Hindi Translationभाइयो, तुम गजारूढ होकर गये,
अश्वारूढ होकर गये,
कुंकुम कस्तूरी रमाकर गये,
किंतु सत्य की स्थिति न जान सके !
सद्गुण बोकर फल पैदा न कर सके ।
अहंकार रूपी मत्तगज पर आरूढ
तुम विधि के वश हो गये न !
मम कूडलसंगमदेव को न जानकर
तुम नरकभाजन बन गये न -।
Translated by: Banakara K Gowdappa
English Translation You went riding elephants.
You went riding horses.
You covered yourself
with vermilion and musk.
O brother,
but you went without the truth,
you went without sowing and reaping
the good.
Riding rutting elephants
of pride, you turned easy target
to fate.
You went without knowing
our lord of the meeting rivers.
You qualified for hell.
Translated by: A K Ramanujan Book Name: Speaking Of Siva Publisher: Penguin Books ----------------------------------
Brothers, you strut upon an elephant,
Or preen yourselves upon a horse,
Or flaunt in saffron and in musk:
And yet, alas! as you go around,
You're ignorant of the Truth.
You have forgot to sow and grow
The fruit of Virtue!
Mounted upon the crazy elephant
Of your gigantic pride,
You're riding straight
Into the snare of Doom!
Not knowing our Lord
Kūḍala Saṅgama, you only qualify
For hell!
Translated by: L M A Menezes, S M Angadi
Tamil Translationநீவிர் யானைமீது ஏறிச் சென்றீர்
நீவிர் குதிரைமீது ஏறிச் சென்றீர்
குங்குமம், கஸ்தூரியைப் பூசிக் கொண்டு சென்றீர்
உண்மையின் நிலையையறியாது சென்றீரன்றோ
நல்லியல்பு எனும் பழத்தை விதைத்து
விளையாமலே சென்றீரன்றோ
செருக்கு எனும் மதயானை மீது ஏறி
விதிக்குக் குறியாகி நீவிர் சென்றீரன்றோ
நம் கூடல சங்கமதேவனை அறியாமல்
நரகத்திற்கு அருகதையானீரன்றோ.
Translated by: Smt. Kalyani Venkataraman, Chennai
Telugu Translationగజారోహణముల బడిపోతిరె మీరు
అశ్వారోహణముల బడిపోతిరె మీరు
కస్తూరీ కుంకుమ మలదుకొంచు బోతిరే మీరు
అన్నలారా! సత్యపు నెలవు తెలియకపోతిరే మీరు
అహంకారమను మదగజము నెక్కి
విధికి గురియౌచుపోతిరే మీరు
సంగమదేవుని తెలియక నరకమున
బడిపోతిరి కదయ్యా మీరెల్లా!
Translated by: Dr. Badala Ramaiah
Urdu Translationتم کبھی فیل پہ یا اسپِ جواں پرنکلے
جسم پرکوکم وکستوری لگا کرنکلے
منزلِ صدق کی پہچان میں ناکام رہے
بیج بویا تھا مگرکاٹی نہ فصلِ سیرت
کوڈلا سنگما دیوا سے بچاکر نظریں
فخرسے نازسے تم بیٹھ کر ہاتھی پہ چلے
حیف تو یہ ہےکہ خود جاکےجہنم میں گِرے
Translated by: Hameed Almas
ಕನ್ನಡ ವ್ಯಾಖ್ಯಾನಹುಟ್ಟಲೇ ಇಲ್ಲವೆಂದರೆ –ಅದು ನೇತ್ಯಾತ್ಮಕವಾದೊಂದು ಸಿದ್ಧಿಯಾದೀತು. ಹುಟ್ಟಿಯೂ ತನ್ನ ಜೀವಿತಾವಧಿಯನ್ನೆಲ್ಲಾ ಕೇವಲ ಬಡಾಯಿಗಾಗಿ ಭೋಗಲಾಂಪಟ್ಯಕ್ಕಾಗಿ ಬಳಸಿದ್ದೇ ಆದರೆ-ಆ ಜೀವ ಜೀವಿಸಿದ್ದು ಜೀವನವಲ್ಲ-ಸಾವಿನ ಮುಖವನ್ನೂ ಬಿಳಿಚುವಂತೆ ಮಾಡುವ ಪೈಶಾಚಿಕ ವಿಡಂಬನೆ.
ಸತ್ಯಕ್ಕೆ ನೇರವಾಗಿ ನಡೆಯಬೇಕು, ಪರಿಸರಕ್ಕೆ ಉಪದ್ರವವಾಗದಂತೆ ತೋಬೆಚ್ಚಗೆ ತಂಪಾಗಿ ಕಮ್ಮಗೆ ಬದುಕಬೇಕು. ನಮ್ಮ ಪರೋಕ್ಷದಲ್ಲಿ ನಾವು ನಡೆದು ತೋರಿದ ಈ ನಡೆವಳಿಗಳು ಬರುವ ತಲೆಮಾರಿನ ಮೆಚ್ಚುಗೆಯನ್ನು ಸೂರೆಗೊಂಡು –ಅವರಿಗೆ ಅದು ಸಾರತಃ ಅನುಕರಣೀಯವಾಗುವಷ್ಟು ಘನತೆಯುಳ್ಳದ್ದಾಗಿರಬೇಕು. ಹೀಗೆ ಜೀವಿಸಿದ ಜೀವದೊಂದು ನಡೆ ಪದ್ಧತಿಯಾಗಿ, ಪದ್ಧತಿಯು ಪಂಥವಾಗಿ, ಪಂಥವು ಪಂಗಡವಾಗದೆ ಎಲ್ಲರಿಗೂ ಸಂಗಡವಾಗಬೇಕು.
ಹಾಗಲ್ಲದೆ ಆಕಸ್ಮಿಕವಾಗಿ ಬಂದ ಐಶ್ವರ್ಯದಿಂದ ಅಧಿಕಾರದಿಂದ ಕೀರ್ತಿಯಿಂದ ಮದವೇರಿ ರಭಸಮತಿಯಾಗಿ ಜನರನ್ನು ಕ್ಷುದ್ರೀಕರಿಸುವ ಹಿಂಸಿಸುವ ಪ್ರವೃತ್ತಿಯವನಾದರೆ ಅವನಿಗಾಗಿ ಹೊಸ ನರಕಗಳು ಸೃಷ್ಟಿಯಾಗಬೇಕಾದೀತು, ದೌಷ್ಟ್ಯ ದಮನ ದುಃಖಗಳ ಪರಂಪರೆ ದಾಂಗುಡಿಯಿಡುವುದು ಹೀಗೆಯೇ.
ಬೇಜವಾಬ್ದಾರಿಯ ಈ ಪರಂಪರೆ ಮುಂದುವರಿದೀತೆಂಬ ಮತ್ತು ಹಾಗಾಗಬಾರದೆಂಬ ವಿಷಾದ ಮತ್ತು ವಿವೇಕ ಬಸವಣ್ಣನವರದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.