Hindi Translationलिंगजंगम को एक मानें-
तो उनकी पत्नियाँ लिंग के रनिवास की होंगी ।
वहाँ भी मिलन, यहाँ भी मिलन, ‘चौडेश्वरी’ में भी मिलन है।
स्तन्य पान भाव छोड आलिंगन करनेवालों का
कूडलसंगमदेव सिर काटेंगे ॥
Translated by: Banakara K Gowdappa
English Translation Once they believe
That Liṅga and Jaṅgama are one,
Their wives become
God's royal wives:
Both here and there they are the same-
In Cauḍēśvari , the same.
If you forget
The honour due to breasts you sucked
And take them in your arms,
Lord Kūḍala Saṅgama
Will take away your head!
Translated by: L M A Menezes, S M Angadi
Tamil Translationஇலிங்க ஜங்கமர் ஒன்று என நம்பியபின்
அவர் இல்ல மகளிர் இலிங்கத்தின் அந்தப்புறத்தினர்
அங்கும் பொருத்தம், இங்கும் பொருத்தம்
சௌடேச்வரியிடமும் பொருத்தமா?
வேறு விதமான எண்ணம் வெளிப்படின்
தலையைக் கொய்வான் கூடல சங்கமதேவன்.
Translated by: Smt. Kalyani Venkataraman, Chennai
Telugu Translationలింగ జంగము లొకటేయని నమ్మిన వెనుక
వారి యంగనలు శివుని రాణివాసమయ్యా
అటనూమేళ మిటనూ మేళము
చౌడేశ్వరి యందునూ మేళము
తల్లి యనుతలపు తప్పిన తలగొట్టునయ్యా సంగయ్య:
Translated by: Dr. Badala Ramaiah
ಕನ್ನಡ ವ್ಯಾಖ್ಯಾನಈ ವಚನ ಬಸವಣ್ಣನವರ ನಿಜವಚನವಲ್ಲ. ಇದರಲ್ಲಿ ಪ್ರಯೋಗವಾಗಿರುವ ಪದಗಳೂ ಭಾವಗಳೂ ಬಸವಣ್ಣನವರ ಸಿದ್ಧಾಂತಕ್ಕೆ ಮತ್ತು ಆಚರಣೆಗೆ ವ್ಯತಿರೇಕವಾಗಿರುವವು.
(1) ಕ.ವಿ.ವಿ. ಬಸವಣ್ಣನವರ ಟೀಕಿನ ವಚನಗಳು ಎಂಬ ಗ್ರಂಥದನುಸಾರ ಮೊದಲನೇ ಟೀಕೆಯಲ್ಲಿ –“ಅಲ್ಲಿಯೂ ಮೇಳ, ಇಲ್ಲಿಯೂ ಮೇಳ, ಚೌಡೇಶ್ವರಿಯಲ್ಲಿಯೂ ಮೇಳ”ವೆಂಬ ವಚನಭಾಗಕ್ಕೆ ಟೀಕೆಯೇ ಇಲ್ಲ. ಮಿಕ್ಕ ಟೀಕೆಗಳನುಸಾರ -ಬಸವಣ್ಣನವರಿಗೆ ಚೌಡೇಶ್ವರಿಯೆಂಬ ಗ್ರಾಮದೇವತೆಯ ಬಗ್ಗೆ ಭಯಭಕ್ತಿಯಿತ್ತೆಂದು ತೀರ್ಮಾನಿಸಬೇಕಾಗುವುದು.
(2) ಈ ವಚನದ “ಮೊಲೆಯುಂಬ ಭಾವ” ಎಂಬುದೇ ಎಲ್ಲ ಮೂಲಗಳಲ್ಲಿಯು ದೊರೆಯುವ ಸಾಮಾನ್ಯ ಪಾಠವಾಗಿದೆ. ಇದಕ್ಕೆ “ತಾಯೆಂಬ ಭಾವ” ಎಂಬ ಅರ್ಥವನ್ನು ಆರೋಪಿಸುವುದು ಎಳೆದಾಡಿದಲ್ಲದೆ ಆಗದು.
(3) ಮತ್ತು “ಲಿಂಗ ಜಂಗಮ ಒಂದೇ ಎಂದು” ಎಂಬ ಪಾಠಸಂದರ್ಭದಲ್ಲಿ -ಲಿಂಗಜಂಗಮವೆಂಬುದು ಲಿಂಗ ಮತ್ತು ಜಂಗಮ ಎಂಬ ಅರ್ಥವುಳ್ಳುದಾಗಿ ಪ್ರಯೋಗಗೊಂಡಿದೆ. ಅದನ್ನೇ ಅನುಸರಿಸಿ ಮುಂದುವರಿದರೆ-“ಅವರಂಗನೆಯರು ಲಿಂಗದ ರಾಣಿವಾಸ” ಎಂಬಲ್ಲಿ ಲಿಂಗವೆಂಬುದು ಲಿಂಗ-ಜಂಗಮವೆಂಬೆರಡಕ್ಕಿಂತಲೂ ಪ್ರತ್ಯೇಕವಾಗಿ (ಅಥವಾ ಮತ್ತೊಂದಾಗಿ) ನಿಲ್ಲುತ್ತದೆ. ಬಸವಣ್ಣನವರು ಹಲವೆಡೆ ಬಳಸಿರುವ “ಲಿಂಗಜಂಗಮ” ಎಂಬ ಪದವನ್ನು ಪ್ರಯೋಗಿಸುವಲ್ಲಿ ಈ ಪ್ರಕ್ಷಿಪ್ತಕಾರನು ತಪ್ಪಿದ್ದಾನೆ. ಬಸವಣ್ಣನವರ ಪ್ರಕಾರ “ಲಿಂಗಜಂಗಮ”ವೆಂದರೆ (ಲಿಂಗ ಮತ್ತು ಜಂಗಮವೆಂದಲ್ಲ) ಲಿಂಗಸ್ವರೂಪಿಯಾದ ಜಂಗಮವೆಂದರ್ಥ (ನೋಡಿ ವಚನ 186, 189, 475). ಈ ಪ್ರಯೋಗಸೂಕ್ಷ್ಮವನ್ನು ತಿಳಿಯದೆ ಕೂಡಲಸಂಗಮಾಂಕಿತದಲ್ಲಿ ಈ ವಚನವನ್ನು ಬರೆದು ಸೇರಿಸಿದವನು ಈಗ ಸಿಕ್ಕಿಬಿದ್ದಿದ್ದಾನೆ. (ಹಿಂದೆಯೇ ಅನ್ಯ ಕಾರಣಗಳಿಗಾಗಿ ಪ್ರಕ್ಷಿಪ್ತವೆಂದು ನಿರ್ಣಯಿಸಲಾಗಿರುವ 425ನೇ ವಚನದಲ್ಲಿಯೂ ಈ “ಲಿಂಗ-ಜಂಗಮ”ಪದವನ್ನು ತಪ್ಪಾಗಿಯೇ ಬಳಸಿರುವುದನ್ನು ಗಮನಿಸಿರಿ. ಅಂದರೆ ಆ 425ನೇ ಮತ್ತು ಈ 641ನೇ ವಚನಗಳೆರಡನ್ನೂ ಒಬ್ಬನೇ ಪ್ರಕ್ಷೇಪಕಾರ ಬರೆದು ಸೇರಿಸಿದನೆಂದೆನ್ನಲೂ ಬಹುದು).
ಈ ಸಾಹಸವನ್ನು ಆ ಪ್ರಕ್ಷೇಪಕಾರನು ಮಾಡಿದ್ದಾದರೂ ಏಕೆಂದರೆ –ಜಂಗಮವೆಂದರೆ ಮದುವೆಯಾಗದ ಸನ್ಯಾಸಿಯೇ ಅಲ್ಲ -ಸಂಸಾರಿಯೂ ಆಗಬಹುದೆಂಬಂತೆ ಮಾಡಿ –ಜಾತಿಜಂಗಮ ಪದ್ದತಿಯನ್ನು ಬಸವಣ್ಣನವರದೆಂದು ಆರೋಪಿಸುವುದೇ ಆಗಿದೆ.
ಪರಸ್ತ್ರೀಯರನ್ನು ಕಾಮಿಸಬಾರದೆಂಬುದನ್ನು ವಿಧಿಸುವ ಬಸವಣ್ಣನವರ ನಿಜವಚನ ಇನ್ನೂ ವ್ಯಾಪಕವಾದ ಧ್ವನ್ಯರ್ಥವನ್ನು ಒಳಗೊಂಡಿದೆ-ನೋಡಿ ಮುಂದಿನ 642ನೇ ವಚನವನ್ನು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.