ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು?
ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು?
ಭಾಷೆ ತಪ್ಪಿದ ಬಳಿಕ ದೇವ ಬಲ್ಲಿದ! ಭಕ್ತನೇನ ಮಾಡುವನಯ್ಯಾ?
ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದರೆ
ಮೀಸಲ ಸೊಣಗ ಮುಟ್ಟಿದಂತೆ, ಕೂಡಲಸಂಗಮದೇವಾ!
Hindi Translationधारहीन शस्त्र क्या कर सकता है?
विषहीन सर्प क्या कर सकता है?
वचनभंग होने पर-, हे देव, बलिष्ट भक्त क्या कर सकता है?
वचनभंग होने के पश्चात् प्राणों की आशा बनी रहे-,
तो, मिन्नत को कुत्ते के चाटने के समान है ।
कूडलसंगमदेव ॥
Translated by: Banakara K Gowdappa
English Translation What use a sword after its point is lost?
What use a serpent with its poison void?
What use a devotee
After his pledge is broken?
If after the pledge is broken, you still expect
The good of life, it's like a dog who licks
What's consecrate to God,
O Kūḍala Saṅgama Lord!
Translated by: L M A Menezes, S M Angadi
Tamil Translationகூர்முனை இல்லையெனின் கத்தி என்ன செய்யும்?
நஞ்சு இல்லையெனின் பாம்பு என்ன செய்யும்?
சொல் தவறிய பிறகு, இறைவா வல்லவனான பக்தன்
என்ன செய்வான் ஐயனே? சொல்தவறிய பிறகு
உயிர் மீதுள்ள ஆசையை விரும்பின்
படையலை நாய் தீண்டியதனையதாம்
கூடல சங்கம தேவனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಸಾಣೆ ಹಿಡಿದು ಮಿರುಗುವ ಖಡ್ಗವನ್ನೆತ್ತಿ ಯೋಧನು ಮೇಲೆರಗಲು ನುಗ್ಗಿದಾಗ –ಮೊನಚಿಲ್ಲದ ಖಡ್ಗವೊಂದನ್ನು ಹಿಡಿದ ಪ್ರತಿಯೋಧನೇನು ಮಾಡಿಯಾನು ? ವಿಷದ ಹಲ್ಲನ್ನೆಲ್ಲ ಕಳೆದುಕೊಂಡ ಸರ್ಪ -ಹೆಸರಿಗೆ ಮಾತ್ರ ಭಯಂಕರ –ಆಕ್ರಮಣದಲ್ಲಿ ನಿಷ್ಪ್ರಯೋಜಕ. ಹೀಗೆ ಒಬ್ಬ ಭಕ್ತನ ಹಿರಿಮೆಯಾದರೂ ಇರುವುದು ಅವನ ಛಲದಲ್ಲಿ ಪ್ರತಿಜ್ಞೆಯಲ್ಲಿ ಮತ್ತು ಅದರ ಪರಿಪಾಲನೆಯಲ್ಲಿ. ಆ ಸತ್ಯಾಗ್ರಹ ಅವನಲ್ಲಿಲ್ಲದಿದ್ದರೆ ಅವನನ್ನು ದೇವರು ಶಿಕ್ಷಿಸದೆ ಬಿಡುವುದಿಲ್ಲ. ನಿಯತ್ತಿಲ್ಲದ ಮೆಹನತ್ತಿಲ್ಲದ ಭಕ್ತನು ಪ್ರಾಣದಾಶೆಯಿಂದ ಬದುಕಿದ್ದರೂ ಅವನ ಬಾಳು ನಾಯಿ ಮುಟ್ಟಿದ ಮೀಸಲಂತೆ ಶಿವನಿಗೆ ಅರ್ಪಿತವಾಗುವುದಿಲ್ಲ.
ಜೀವನದಲ್ಲಿ ಮಾಡಿದ ಪ್ರತಿಜ್ಞೆಯನ್ನು ಭಕ್ತನೊಬ್ಬನು ಈಡೇರಿಸಲಾರನಾದರೆ –ಅವನು ಪ್ರಾಣದ ಮೇಲೆ ಆಶೆಯಿರಿಸಿಕೊಂಡು ಬದುಕಿರುವುದು ಶಿವನಿಗೆ ಪ್ರಿಯವಲ್ಲವಾಗಿ ಧರ್ಮಮರಣವನ್ನು ಅಪ್ಪಲು ಬಸವಣ್ಣನವರು ಹೇಳುತ್ತಿದ್ದಾರೆಯೇ ? (ನೋಡಿ ವಚನ 511)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.