ಹೊಲೆಯೊಳಗೆ ಹುಟ್ಟಿ ಕುಲವನರಸುವ,
ಎಲವೋ, ಮಾತಂಗಿಯ ಮಗ ನೀನು!
ಸತ್ತುದನೆಳೆವನೆತ್ತಣ ಹೊಲೆಯ?
ಹೊತ್ತು ತಂದು ನೀವು ಕೊಲುವಿರಿ.
ಶಾಸ್ತ್ರವೆಂಬುದು ಹೋತಿಂಗೆ ಮಾರಿ,
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು, ಶರಣಸನ್ನಿಹಿತರು,
ಅನುಪಮಚರಿತ್ರರು:
ಅವರಿಗೆ ತೋರಲು ಪ್ರತಿಯಿಲ್ಲವೋ!
Hindi Translationरजस में जन्म लेखर जाति ढूँढता है,
अरे मातंगपुत्र है तू -
मृतक को ढोनेवाला कहाँ का चाँडाल है?
तू ढोकर लाता है और मारता है ।
शास्त्र बकरी के लिए मृत्यु बना,
वेद तुमको विदित नहीं है ।
मम कूडलसंगमेश के शरण कर्म विरहित
शरण सन्निहित वे अप्रतिम है, अनुपम चरित हैं ॥
Translated by: Banakara K Gowdappa
English Translation You man who, born of flow of blood,
Are keen on caste, you are
The son of a common wench!
Who is he a low-born man
Who carries carrion?
You kill your meat,
Shouldering it home!
What you call Śāstra is death to a goat;
What you call Veda is Greek to you!
Our Kūḍala Saṅga's Śaraṇās
Are karma-free, have God in them;
Their lives are without peer:
You cannot show
A parallel to them!
Translated by: L M A Menezes, S M Angadi
Tamil Translationஅழுக்கிலே பிறந்து, குலத்தைத் தேடுவாய்
நீ புலைச்சியின் மகனாவாய்
மடிந்ததை இழுத்து வருபவன் எத்தகு புலையன்?
சுமந்து வந்து நீவிர் கொல்வீர்
சாத்திரம் என்பது ஆட்டிற்கு அழிவு
நீங்கள் வேதத்தை அறியீர்
நம் கூடல சங்கனின் அடியார்
வினையற்றோர் அடியாருடன் கூடியிருப்போர்
ஒப்பற்ற வரலாற்றை உடையோர்
அவர்களை வேறு எதனுடனும் ஒப்பிடவியலுமோ?
Translated by: Smt. Kalyani Venkataraman, Chennai
Telugu Translationమైలలో బుట్టు మాతంగి కొడుకా!
కులమంచు గుణియింతువే? నీవు
చచ్చిన దూడల మోయువాడు మాలయే?
బ్రతికిన ప్రాణుల బట్టి దెచ్చి చంపెదరే మీరు
శాస్త్రమన్న హోతకు మారి
వేదమన్నది మీకు తెలియదు
సంగని శరణులు కర్మవిరహితులు
శరణా సన్నహితులు; అనుపమ చరిత్రులు
వారికి ప్రతి యెవ్వరూ లేరురా చూడ.
Translated by: Dr. Badala Ramaiah
ಕನ್ನಡ ವ್ಯಾಖ್ಯಾನ590ನೇ ವಚನದಲ್ಲಿ ಮಾರ್ಕಂಡೇಯ ಋಷಿ ಒಬ್ಬ ಮಾತಂಗಿ(ಅಸ್ಪೃಶ್ಯಸ್ತ್ರೀ)ಯಲ್ಲಿ ಹುಟ್ಟಿದವನೆಂದು ಬಸವಣ್ಣನವರು ಹೇಳಿದ್ದಾರೆ. ಹೀಗೆ ಸ್ವತಃ ಅಸ್ಪೃಶ್ಯನಾದ ವೈದಿಕನು (ಸಾಮಾಜಿಕ) ಅಸ್ಪೃಶ್ಯರಲ್ಲಿ ಅಸ್ಪೃಶ್ಯತೆಯನ್ನು ಎಣಿಸುವುದನ್ನು ಸಹಿಸುತ್ತಿಲ್ಲ ಇದು ಹುಟ್ಟಿನ ವಿಚಾರವಾಯಿತು-ಇನ್ನು ಆಚರಣೆಯಿಂದಲಾದರೂ ಪಶುಬಲಿಯನ್ನು ಕೊಟ್ಟು ಯಾಗ ಮಾಡುವ ವೈದಿಕನು ಒಬ್ಬ ಅಸ್ಪೃಶ್ಯನಿಗಿಂತಲೂ ಮೇಲಲ್ಲವೆಂದು ವಾದಿಸುತ್ತಿರುವರು. ಅಸ್ಪೃಶ್ಯರು ಸತ್ತ ಪ್ರಾಣಿಗಳನ್ನು ಮಾತ್ರ ಎಳೆದು ತಂದು ತಿಂದರೆ-ವೈದಿಕನು ಹೋತು ಮುಂತಾದ ಪ್ರಾಣಿಗಳನ್ನು ಯಜ್ಞಶಾಲೆಗೆ ಜೀವಂತವಾಗಿದ್ದಾಗಲೇ ಹೊತ್ತುತಂದು ಕತ್ತು ಹಿಸುಕಿ ಕೊಂದು ತಿನ್ನುವನೆಂಬುದು ಅವರ ಆಕ್ಷೇಪಣೆ.
ವೇದದ “ಬ್ರಾಹ್ಮಣ”ವಿಭಾಗದ ಕರ್ಮಠತೆಗೆ ತಮ್ಮ ವಿವೇಕವನ್ನೆಲ್ಲ ಮಾರುಗೊಟ್ಟು, ಅನರ್ಘ್ಯವಾದ ಉಪನಿಷದ್ವಿಭಾಗದ ಸರ್ವಜೀವದಯಾಪರತೆಯ ಸಮಾನತೆಯ ಅದ್ವೈತನಿಷ್ಠೆಯನ್ನು ಕಡೆಗಣಿಸಿದ್ದ ತಮ್ಮ ಕಾಲದ ವೈದಿಕರಿಗೆ-ವೇದವೆಂದರೇನೆಂಬುದು ಗೊತ್ತಿಲ್ಲವೆಂದು ಬಸವಣ್ಣನವರು ಆರೋಪಿಸುತ್ತಿರುವುದರಲ್ಲಿ ಸತ್ಯದೂರವಾದುದೇನೂ ಇಲ್ಲವೆನಿಸುವುದು. ಮತ್ತು ಅವರ ಈ ಹೇಳಿಕೆಯಲ್ಲಿ ವೇದದ ಬಗೆಗಿನ ಉತ್ತಮ ದೃಷ್ಟಿಯನ್ನೂ ಕಾಣಬಹುದಾಗಿದೆ. ಈ ದೃಷ್ಟಿಯಿಂದಲೇ ಬಸವಣ್ಣನವರು ಶರಣರನ್ನು ಕರ್ಮವಿರಹಿತರೆಂದೂ ಸಚ್ಚರಿತ್ರರೆಂದೂ ಉಪಮಾತೀತರೆಂದೂ ಪ್ರಶಂಸಿಸುತ್ತಿರುವರು.
ವೈದಿಕ ಪೂಜಾವಿಧಾನಗಳನ್ನು ಸಾತ್ವಿಕಗೊಳಿಸಿದ ಕೀರ್ತಿಯ ಒಂದಂಶ ಬುದ್ಧ ಮಹಾವೀರರಿಗೇ ಅಲ್ಲದೆ ಬಸವಣ್ಣನವರಿಗೂ ಸಲ್ಲುವುದೆಂಬುದನ್ನು ಮರೆಯಲಾಗದು. (ಮಾತಂಗಿಯ ಮಗನೆಂಬುದಕ್ಕೆ ನೋಡಿ 584ನೇ ವಚನ ವ್ಯಾಖ್ಯಾನವನ್ನು.)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.