ಬಸವಣ್ಣ   
Index   ವಚನ - 587    Search  
 
ಎನಿಸನೋದಿದರೇನು? ಎನಿಸ ಕೇಳಿದರೇನು? ಚತುರ್ವೇದಪಾಠ ತೀವ್ರವಾದರೇನು? ಲಿಂಗಾರ್ಚನೆ ಹೀನನಾದರೆ; ಶಿವಶಿವಾ. ಬ್ರಾಹ್ಮಣನೆಂಬೆನೆ? ಎನಲಾಗದು. 'ಜನ್ಮನಾ ಜಾಯತೇ ಶೂದ್ರಃ|| ಕರ್ಮಣಾ ದ್ವಿಜ ಉಚ್ಯತೇ ಶ್ರುತೇನ ಶ್ರೋತ್ರಿಯಶ್ಚೈವ|| ಬ್ರಹ್ಮ ಚರತೀತಿ ಬ್ರಾಹ್ಮಣಃ' ಎಂಬುದಾಗಿ, ಬ್ರಹ್ಮನಾಸ್ತಿ ಶ್ವಪಚರಧಮರೆಂದುದಾಗಿ, ಇದು ಕಾರಣ, ಕೂಡಲಸಂಗಮದೇವಾ `ವೇದಭಾರಭರಾಕ್ರಾಂತಾಃ ಬ್ರಾಹ್ಮಣಾ ಗರ್ದಭಾ' ಎಂಬೆನು.