Hindi Translationजाति से ब्राह्मण ब्रह्म हत्या का भागी बनता है,
और के परकृत पाप के लिए हाथ पसारता है!
यह देवभक्त के समान है?
यह लिंगभक्त के समान है?
बढइन माचलादेवी को कुलीन बना का वादा कर
सुवर्ण धेनु के उच्छिष्ट एरंड के पत्ते के दूध से
खाना पकाकर खानेवालों को क्या कहूँ कूडलसंगमदेव?
Translated by: Banakara K Gowdappa
English Translation The sacrificer, by his caste, inclines
To slay the Brahma principle
When he extends his palm for alms
For sins committed by some one else!
Is he the equal of the god's devotees?
Is he the equal of Liṅga's devotees?
O Kūḍala Saṅgama Lord, what shall I say
Of those who cook and eat their food
Out of the boiling milk,
Emerging from the mouth
Of a cow wrought of gold
To turn Macaladevi, born of carpenters,
Into a well-born dame.
Translated by: L M A Menezes, S M Angadi
Tamil Translationகுலத்தில் அந்தணன், வேதியனைக் கொன்றவனைச் சார்ந்தவன்
யாரோ செய்த பாவத்திற்குத் தானே பொறுப்பேற்பான்
இவன் கடவுள் பக்தருக்கு இணையோ?
இவன் இலிங்க பக்தருக்கு இணையோ?
பொற்பசுவின் ஆமணக்கு இலையின் எஞ்சியுள்ள
பாலிலிருந்து கஞ்சியைச் செய்து உண்பவரை
என்னென்பேன் கூடல சங்கமதேவனே.
Translated by: Smt. Kalyani Venkataraman, Chennai
Telugu Translationబ్రహ్మహత్యను తెగవాగు జాతి. విప్రుడు;
ఎవని పాసమునకో చేసాచు సరికాదిది
శివభక్తులకు; వడ్రంగి మాచలదేవిని
కులజను చేసెద మంచు కపిల గోవుపాలును
రావణోచ్ఛిష్టమును వండి తినువారి నే మందు దేవా?
Translated by: Dr. Badala Ramaiah
ಕನ್ನಡ ವ್ಯಾಖ್ಯಾನಬ್ರಾಹ್ಮಣನು ದುಡ್ಡಿಗಾಗಿ ಹೊನ್ನಿಗಾಗಿ ಏನನ್ನಾದರೂ ಮಾಡಲು ಮತ್ತು ತಿನ್ನಲು ಹೇಸನೆಂಬುದು ಈ ವಚನದ ತಾತ್ಪರ್ಯ. ಕೂಡಲ ಸಂಗಮಾಂಕಿತದಲ್ಲಿ ಇಂಥ ವಚನಗಳನ್ನು ಬರೆದು ಬಸವಣ್ಣನವರಿಗೆ ಅಳಿಸಲಾಗದ ಕಳಂಕವನ್ನು ಹಚ್ಚುತ್ತಿರುವೆವೆಂಬುದನ್ನು ಅಂದಿನ ಪ್ರಕ್ಷೇಪಕಾರರು ತಿಳಿಯಲಿಲ್ಲ. ಅವರ ಒಂದೇ ಒಂದು ಹೊಟ್ಟೆ ಉರಿಯೆಂದರೆ-ತಮಗಿಲ್ಲದ ಸವಲತ್ತು ಬ್ರಾಹ್ಮಣನಿಗಿದೆಯೆಂಬುದೇ ಆಗಿದೆ. ಮಾಚಲದೇವಿಯ ಪ್ರಸಂಗದಲ್ಲಿರುವ ಬ್ರಾಹ್ಮಣರ ನಡೆವಳಿ ನಿಜವೇ ಸುಳ್ಳೇ ಎಂಬುದು ಪ್ರಸ್ತುತವಲ್ಲ. ಅಂಥದೊಂದು ಕಥೆಯನ್ನು ಬಳಸಿಕೊಂಡು ಶಿವಭಕ್ತರಲ್ಲಿ ಬ್ರಹ್ಮಾಣದ್ವೇಷವನ್ನು ಬಿತ್ತುವುದೇ ಮಹೋದ್ದೇಶವಾಗಿತ್ತು ಪ್ರಕ್ಷೇಪಕಾರರಿಗೆ.
ಹೇಗೂ ಈ ವಚನದಲ್ಲಿರುವುದು ಬ್ರಾಹ್ಮಣವಿಮರ್ಶೆಯಲ್ಲ ದೂಷಣೆ. ಇಂಥ ದೂಷಣೆ-ಇದಿರ ಹಳಿಯಲು ಬೇಡ(ನೋಡಿ ವಚನ-236)ವೆಂದ ಬಸವಣ್ಣನವರದೆಂದು ಕ್ಷಣವಾಗಲಿ ನಂಬುವುದು ಅವಿವೇಕ.
ವಿ : ಮಾಚಲದೇವಿಯ ಕಥೆ : ವಿಪ್ರಕುಲದ ಆದಿಯನೆತ್ತಿ ಖಂಡಿಸುತ್ತಿರ್ದನು : ಬಡಗಿ ಮಾಚಲದೇವಿಯ ಕುಲಜೆಯ ಮಾಡಬೇಕೆಂದು ನಳಚಕ್ರವರ್ತಿ ಕೇಳಲು ಹದಿನೆಂಟು ಲಕ್ಷ[+ಣR]ದಲ್ಲಿ ಹೊನ್ನ ಗೋವ ಮಾಡಿಸಿ-ಆ ಸತಿಯು ಅದರಲ್ಲಿ ನುಸಿದು ಬಂದರೆ ಜನ್ಮವಳಿದೀತೆಂದು ಪೇಳಲು-ನಳನು ನನಗೆ ಸಂದೇಹವೆನಲು. ಅದಕ್ಕೆ ವಿಪ್ರರು ಮೂರು ಕೊಪ್ಪರಿಗೆಯಲ್ಲಿ ಹಾಲು ತುಂಬಿಸಿ ಆಕೆಯನದರಲ್ಲಿ ಮುಳುಗಿಸಿ ಸರ್ವಾಂಗವೂ ತೊಳೆದು ಕುಲವಳಿಯಿತು-ಸಂಕಲ್ಪ ಬೇಡವೆಂದು ನೃಪನಿಗೆ ಹೇಳಿ-ಅಂಗದ ಉಚ್ಚಿಷ್ಟದಾ ಹಾಲೊಳಗೆ ರಾಜಾನ್ನದಕ್ಕಯನ್ನು ಹಾಕಿ ಹರಳ ದಂಟ ಸಟ್ಟುಗವ ಮಾಡಿ ತೊಳಸಿ ಪಾಯಸವನಟ್ಟುಂಡು-ಉಳಿದ ಹಾಲ ಮಂತ್ರಿಸಿ ಕುಡಿದು ಕುಲ ಶುದ್ಧವಾಯಿತ್ತೆಂದು ಅಬದ್ಧವ ಭೂಪಗೆ ಪೇಳಿ-ಹೊನ್ನ ಗೋವ ಕಡಿದು ಭಾಗೆಯ ಮಾಡುವಾಗ-ಮುನ್ನ ವಿಪ್ರರ ತಂದೆ ದಧೀಚಿ, ಆತಂಗೆ ಮಾತಂಗಿ, ರೇಣುಕೆ (ಎಂಬ ಹೆಂಡತಿಯರು. ಮಾತಂಗಿಯ ಮಕ್ಕಳೆ ವಿಪ್ರರು, ರೇಣುಕೆಯ ಮಕ್ಕಳೇ ಶ್ವಪಚರು. ಅದು ಕಾರಣ ಹೊನ್ನ ಗೋವ ಕಡಿವಾಗ ಶ್ವಪಚರು ದಾಯದ್ಯಭಾಗೆಯ ಬೇಡಿ ಕದನವ ಮಾಡಲು-ಅಷ್ಟರೊಳಗೆ ದಧೀಚಿ ಬಂದು ಕೊಂಬು ಕೊಳಗು ತಲೆ ಬಾಲವ ಶ್ವಪಚರಿಗೆ ಕೊಟ್ಟು ಉಳಿದ ಹೇಹವನ್ನು ನೀವು ತೆಗೆದುಕೊಳ್ಳಿ ಎಂದು ವಿಪ್ರರಿಗೆ ಕೊಡಲು-ಅವರು ಅದರೊಳಗೆ ಹದಿನೆಂಟು ಭಾಗೆಯ ಮಾಡಿಕೊಂಡು-ತಂದೆಯಾದ ದಧೀಚಿಯು ಊರೊಳಗೆ ವಿಪ್ರರನಿಟ್ಟು ವೇದಾಗಮವ ಕಲಿಸಿ ಯಜ್ಞಾದಿ ಮೊದಲಾದ ಎಂಬತ್ತೆಂಟು ಲೌಕಿಕಾಚಾರದಲ್ಲಿ ಇರಿಯೆಂದು ಇರಿಸಿದನು. ಶ್ವಪಚರನು ಊರ ಹೊರಗೆ ಇಟ್ಟು ಕೂಲಿಯ ಮಾಡಿದುಡಿದುಣ್ಣಿ ನೀವು ಸಜ್ಜನರು-ದುರ್ಜನರಾದ ವಿಪ್ರರ ಕಂಡರೆ ಸಂಬೋಳಿ ಎನ್ನಿ ಎಂದು ಜಗಳವ ಬಿಡಿಸಿದನು (ಭೈರವೇಶ್ವರಕಾವ್ಯಕಥಾ ರತ್ನಾಕರ ಪುಟ 424-425).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.