Hindi Translationहमारे लोग श्रेष्ठ हैं, सर्व श्रेष्ठ
श्वान-कपाल में पकाना
उसे जूते से ढकना किस आगम में है?
कूडलसंगमदेव, तव वचन है,
‘भवि’ से दृष्ठ भोजन
लिगांर्पण के योग्य नहीं है ॥
Translated by: Banakara K Gowdappa
English Translation Our own are higher, higher than all is he:
O Sir, his cooking pot is a dog’s skull!
Which Āgama is it, good Sir, permits
To close it by his shoes ?
O KudalaSangama Lord,
Thus runs Thy word; “ The food worldlings saw
Is not meet offering to God”.
Translated by: L M A Menezes, S M Angadi
Tamil Translationஎம்மவர் மேலானவர் அனைவரை விட மேலானவர்
சமைக்கும் பாண்டம் நாயின் மண்டை ஒடு ஐயனே
பாதுகையால் மூடுவது எந்த ஆகமம் ஐயனே?
கூடல சங்கம தேவனே, உம் வசனம்,
“நெறியிலி நோக்கிய உணவு என்றுமே இலிங்கத்திற்குக்
காணிக்கையாக வியலாது” என்று இயம்புகிறதன்றோ
Translated by: Smt. Kalyani Venkataraman, Chennai
Telugu Translationఅధికులు మా వారే అధికులని చెప్పితిరే;
వండెడిపాత్ర కుక్కపుఱ్ఱె! చెప్పులతో మూయుటిది
ఏ యాగమాచారమయ్యా? దేవా నీ వచనము ,
‘‘భవిచూచినపాకము లింగార్పితము కాదనుచుండె’’
Translated by: Dr. Badala Ramaiah
ಕನ್ನಡ ವ್ಯಾಖ್ಯಾನವೈದಿಕನು ಎಷ್ಟೇ ಜ್ಞಾನಿಯಾದ ದಲಿತನೊಬ್ಬನನ್ನು ಅಸ್ಪೃಶ್ಯನೆಂದು ಕರೆಯುವುದು ಎಷ್ಟು ಅನುಚಿತವೆಂಬುದು ಮನವರಿಕೆಯಾಗಬೇಕಾದರೆ-ದಲಿತನು ಜಾತಿವಾದಿಯಾದ ಆ ವೈದಿಕನನ್ನು ಅಸ್ಪೃಶ್ಯನೆಂದು ಕರೆದಾಗ ಮಾತ್ರ.
ಶಿಷ್ಯರು ದುಡಿದು ತಿನ್ನುವ ಜನಸಾಮಾನ್ಯರನ್ನು ಅಸ್ಪೃಶ್ಯ ಅಥವಾ ಶೂದ್ರ ಎಂದರೆ-ಆ ಶೂದ್ರಾದಿಗಳು ತಮ್ಮನ್ನು ನಾನು ವಿಧವಾಗಿ ಶೋಷಿಸುವ ಶಿಷ್ಟರನ್ನು “ಭವಿ”ಗಳೆಂದು ಕರೆಯುವುದು ಸ್ವಾಭಿಮಾನಿಯ ಮತ್ತು ಸತ್ಯಾಗ್ರಹಿಯ ಸಹಜವಾದ ಭಾಷೆಯೇ ಆಗಿದೆ. ಆದುದರಿಂದಲೇ ಬಸವಣ್ಣನವರು ಯಥಾರ್ಥವಾಗಿಯೇ ಶ್ವಪಚಯ್ಯ ಮುಂತಾದ ದಲಿತ ಭಕ್ತರನ್ನು-ಎಮ್ಮವರು ಅಧಿಕರು ಎಲ್ಲರಿಂದವೂ ಅಧಿಕರು ಎಂದು ಅಭಿಮಾನಿಸಿ ವೈದಿಕನನ್ನು ಭವಿ ಎಂದು ದೂರಿಕರಿಸಿದರು.
ಶ್ವಪಚಯ್ಯನೆಂಬ ಶಿವಭಕ್ತನು ಆಡುತ್ತಿದ್ದುದು ನಾಯ ಕಪಾಲಪಾತ್ರೆಯಲ್ಲಿ ಎಂಬುದಾಗಲಿ, ಸಾಮವೇದಿಯೆಂಬೊಬ್ಬ ಚತುರ್ವೇದಿಯ ನೆಳಲು ಬಿದ್ದರೆ ಆ ಅಡಿಗೆ ಮೈಲಿಗೆಯಾದೀತೆಂದು ಆ ಪಾತ್ರೆಯ ಮೇಲೆ ಮುಚ್ಚಿದ್ದು ಒಂದು ಎಕ್ಕಡವೆಂಬುದಾಗಲಿ ಬಸವಣ್ಣನವರಿಗೆ ಅಸಂಬದ್ಧವೆನಿಸಲಿಲ್ಲ. ತಮ್ಮ ಮಾರ್ಗದಲ್ಲಿ ತಮ್ಮ ಪಾಡಿಗೆ ತಾವು ಶಿವಭಕ್ತಿಯಲ್ಲಿ ತೊಡಗಿರುವ-ಆ ಕಾರಣದಿಂದಲೇ ಎಲ್ಲರನ್ನೂ ಶಿವನೆಂದು ಗೌರವಿಸುವ ಶ್ವಪಚಯ್ಯನಂಥವರನ್ನು ಅಸ್ಪೃಶ್ಯರೆನ್ನುವ ಸಾಮವೇದಿಯಂಥವರು ಬ್ರಾಹ್ಮಣರೇ ಆದರೂ ಅವರನ್ನು “ಭವಿ”ಗಳೆಂಬುದು ಆಗಮಸಮ್ಮತವೇ ಆಗಿದೆಯೆಂಬುದು ಬಸವಣ್ಣನವರ ಅಭಿಪ್ರಾಯ (ನೋಡಿ ವಚನ-150).
ವಿ: “ಶ್ವಪಚಯ್ಯನು ನಾಯ ಕಪಾಲಪಾತ್ರೆ(ಡೋವಿಗೆ)ಯಲ್ಲಿ ಪಾಕವ ಮಾಡುತ್ತಿರಲು-ಅತ್ತ ಖೇಚರದಲ್ಲಿ ಬಪ್ಪ ಸಾಮವೇದಿಯ ನೆಳಲು ಬೀಳುತ್ತಿರಲು ತಮ್ಮ ಪಾದರಕ್ಷೆಯ ಮುಚ್ಚುವುದ ಕಂಡು ಕೋಪಿಸಿ ಇದೇಕೆಂದು ಕೇಳಲು-ಭವಿದೃಷ್ಟಿ ಸೋಂಕಿದುದು ಕಲ್ಬಿಷವೆಂದು ದೃಷ್ಟವ ತೋರಲು ಅವರಡಿಗೆರಗಿ ಉಪದೇಶವ ಪಡೆದು ಶಿವಭಕ್ತಿಮಾರ್ಗದಲ್ಲಿ ಆಚರಿಸುತ್ತಿದ್ದರು”(ಬಸವೇಶ್ವರ ಷಟ್ಸ್ಥಲ ವಚನದ ಕಥಾಸಾರ-ಪುಟ 82)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.