ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು:
ಉದ್ಧರಿಸುವನೊಬ್ಬ, ಶಿವಶರಣ, ಸಾಲದೆ?
ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ:
ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ!
ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ:
ಕೊಟ್ಟ ದಾಸ ತವನಿಧಿಯ ಪಡೆದ!
ಕಪಟದಿಂದೆ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ:
ಕೊಟ್ಟ ಕರ್ಣ ಕಳದಲ್ಲಿ ಮಡಿದ!
ಕಾಮಾರಿ ಜಂಗಮನಾಗಿ ಬಂದು ಸಿರಿಯಾಳನ ಮಗನ ಬೇಡಿದ:
ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರವ ಕೈಲಾಸಕ್ಕೊಯ್ದ!
ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ:
ಕೊಟ್ಟ ನಾಗಾರ್ಜುನನ ಶಿರ ಹೋಯಿತ್ತು!
ಶಿವನು ಜಂಗಮನಾಗಿ ಬಂದು ಸಿಂಧುಬಲ್ಲಾಳನ ವಧುವ ಬೇಡಿದ:
ಕೊಟ್ಟ ಸಿಂಧುಬಲ್ಲಾಳ ಸ್ವಯ ಲಿಂಗವಾದ!
ಇದು ಕಾರಣ, ಇಲ್ಲಿಯೂ ಲೇಸು, ಅಲ್ಲಿಯೂ ಲೇಸು:
ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ.
Hindi Translationद्विजों को देकर बहुजन नष्ट हुए
उद्धारक, एक शिवशरण पर्याप्त नहीं?
नारायण ने वृद्ध ब्राह्मण के रूप में आकर
बलि से भूदान माँगा ।
दाता बलि बंधन में फँसा !
ईशने भक्त के रूप में आकर दास से वस्त्र माँगा,
दाता दासने अनंतनिधि पाई ।
नारायण ने कपट ब्राह्मण के रूप में आकर
कर्ण का कवच माँगा;
दाता कर्ण युद्धभूमि में मरा-
कामारि ने जंगम के रूप में आकर
सिरियाळ के पुत्र को माँगा;
दाता सिरियाळ कंचीपुर कैलास ले गया,
नारायण ने ब्राह्मण के रूप में आकर
नागार्जुन का सिर माँगा,
दाता नागार्जुन का सिर गया ।
शिव ने जंगम के रूप में आकर
सिंधु बल्लाळ की पत्नी को माँगा,
दाता सिंधू बल्लाळ स्वयं लिंग बना ।
इस कारण से यहाँ भी मंगल है, वहाँ भी मंगल है,
दे दो मम कूडलसंग के शरणों को ॥
Translated by: Banakara K Gowdappa
English Translation Many a one, by giving to the twice-born,
Have suffered loss:
There is one to save us-will not
Śivaśaraṇa suffice?
Nārāyaṇa, coming as an old Brahmin,
Begged Bali for land:
Bali, who gave, was trapped!
God coming as a devotee,
Begged Dāsa for cloth:
Dāsa, by giving, earned
Inexhaustible wealth!
Nārāyaṇa, coming as a priest,
Begged Karṇa for his armour:
Karṇa who gave, died on the field!
The bane of Kāma, coming as a Jaṅgama,
Begged Siriyāḷa for his son:
Siriyāḷa, the merchant gave, and so
Bore Kanci to Kailāsa!
Nārāyaṇa, coming as a priest,
Begged Nāgārjuna far his head:
Nāgārjuna gave: his head has gone!
Śiva, coming as a Jaṅgama,
Begged Sindhubāḷalla for his wife:
Sindhubāḷalla, giving, was deified!
So then, it pays
Hereafter as well as here:
Give, give to our ,Kūḍala Saṅga 's Śaraṇās!
Translated by: L M A Menezes, S M Angadi
Tamil Translationஅந்தணருக்கு ஈந்து பலரும் கெட்டனர்
முன்னேற்றும் ஒருவன் சிவனடியார் போதாதோ?
நாராயணன் வயோதிக அந்தணனாக வந்து
பலியிடம் பூமியை வேண்டினன்
அளித்த பலி பிணைப்பில் சிக்கினன்
ஈசன் பக்தனாகி வந்து தாசனின் உடையை வேண்டிட
ஈந்த தாசன் அழியா அருளைப் பெற்றனன்
கபடத்துடன் நாராயணன் அந்தணனாகி வந்து
கர்ணனின் கவசத்தை வேண்டினன்
ஈந்த கர்ணன் களத்திலே மடிந்தனன்
அன்புமிக்க ஜங்கமனாக வந்து சிறுத்தொண்டரின்
மகனை வேண்டினன் அளித்த சிறுத்தொண்டர்
காஞ்சியைக் கைலாசத்திற்குக் கொண்டேகினன்
நாராயணன் அந்தணனாகி வந்து நாகார்ஜுனனின்
தலையை வேண்டினன். அளித்த நாகார்ஜுனனின்
தலை அகன்றது. சிவன் ஜங்கமனாகி வந்து
சிந்து வல்லாளனின் மனைவியை வேண்டினன்
ஈந்த சிந்து வல்லாளன் இலிங்கமாயினன்
இதனால் இங்கும் நன்மை, அங்கும் நன்மை
நம் கூடல சங்கனின் அடியாருக்கு ஈவிர்.
Translated by: Smt. Kalyani Venkataraman, Chennai
Telugu Translationద్విజులకిచ్చి పలువురు చెడిరి కడ తేర్పశరణుడొక్కడు చాలడే!
వృద్ధ బ్రాహ్మణుడై నారాయణుడు వచ్చి బలిని భూమినడుగు
ఇచ్చిన బలి బంధితుడై పోయె!
శివుడు భక్తుడై వచ్చి దాసుని వస్త్రము గోర;
ఇచ్చిన దాసునికి తవనిధి దక్కె!
కపటవిప్రుడై వచ్చి నారాయణుడు కర్ణుని వేడిన
కవచమిచ్చి కర్ణుడు రణమున చచ్చె:
కామారి జంగముడై వచ్చి సిరియాళుని కొడుకును గోర
ఇచ్చు సిరియాళ సెట్టి కంచితో కై లాసమును చేరె!
పాఱుడై వచ్చి నారాయణుడు శిరము గోర
ఇచ్చిన నాగార్జునుని శిర మెగిరిపోయె!
జంగముడై వచ్చి శివుడు వధువు నడిగిన
ఒప్పించు బల్లాళడు స్వయముగా లింగమయ్యె!
కాన యిహపరంబుల శుభప్రదుడయ్యా మా సంగయ్య.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಈಗಾಗಲೇ ಪ್ರಕ್ಷಿಪ್ತವೆಂದು ಪರಿಗಣಿಸಲಾಗಿರುವ 571ನೇ ವಚನವನ್ನು 445, 434, 435ನೇ ವಚನಗಳ ಸಹಾಯದಿಂದ-ಬ್ರಾಹ್ಮಣರಿಗೆ ಕೊಟ್ಟವರು ಕೆಟ್ಟರು, ಶಿವಶರಣರಿಗೆ ಕೊಟ್ಟವರು ಉದ್ಧಾರವಾದರೆಂದು ಉಭಯ ನಿದರ್ಶನಾತ್ಮಕವಾಗಿ ಅಡಕಮಾಡಿ ಹೇಳುವ ಉದ್ದೇಶದಿಂದ ಈ 623ನೇ ವಚನವನ್ನು ಉತ್ತರೋತ್ತರದಲ್ಲಿ ಮತ್ತೊಬ್ಬನಾವನೋ ಪ್ರಕ್ಷೇಪಮಾಡಿರುವನು. 571ನೇ ವಚನದಲ್ಲಿ ಬ್ರಾಹ್ಮಣರಿಗೆ ಕೊಟ್ಟುವರು ಕೆಟ್ಟರೆಂದು-ಆ ಸಂಬಂಧವಾದ ವ್ಯಕ್ತಿಗಳನ್ನು ಮಾತ್ರ ನಿದರ್ಶಿಸುವುದನ್ನು ಗಮನಿಸಿರಿ.
ಹೀಗೆ ಪಾಪವು ಪಾಪವನ್ನು ಮರಿಹಾಕುವಂತೆ ಪ್ರಕ್ಷಿಪ್ತ ವಚನಗಳ ಆಧಾರ ಮತ್ತು ಅನುಕರಣೆ ಮತ್ತು ಅಳವಡಿಕೆಯಿಂದ ಹೊಸದಾಗಿ ವಚನಗಳು ಪ್ರಕ್ಷಿಪ್ತವಾಗಿರುವುದನ್ನು ಗಮನಿಸಿರಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.