ಆದಿ ಪುರಾಣ ಅಸುರರಿಗೆ ಮಾರಿ,
ವೇದ ಪುರಾಣ ಹೋತಿಂಗೆ ಮಾರಿ,
ರಾಮ ಪುರಾಣ ರಕ್ಕಸರಿಗೆ ಮಾರಿ,
ಭಾರತ ಪುರಾಣ ಗೋತ್ರಕ್ಕೆ ಮಾರಿ.
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು:
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲಾ
ಕೂಡಲಸಂಗಮದೇವಾ.
Hindi Translationआदि पुराण असुरों के लिए मृत्यु बना,
वेद, पुराण, भेड के लिए मृत्यु बना,
रामपुराण राक्षसों के लिए मृत्यु बना-
भारतपुराण गोत्र के लिए मृत्यु बना-
सभी पुराण कर्म – मूल हैं
कूडलसंगमदेव तव पुराण अप्रतिम है॥
Translated by: Banakara K Gowdappa
English Translation The first Purāṇa is to the demons death;
The Veda Purāṇa is death to the goat;
The Rāma Purāṇa is to Rākṣasas death;
The Bhārata Purāṇa is death to the clan...
Every Purāṇa is Karma's origin:
O Kūḍala Saṅgama Lord, there is
To Thy Purāṇa no parallel!
Translated by: L M A Menezes, S M Angadi
Tamil Translationஆதி புராணம் அரக்கருக்கு அழிவு
வேத புராணம் ஆட்டிற்கு அழிவு
இராமபுராணம் அரக்கருக்கு அழிவு
பாரத புராணம் கோத்திரத்திற்கு அழிவு
அனைத்துப் புராணமும் வினைக்கு முதலாம்
உம் புராணத்திற்கு ஈடு இல்லை
கூடார சங்கம தேவனே.
Translated by: Smt. Kalyani Venkataraman, Chennai
Telugu Translationఆదిపురాణము అసురులకు మారి;
వేదపురాణము హోతకు మారి;
రాముని కధ రక్కసులకు మారి
భారత చరిత్ర గోత్రమునకు మారి
నీ పురాణములెల్ల కర్మకు మూలము
నీ పురాణమునకు ప్రతి లేదు.
కూడల సంగమదేవా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶಿವಪುರಾಣ(ಶಿವಾಗಮಗಳನ್ನು ಬಿಟ್ಟು ಮಿಕ್ಕೆಲ್ಲ ಪುರಾಣಗಳೂ ಇತಿಹಾಸಗಳೂ ವೇದಗಳೂ ಆಗಮಗಳೂ ಹಿಂಸಾಮಯ ವಿಚಾರಗಳಿಂದ ತುಂಬಿದೆಯೆಂದು ಗೇಲಿಮಾಡುವುದೇ ಈ ವಚನದ ಉದ್ದೇಶ.
ಈ ವಚನವನ್ನು ಬಸವಣ್ಣನವರ ಅಂಕಿತದಲ್ಲಿ ಬರೆದು ಸೇರಿಸಿದವನು ಏಕಕಾಲದಲ್ಲಿ ಒಬ್ಬ ಗಾವಿಲನೂ ಧೂರ್ತನೂ ಆಗಿದ್ದಿರಬೇಕು. ಅವನು ವೇದ ಪುರಾಣ ಇತಿಹಾಸ ಆಗಮ ಎಲ್ಲವನ್ನೂ ಪುರಾಣವೆಂದೇ ಕರೆದಿರುವನು-ಮತ್ತು ಹಾಗೆ ಕರೆಯುವಲ್ಲಿ ಗೇಲಿಯ ಕಾಕನ್ನೂ ಬೆರೆಸಿರುವನು-ಅದು ತನ್ನ ಶಿವಪುರಾಣದ ಮೇಲೂ ತುಳುಕಿದೆಯೆಂಬುದನ್ನು ಅರಿಯನು. ಆದಿಪುರಾಣ ಅಸುರರಿಗೆ ಮಾರಿ, ರಾಮಪುರಾಣ ರಕ್ಕಸರಿಗೆ ಮಾರಿ ಎನ್ನುತ್ತ ಅಸುರರಿಗೂ ರಕ್ಕಸರಿಗೂ ಇಲ್ಲದ ಭೇದವನ್ನು ಕಲ್ಪಿಸಿ-ನಮ್ಮನ್ನು ದಿಕ್ಕು ತಪ್ಪಿಸುವನು-ನಾವು ದಿಕ್ಕು ತಪ್ಪಿದ್ದನ್ನು ಕಂಡು ಒಳಗೊಳಗೇ ತುಂಟನಗೆಯನ್ನು ನಗುವನು.
ಜಕ್ಕಣಾರ್ಯನು ವೀರಶೈವದ ಏಕೋತ್ತರ ಶತಸ್ಥಲಗಳನ್ನು ಪ್ರತಿಪಾದಿಸುವಾಗ ರಾಮಾಯಣ ಮಹಾಭಾರತ ಭಾಗವತಾದಿ ಗ್ರಂಥಗಳಿಂದಲೂ ಉಲ್ಲೇಖಿಸಿರುವನೆಂಬುದು ಗಮನಾರ್ಹ. ಈ ಎಲ್ಲ ವಿವರಣೆಯ ಹಿನ್ನಲೆಯಲ್ಲಿ-ಈ ವಚನ ಬಸವಣ್ಣನವರ ನಿಜವಚನವಲ್ಲವೆಂಬುದು ಸ್ಪಷ್ಟವೇ ಇದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.