿಂದ ಮರ್ತ್ಯಕ್ಕೆ ಬಂದು ಮಾರಿಯ ಸಂಗವನ್ನು ಮಾಡಲು-ಅವಳು ಬಸುರಿಯಾದಳು. ಹುಟ್ಟಿದ ಗಂಡುಮಗು ಹುಟ್ಟಿದೇಳು ದಿವಸಕ್ಕೇ ಹೊಲೆಗೇರಿಗೆ ಹೋಗಿ ಹಾದರ ಮಾಡಿ-ಆ ಫಲವಾಗಿಯೇ ಕೊಲೆಯಾಯಿತು. ಯಮದೂತರು ಹಿಡಿಯಲು ಬಂದಾಗ ಅಗಸರ ಒಗೆಯುವ ಕಲ್ಲಿನ ಮರೆಯಲ್ಲಿ ಬಚ್ಚಿಟ್ಟುಕೊಂಡಿತು. ಅದನ್ನು ಯಮದೂತರು ಹುಡುಕಿ ಹಿಡಿದು ಯಮನಿಗೊಪ್ಪಿಸಿದರು. “ಅದು ಕಾರಣದಿಂದಗಸರು (ಸೂತಕವೆಂದು) ಏಳು ದಿನಕ್ಕೆ ಮೇಕಲ್ಲ ಮೇಲೆ (ಬಟ್ಟೆಗಳನ್ನು)ತೊಳೆಯಲಿಲ್ಲ.” ಮಾರಿಯಾದರೊ ತನ್ನ ಈ ಮಗನ ಹೆತ್ತೊಸಗೆ ಸತ್ತೊಸಗೆಯನ್ನು ಏಳುದಿನದೊಳಗೇ ಮಾಡಿ-ಊರಕ್ಕಿ ಊರೆಣ್ಣೆ ಉಣ್ಣು ಮಗನೇ ಜೋ ಎಂದು ಜೋಗುಳವಾಡಲು ಅವನು ಜೋಕುಮಾರನೆಂದು ಹೆಸರುವಾಸಿಯಾದನು.(ಪುಟ:71-72) ಎಂತೂ ಅತಿಕಾಮಿಯಾದ ಜೋಕುಮಾರನು ಮಾರಿಯ ಮಗನೆಂಬುದು ತಾತ್ತ್ವಿಕವಾಗಿ ಅರ್ಥಪೂರ್ಣವಾಗಿದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.