Hindi Translationरे मानव, राज-विचार,
संपत्ति, श्रृंगार स्थिर नहीं है,
देखो कल्याण नगर नष्ट हुआ, चौपट हुआ,
एक जंगम के स्वाभिमान से ।
चालुक्य राजा का शासन समाप्त हुआ
कूडलसंगमदेव,वह तव कपाल में समा गया ॥
Translated by: Banakara K Gowdappa
English Translation Beauty and wealth and thoughts of kings
Do not endure, O man!
Lo,Kalyāṇa is utterly destroyed!
For a single Jaṅgama's injury
The reign of the Cālukya king
Lay low and dropped into Thy skull-bowl
O Kūḍala Saṅgama Lord!
Translated by: L M A Menezes, S M Angadi
Tamil Translationமனிதனே, அரசு தீர்மானம், செல்வம்
அழகு நிலையானதன்று
கல்யாணம் கெட்டது, பாழாயிற்று காணாய்
ஒரு ஜங்கமனின் அபிமானத்தால்
சாளுக்கிய அரசனின் ஆட்சி அகன்றது
கூடல சங்கமதேவனே, உன் கபாலத்திற்குள் சென்றது.
Translated by: Smt. Kalyani Venkataraman, Chennai
Telugu Translationవేసవిత్తువిత్తి బెల్లముతో కట్టకట్టి
ఆలపాల దడిపి తేనెవాకల ముంచ
చేదుగాక తీపు గా నేర్చునే? శివభక్తులు గానివారల
చేరి పల్కరింపరాదు సంగమదేవా
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲವಿಷಯ -
ಸದಾಚಾರ
ಶಬ್ದಾರ್ಥಗಳುಅಭಿಮಾನ = ಪ್ರೀತಿ, ಗೌರವ; ಕವಳು = ; ಜಂಗಮ = ; ವಿಚಾರ = ; ಸಂದು = ; ಸ್ಥಿರ = ;
ಕನ್ನಡ ವ್ಯಾಖ್ಯಾನಈ ವಚನದ ಸರಳಾನುವಾದ : ಅಧಿಕಾರ ಐಶ್ವರ್ಯ ಸೌಂದರ್ಯ ಸ್ಥಿರವಲ್ಲ. ಜಂಗಮನೊಬ್ಬನ ಅಭಿಮಾನ ನೆಪವಾಗಿ ಉದ್ಭವಿಸಿದ ಪ್ರಸಂಗವೊಂದರ ಕಾರಣದಿಂದಾಗಿ ನಾಲ್ಕನೇ ಸೋಮೇಶ್ವರನು ತನ್ನ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ಆಗ (ಕ್ರಿ.ಶ. 1189) ಅತ್ಯಂತ ವೈಭವಯುತವಾಗಿ ಕರ್ನಾಟಕವನ್ನು ಕೇಂದ್ರ ಮಾಡಿಕೊಂಡು ದಖನ್ಭಾಗವನ್ನು ಆಳಿದ ಚಾಳುಕ್ಯ ರಾಜಮನೆತನವು ಶಿವನ ಹಳೆಯ ಲೆಕ್ಕಕ್ಕೆ ಸೇರಿಹೋಯಿತು. ಇಷ್ಟಾದರೂ ಅಧಿಕಾರ ಮುಂತಾದುವು ಅಶಾಶ್ವತವೆಂದು ಮನಗಾಣಲಾಗದೆ ?
ಅಧಿಕಾರ ಐಶ್ವರ್ಯ ಸೌಂದರ್ಯ ಈ ಯಾವುದೂ ಸ್ಥಿರವಲ್ಲವಾದರೂ ಅವು ಮಾನವನ ಮೈಮೇಲೆ ಬಂದಾಗ-ತಾವಿರುವ ಅಲ್ಪ ಕಾಲದಲ್ಲೇ ಅವು ಅವನ ಬುದ್ಧಿಯನ್ನು ಬುಡಮಟ್ಟ ಧ್ವಂಸಮಾಡುವವು. ಬಸವಣ್ಣನವರು ತಮ್ಮ ಜೀವಿತಕಾಲದಲ್ಲಿ. ತಮ್ಮ ನಾಡಿನಲ್ಲೇ ತಮ್ಮ ಕಣ್ಣೆದುರಿಗೇ-ಚಕ್ರವರ್ತಿಯಾದ ತ್ರೈಲೋಕ್ಯಮಲ್ಲ ನೂರ್ಮಡಿ ತೈಲ iii (ಕ್ರಿ.ಶ. 1150-1163)ನನ್ನು ಅವನ ಸೈನ್ಯಾಧಿಪತಿಯಾಗಿದ್ದ ಬಿಜ್ಜಳನು ಕ್ರಿ.ಶ. 1163ರಲ್ಲಿ ಸಿಂಹಾಸನದಿಂದಿಳಿಸಿ ತಾನೇ ಚಕ್ರವರ್ತಿಯೆಂದು ಘೋಷಿಸಿಕೊಂಡುದನ್ನೂ, ಕ್ರಿ.ಶ. 1183 ರಲ್ಲಿ ಆ ಬಿಜ್ಜಳನ ಸಂತತಿಯನ್ನೇ ಚಾಳುಕ್ಯ ತ್ರಿಭುವನಮಲ್ಲ ವೀರಸೋಮೇಶ್ವರ iv (ಕ್ರಿ.ಶ. 1183-1189)ನು ದಂಡಿಸಿ ಮರಳಿ ಸಾಮ್ರಾಜ್ಯವನ್ನು ಕಸಿದುಕೊಂಡುದನ್ನೂ ಕಂಡಿದ್ದರು.
ಮಿಕ್ಕಂತೆ ಆಗರ್ಭಶ್ರೀಮಂತರು ದಟ್ಟದರಿದ್ರರಾದುದನ್ನೂ, ರೋಗರುಜಿನಾದಿಗಳಿಂದ ಮತ್ತು ಮುಪ್ಪು ಆಘಾತಗಳಿಂದ ಸ್ಫುರದ್ರೂಪಿಗಳು ಕುರೂಪಿಗಳಾದುದನ್ನೂ ಬಸವಣ್ಣನವರು ಕಂಡಿದ್ದರು. ಕಂಡು ಈ ಅಧಿಕಾರಾದಿಗಳು ಎಷ್ಟು ಕ್ಷಣಿಕವೆಂಬುದನ್ನು ಚೆನ್ನಾಗಿ ಮನಗಂಡಿದ್ದರು. ಆದ್ದರಿಂದಲೇ ಅವನ್ನು ನಚ್ಚಿ ಯಾರಾಗಲಿ ಮದದಲ್ಲಿ ಲೋಭದಲ್ಲಿ ಕಾಮದಲ್ಲಿ ಮೈಮರೆಯುವುದು ತೀರ ಲಜ್ಜಾಸ್ಪದವೆಂದು ಎಚ್ಚರಿಸುತ್ತಿರುವರು ಈ ವಚನದ ಮೂಲಕ.
ಕಲ್ಯಾಣ ಹಾಳಾದ ಮಾತು ಈ ವಚನದಲ್ಲಿರುವುದರಿಂದ ಈ ವಚನ ಕ್ರಿ.ಶ. ಸುಮಾರು 1190 ರಿಂದೀಚೆಗೆ ಬಸವಣ್ಣನವರು ಬರೆದುದೆಂದು ಹೇಳಲವಕಾಶವಿದೆ. ಆದುದರಿಂದಲೇ ಅವರು ಪುರಾಣಗಳಲ್ಲಿ ಹೇಳಿರುವಂತೆ ಬಿಜ್ಜಳನ ಆಳ್ವಿಕೆ ತೆಗೆದ ಕ್ರಿ.ಶ. ಸುಮಾರು 1168 ರ ಸುತ್ತುಮುತ್ತಿನಲ್ಲಿ ಲಿಂಗೈಕ್ಯರಾಗದೆ, ಆಮೇಲೂ ದೀರ್ಘಕಾಲ ಕೂಡಲಸಂಗಮದಲ್ಲಿ ಜೀವಿಸಿದ್ದರೆಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ ಈ ವಚನ. ಬಿಜ್ಜಳನ ಮಕ್ಕಳ ಕಾಲಕ್ಕೆ ಯಾದವ ಬಿಲ್ಲಮನು ಕಲ್ಯಾಣವನ್ನು ವಶಪಡಿಸಿಕೊಂಡಂದಿನಿಂದ-ಅವರ (ಕಲ್ಯಾಣದ) ಜೀವಕಳೆಗೆ ಇತಿಶ್ರೀಯಾಗಿರಬೇಕೆಂದು ಗೋವಿಂದ ಪೈಗಳ(ಮೂರು ಉಪನ್ಯಾಸಗಳು-ಪುಟ 73) ಊಹಿಸಿರುವುದು ನಿಜವಾದರೆ ಕಲ್ಯಾಣ ಹಾಳಾದುದು ಕ್ರಿ.ಶ. ಸುಮಾರು 1187-1191 ರ ಮಧ್ಯಂತರದಲ್ಲಿ. ಕನಿಷ್ಠ ಪಕ್ಷ ಅಲ್ಲಿಯವರೆಗಾದರೂ ಬಸವಣ್ಣನವರು ಬದುಕಿದ್ದರು.
ಹೀಗಾಗಿ ಚಾಳೋಕ್ಯರಾಯನ ಆಳ್ವಿಕೆ ಮುಗಿದ ಮತ್ತು ಕಲ್ಯಾಣ ಹಾಳಾದ ಮಾತಿರುವ ಈ ವಚನ-ಬಸವಣ್ಣನವರ ಭಂಡಾರಿಪದವಿಯಿಂದ ನಿವೃತ್ತರಾಗಿ ಕೂಡಲಸಂಗಮಕ್ಕೆ ಹೋಗಿ ಅಲ್ಲಿ ನೆಲೆಸಿದ್ದ ಕಾಲಕ್ಕೆ ಬರೆದುದಾಗಿರಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.