Hindi Translationकहते हो, भक्तों के सिवा अन्य अभीष्ट नहीं है,
कहते हो, भक्तों के सिवा अन्यों के आगे हाथ नहीं पसारते,
किंतु तुम करते क्या हो, इसे कहाँ ले जाते हो?
जो पावन है, उसे लिंगार्पित करना ही आचार है।
कूडलसंगमेश के शरणों की संपत्ति
विषयसुख के लिए देकर दुर्गति प्राप्त न करो ॥-
Translated by: Banakara K Gowdappa
English Translation You say do not love
But devotees;
You say you do not beg
Except from devotees;
But what is it you do?
Where do you take them to?
That is right discipline-
To offer Liṅga only that
Which has been sanctified
Accursed be you, if you
Give to your senses what belongs
To Kūḍala Saṅga'sŚaraṇās !
Translated by: L M A Menezes, S M Angadi
Tamil Translationபக்தரன்றி ஏற்பதில்லை என்பீர்
பக்தருக்கல்லாது கை குவிப்பதில்லை என்பீர்
ஆயின் செய்யும் செயல் என்ன?
தூய்மையானதை இலிங்கத்திற்குச் செய்வதே நன்னெறி
கூடலசங்கனின் அடியாரின் செல்வம் இது
புலனின்பத்தை நாடி, கீழ் நிலையை அடையாதீர்
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಪಂಚೇಂದ್ರಿಯಗ್ರಾಹ್ಯವಾದ ವಿಶ್ವವೂ ಶಿವನ(ಶರಣರ) ಸ್ವತ್ತು. ಅದನ್ನೆಲ್ಲ ಇಂದ್ರಿಯಗೋಚರವಾಗುತ್ತಿದ್ದಂತೆಯೇ ಶಿವನಿಗೆ ನಿವೇದಿಸಿ -ಪ್ರಸಾದರೂಪದಲ್ಲಿ ಸ್ವೀಕರಿಸುವುದು ಕ್ರಮ-ಆಧ್ಯಾತ್ಮಿಕ ವಿಕ್ರಮ ಕೂಡ. ಹಾಗಲ್ಲದೆ -ಶಬ್ದ ಗಂಧ ರೂಪ ಸ್ಪರ್ಶ ರಸಲಂಪಟತೆಯಿಂದ ದೆವ್ವ ಹಿಡಿದವರಂತೆ ಆಲಿಸಿದರೆ, ಆಘ್ರಾಣಿಸಿದರೆ, ಕೆಕ್ಕರಿಸಿ ನೋಡಿ ತರುಬಿ ಹಿಡಿದರೆ, ಮುಕ್ಕಿತಿಂದರೆ –ಆ ಮೂಲಕ ಆತ್ಮ ಅಧೋಗತಿಗಿಳಿಯುತ್ತದೆ.
ಲಿಂಗವಂತನ ಪ್ರಥಮ ಪ್ರಮುಖ ಆಚರಣೆಯೆಂದರೆ –ಆಕ್ರಮಣವಲ್ಲ ಅರ್ಪಣೆ. ಎಲ್ಲ ವಿಷಯವನ್ನೂ –ಮನಕ್ಕೆ ಬುದ್ಧಿಗೆ ಚಿತ್ತಕ್ಕೆ ಅಹಂಕಾರಕ್ಕೆ ಜ್ಞಾನಕ್ಕೆ ಭಾವಕ್ಕೆ ಶಕ್ತಿಯುತವಾಗಿ ತಟ್ಟಿದುದನ್ನೆಲ್ಲಾ ಭಕ್ತಿಯುತವಾಗಿ ಲಿಂಗಾರ್ಪಣೆ ಮಾಡಿ ಆ ಭೋಗೋಪಭೋಗವನ್ನೆಲ್ಲ ಪ್ರಸಾದರೂಪದಲ್ಲಿ ಸಲಿಸಿಕೊಂಡರೆ –ಇರವೇ ಪರವಾಗಿ ಪರಮಾನಂದವಾಗಿ ಈ ಲೋಕ ಅಲೋಕವಾಗುವುದು.
ಇಂಥ ಮಹಾಮಾರ್ಗವನ್ನು ಬಿಟ್ಟು ಯಾರಾದರೂ-“ನಾವು ಏನೆಲ್ಲವನ್ನು ಕೊಡುವುದೂ ಭಕ್ತರಿಗೆ, ಪಡೆಯುವುದೂ ಆ ಭಕ್ತರಿಂದಲೇ -ನಮ್ಮದು ಶಿವಾರ್ಪಿತ ಪ್ರಸಾದಮಾರ್ಗವೆಂದು ಮುಂತಾದ ಡಾಂಬಿಕ ಒಣ ಮಾತುಗಳನ್ನಾಡುತ್ತ –ಇಂದ್ರಿಯಗಳ ಸೆಳವಿಗೆ ಲೋಕವನ್ನು ಬಳಸಿಕೊಂಡರೆ –ಅವರು ಚರ್ಮದಿಂದ ಹಿಡಿದು ಮೂಳೆಯವರೆಗೂ ಭವಬದ್ಧರು. ಆಶಯಕ್ಕೆ ತಕ್ಕ ಆಚರಣೆಯರಿಯದ ಇಂತ ದುರ್ವಿದಗ್ಧಭಕ್ತರನ್ನು ಕುರಿತು ಬಸವಣ್ಣನವರು ಸಾನುಕಂಪೆಯಿಂದ ಬೋಧಿಸುತ್ತಿರುವರು.
ತಲುಪಬೇಕಾದ ಊರು ಯಾವ ದಿಕ್ಕಿಗಿದೆಯೋ ಆ ದಿಕ್ಕಿನ ದಾರಿ ಹಿಡಿಯಬೇಕಲ್ಲವೇ ಪಯಣಿಗ ?
(ಅಸುಗತಿ : ದುರ್ಗತಿ).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.