ಬಸವಣ್ಣ   
Index   ವಚನ - 621    Search  
 
ಹಲವು ಕೊಂಬಿಂಗೆ ಹಾಯಬೇಡ: ಬರುಕಾಯಕ್ಕೆ ನೀಡಬೇಡ, ಲೋಗರಿಗೆಡೆಗೊಟ್ಟು ಭ್ರಮಿತನಾಗಿರಬೇಡ! ಆಚಾರವೆಂಬುದು ಹಾವಸೆಗಲ್ಲು: ಭಾವತಪ್ಪಿದ ಬಳಿಕ ಏಗೆಯ್ದೊಡಾಗದು. ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು: ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ!