Hindi Translationअग्नि को देव समझकर हवि अर्पित करनेवाले
ब्राह्मण के घर में आग लगने पर
मोरी का पानी, गली की धूल उडेलकर
कोलाहल मचाते हुए सब को बुलाते हैं ।
कूडलसंगमदेव को वंदना करना भूल निंदा करते हैं ॥
Translated by: Banakara K Gowdappa
English Translation In a brahmin house
where they feed the fire
as a god.
when the fire goes wild
and burns the house
they splash on it
the water of the gutter
and the dust of the street,
beat their breasts
and call the crowd.
These men then forget their worship
and scold their fire,
O lord of the meeting rivers!
Translated by: A K Ramanujan Book Name: Speaking Of Siva Publisher: Penguin Books ----------------------------------
In the sacrificer's house, who pours
Ghee and so forth upon the fire
Believing it to be a god,
Should fire break out and burn, they throw
Sink water or street dust, and call
The whole world to their aid with yells!
They forget and blame Lord Kūḍala Saṅgama!
Translated by: L M A Menezes, S M Angadi
Tamil Translationஅழல் கடவுள் என நெய்யைச் சொரியும்
வேதியரின் இல்லத்தில் நெருப்பு அடர்ந்து
சுடும்பொழுது, கழிவுநீரை, புழுதியைப் பரப்பி
கூச்சலிட்டு அனைவரையும் அழைப்பர் ஐயனே
கூடலசங்கம தேவனே, வணங்குவதை மறந்து
இகழ்ந்து கொண்டிருந்தனர் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನವಿಪರ್ಯಾಸ!
ಕ್ಷುದಾಗ್ನಿಯ ತಾಪದಿಂದ ಬೇಸತ್ತು ಬಳಲಿ ‘ಅನ್ನಾ, ಅನ್ನಾ’ ಎಂದುಮೊರೆಯಿಡುವ ಹಸಿದವರ ಹೊಟ್ಟೆಯೇ ಯಜ್ಞಕುಂಡ. ಅಂತಹ ಯಜ್ಞಕುಂಡದಲ್ಲಿ ಅನ್ನವನ್ನು ಹಾಕಬೇಕು. ಆದರೆ ಹಾಗೆ ಮಾಡದೆ ಇಟ್ಟಿಗೆಗಳಿಂದ ಪ್ರತ್ಯೇಕ ಒಂದು ಯಜ್ಞಕುಂಡವನ್ನು ನಿರ್ಮಿಸಿ ಅದರಲ್ಲಿ ಹಾಲು ತುಪ್ಪವನ್ನು ಸುರಿಯುವರು ವೈದಿಕರು. ಇದನ್ನು ಕಂಡೇ ಕೆರಳಿದ ಬಸವಣ್ಣನವರು ಅಂತಹವರನ್ನು ಕುರಿತು ಕಟಕಿಯಾಡುತ್ತಿದ್ದಾರೆ ಈ ವಚನದಲ್ಲಿ. ವೈದಿಕನು ಅಗ್ನಿಯೇ ದೇವರೆಂದು ನಂಬಿ ವೇದ ಮಂತ್ರಗಳಿಂದ ಅದನ್ನು ಸುತ್ತಿಸುತ್ತಾ ಯಜ್ಞಕುಂಡದಲ್ಲಿ ಹವಿಸ್ಸನ್ನು ಹಾಕುವನು. ಒಂದು ವೇಳೆ ಅವನ ಭಕ್ತಿಗೆ ಮೆಚ್ಚಿ ಆ ಆಗ್ನಿದೇವ ಅವನ ಮನೆತುಂಬಾ ಪ್ರತ್ಯಕ್ಷನಾದರೆ ಆಗ ಅವನ ಸ್ಥಿತಿಯೇನು? ಅಗ್ನಿದೇವ ಪ್ರತ್ಯಕ್ಷನಾದನೆಂದು ಸಂತೋಷದಿಂದ ನಮಸ್ಕರಿಸುವನೇ? ಆಗಲೂ ವೇದ ಮಂತ್ರಗಳನ್ನು ಪಠಿಸಿ ಹವಿಸ್ಸನ್ನು ಹಾಕುವನೇ? ಅವೆಲ್ಲಾ ಇರಲಿ, ಅಯ್ಯೋ ಈ ಹಾಳು ಬೆಂಕಿಯು ಮನೆಯನ್ನೆಲಾ ಸುಡುತ್ತಿರುವುದಲ್ಲಾ ಎಂದು ನಿಂದಿಸುತ್ತಾ ಹವಿಸ್ಸಿನ ಬದಲು ಬಚ್ಚಲ ನೀರನ್ನು, ಬೀದಿಯ ಧೂಳನ್ನೂ ಅಷ್ಟೆ ಏಕೆ ಕೈಗೆ ಸಿಕ್ಕುದನ್ನೆಲ್ಲ ಎರಚುತ್ತಾ, ಬೆಂಕಿಯನ್ನು ಶಪಿಸಿ ಬೊಬೆಯಿಟ್ಟು ಊರಿನ ಜನರನ್ನೆಲ್ಲಾ ಕೂಗಿ ಕರೆಯುತ್ತಾನೆ. ಅದೇ ವೈದಿಕನ ಯಜ್ಞದಲ್ಲಿ ಹವಿಸ್ಸನ್ನು ಹಾಕುತ್ತಿರುವಾಗ ಇವನು ಶೂದ್ರ, ಇವನು ಹೊಲೆಯ, ಇವನು ಬಂದರೆ ಯಜ್ಞಶಾಲೆ ಅಪವಿತ್ರವಾಗುವುದು ಎಂದು ಜನರನ್ನು ಹೀನವಾಗಿ ಕಂಡು ದೂರ ಇರಿಸಿದ್ದ. ಆದರೆ ಅವನಿಗೆ ಈಗ ಅದೇ ಜನ ಬೇಕಾಗಿದ್ದಾರೆ. ಅವನೇ ಅವರನ್ನು ಕೂಗಿಕರೆಯುತ್ತಿದ್ದಾನೆ. ಎಂತಹ ವಿಪರ್ಯಾಸ! ‘..... ವಂದನೆಯ ಮರೆದು ನಿಂದಿಸುತಿರ್ದರಯ್ಯಾ ಕೂಡಲಸಂಗಮದೇವಾ’.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.