ಬಸವಣ್ಣ   
Index   ವಚನ - 606    Search  
 
ಚತುರ್ವೇದಿಯಾದರೇನು? ಲಿಂಗವಿಲ್ಲದವನೇ ಹೊಲೆಯ! ಶ್ವಪಚನಾದರೇನು? ಲಿಂಗವಿದ್ದವನೇ ವಾರಣಾಸಿ. ಆತನ ನುಡಿಗಡಣವೇ ಲೇಸು, ಆತ ಜಗಕ್ಕೆ ಪಾವನ; ಆತನ ಪ್ರಸಾದವೆನಗಮೃತಸೇವನೆ! 'ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ| ತಸ್ಮಾದೇಯಂ ತತೋ ಗ್ರಾಹ್ಯಂ|| ಸ ಚ ಪೂಜ್ಯೋ ಯಥಾಹ್ಯಹಂ' ಕೂಡಲಸಂಗಮದೇವನನರಿತು ಪೂಜಿಸಿದಾತ ಷಡುದರುಶನಕ್ಕಧಿಕ, ಜಗಕ್ಕೆ ಪಾವನ, ನೋಡಾ!