Hindi Translationहे, विप्र कथनानुसार आचरण नहीं करते, यह कैसा?
उनका मार्ग एक है, और शास्र का दूसरा !
कूडलसंगमदेव , यही इस का दृष्टांत है,
कि विप्र मातंगों के गर्भ से उत्पन्न होकर
गोमाँस भक्षण करते हैं ॥
Translated by: Banakara K Gowdappa
English Translation What Sir,these chanting priests
Do not do what they say: how's that?
One way for their own selves,
Another for the holy books!
It's proof enough, O Kūḍala Saṅgama Lord,
to say these priests, born
In pariah wombs, eat beef!
Translated by: L M A Menezes, S M Angadi
Tamil Translationஐயனே, அந்தணர் கூறியதைப்போல
நடவார் இது என்ன ஐயனே?
தனக்கொரு வழி, சாத்திரத்திற்கு ஒருவழி.
கூடல சங்கம தேவனே, புலையரின்
கருவிலே அந்தணர் பிறந்து, பசுவின் புலாலை
உண்பர் என்பதற்கு இதே கண்கூடு.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಎಲ್ಲವನ್ನೂ ತನ್ನಂತೆ ಕಾಣು ಎನ್ನುತ್ತ ಪ್ರಾಣಿವಧೆಯಲ್ಲಿ ತೊಡಗಿದ ಬ್ರಾಹ್ಮಣರ ದ್ವಂದ್ವವನ್ನು ಬಸವಣ್ಣನವರು ಈ ವಚನದಲ್ಲಿ ಖಂಡಿಸುತ್ತಿರುವರು. ಮತ್ತು ಗೋವು ಪವಿತ್ರವೆಂದೂ ಗೋಹತ್ಯೆ ಮಹಾಪಾತಕವೆಂದೂ ಶಾಸ್ತ್ರಗಳಲ್ಲಿ ಹೇಳಿದ್ದಾರೆ-ಇದರ ಆಚರಣೆ ಅದಕ್ಕೆ ವಿರುದ್ಧವಾಗಿಯೇ ಇದೆ. ಆ ಗೋವುಗಳನ್ನೇ ಔತಣಕ್ಕಾಗಿ(ಯೂ) ಅಟ್ಟುತ್ತಿನ್ನುವ ಅವರ ನಿರ್ಲಜ್ಜ ರುಚಿಲಾಂಪಟ್ಯವನ್ನು ಬಸವಣ್ಣನವರು ಮನಸಿನಲ್ಲಿಟ್ಟುಕೊಂಡು ಈ ಮಾತನಾಡುತ್ತಿರುವರೆನಿಸುವುದು.
ವಾಲ್ಮೀಕಿಋಷಿಗಳ ಆಶ್ರಮಕ್ಕೆ ವಸಿಷ್ಠ ಋಷಿಗಳು ಬಂದಾಗ ಅವರನ್ನು ಸತ್ಕರಿಸಲು ಹಸುವಿನ ಎಳಗರುವೊಂದನ್ನು ಕೊಂದು ಅಡಿಗೆ ಮಾಡಿ ಬಡಿಸಲಾಯಿತೆಂದು ಕವಿ ಭವಭೂತಿಯು ತನ್ನ ಉತ್ತರರಾಮಚರಿತ್ರೆಯಲ್ಲಿ ಹೇಳಿರುವುದು ಪ್ರಸಿದ್ಧವೇ ಇದೆ. ಅಷ್ಟೇ ಅಲ್ಲ, ಬಸವಣ್ಣನವರ ಕಾಲದಲ್ಲೂ ಬ್ರಾಹ್ಮಣರು (ಯಜ್ಞದ ನೆಪದಲ್ಲೇ ಆಗಲಿ) ಗೋಮಾಂಸವನ್ನು ತಿನ್ನುತ್ತಿದ್ದರೆಂಬುದು ಈ ವಚನದಿಂದಲೇ ಸ್ಪಷ್ಟವಾಗುತ್ತಿದೆ.
ಬ್ರಾಹ್ಮಣರು ಹೀಗೆ ಗೋಮಾಂಸವನ್ನು ತಿನ್ನುವ ರೂಢಿಯನ್ನು ಬೆಳೆಸಿಕೊಂಡುದಕ್ಕೆ ಕಾರಣ-ಅವರು ಹೊಲೆಯಲ್ಲಿ ಹುಟ್ಟಿದವರು ಎನ್ನುತ್ತಿರುವ ಬಸವಣ್ಣನವರ ಮಾತಂತೂ ಅವರ ವಾಕ್ಶುದ್ಧಿಯನ್ನೇ ಕಲುಷಿತಗೊಳಿಸುವಂಥ ಬಹಳ ಕೆಟ್ಟ ಮಾತೆನಿಸೀತು. ಒಂದು ಪಕ್ಷ ಈ ವಚನ ನಿಜವಾಗಿಯೂ ಬಸವಣ್ಣನವರದೇ ಆದರೆ-ಬ್ರಾಹ್ಮಣರ ಗೋತ್ರಪುರುಷರಲ್ಲಿ ಹಲವರು ಹುಟ್ಟಿನಿಂದ ಮಚ್ಚಿಗ(ಅಸ್ಪೃಶ್ಯ)ರಾಗಿದ್ದರೆಂಬುದಷ್ಟೇ ಅವರ ಅಭಿಪ್ರಾಯ-ನೋಡಿ ವಚನ 590.
ಇಷ್ಟರಿಂದಲೇ ಮಚ್ಚಿಗ ಮುಂತಾದವರಲ್ಲಿ ಬಸವಣ್ಣನವರು ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರೆಂಬುದು ಸಿದ್ಧವಾಗುವುದಿಲ್ಲ. ಅದೇ 590ನೇ ವಚನದಲ್ಲಿ “ಶ್ವಪಚೋಪಿಯಾದರೇನು ಶಿವಭಕ್ತನೇ ಕುಲಜನು”ಎಂದು ಬಸವಣ್ಣನವರು ತಮ್ಮ ಆಚರಣೆಯ ನಿಲುವನ್ನು ಸ್ಪಷ್ಟಪಡಿಸಿಕೊಂಡಿರುವರು. (ನೋಡಿ 584ನೇ ವಚನದ ವ್ಯಾಖ್ಯಾನ).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.