Hindi Translationग्रहण कर त्याग देता है शरण?
त्याग कर ग्रहण करता है शरण?
आचरण से चूकता है शरण?
वचन से मुँह मोडता है शरण?
सहज सज्जनता त्यागने पर
कूडलसंगमेश आदंत नाक काटेंगे ॥
Translated by: Banakara K Gowdappa
English Translation Does a Śaraṇa once made fast
Break loose?
Does a Śaraṇa once more hold fast
After he has left?
Does a Śaraṇa who has walked
In the right path, go then astray?
Does a Śaraṇa who has pledged his word
Play false to it?
If you should lapse from the real good
Lord Kūḍala Saṅgama will chop your nose
Translated by: L M A Menezes, S M Angadi
Tamil Translationசரணன் ஏற்றபின் விடுவனோ?
சரணன் விட்டபின் ஏற்பனோ?
நெறி பிறழ்வனோ சரணன்?
கூறியதை இல்லை என்பனோ சரணன்?
நன்னெறி தவறின் கூடல சங்கமதேவன்
எலும்பு தெரியுமாறு மூக்கைக் கொய்வனன்றோ
Translated by: Smt. Kalyani Venkataraman, Chennai
Telugu Translationకట్టువిడుచునే శరణుడు: చెట్టపట్టునే శరణుడు!
నడత తప్పునే శరణుడు? చెప్పి తప్పునే శరణుడు?
సహజ సజ్జనత తప్పిన కూడల సంగయ్య
పలుదోప ముక్కు కోయక మానడయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲವಿಷಯ -
ಶರಣ
ಶಬ್ದಾರ್ಥಗಳುಸಜ್ಜನಿಕೆ = ; ಹಲುದೋರೆ = ; ಹುಸಿ = ;
ಕನ್ನಡ ವ್ಯಾಖ್ಯಾನಧರ್ಮಕ್ಕೆ ಬದ್ಧನಾದ ಶರಣನ ಮುಖ್ಯ ಲಕ್ಷಣವೆಂದರೆ -ಸಜ್ಜನಿಕೆ. ಅವನೆಂದಿಗೂ ತೋರಿಕೆಗೆ ಮಾತ್ರ ಸಜ್ಜನನಾಗಿರುವುದಿಲ್ಲ. ಅವನ ಸಜ್ಜನಿಕೆ ರಕ್ತಗತವಾಗಿ ಭಾವಗತವಾಗಿ ಸಹಜಸಜ್ಜನಿಕೆಯಾಗಿರುವುದು. ಸಜ್ಜನವೆಂದರೆ ಪತಿವ್ರತೆ (ಕೂಡ) –ಅವಳ ಪಾತಿವ್ರತ್ಯ ಅತ್ಯಂತ ಸಹಜ ಹೇಗೋ ಹಾಗೆ ಶರಣನ ಲಿಂಗಧರ್ಮದ ಸಂಬಂಧ ಸಹಜಸಂಬಂಧವಾಗಿರುವುದು.
ಆ ಶರಣನೆಂದಿಗೂ ಕಟ್ಟಿಕೊಂಡ ಲಿಂಗಾದರ್ಶನಗಳನ್ನು ಸಮಯಸಾಧನೆಗಾಗಿ ಬಿಟ್ಟುಕೊಡುವುದಿಲ್ಲ. ಬಿಟ್ಟ ದುರಾಚಾರ ದುಸ್ಸಹವಾಸ ಮಾರ್ಗವನ್ನೆಂದಿಗೂ ಮರಳಿ ಹಿಡಿಯುವುದಿಲ್ಲ. ಅವನು ನಡೆದು ತಪ್ಪುವುದಿಲ್ಲ, ನುಡಿದು ಹುಸಿಯುವುದಿಲ್ಲ. ಅವನಿಗಿರುವುದು ಒಂದು ಶಿವಮಾರ್ಗ, ಒಂದು ಸತ್ಯವಾಕ್ಯ.
ಗೌರವಾಸ್ಪದವಾದ ಪೂಜ್ಯಸ್ಥಾನದಲ್ಲಿರುವ ಇಂಥ ಶರಣನು ತಪ್ಪಿದರೆ –ಅದರ ಪರಿಣಾಮ ಸಮಾಜದ ಮೇಲೆ ವ್ಯಾಪಕವಾಗಿ ಮುಸುಕುವುದಾಗಿ ಅವನ ತಪ್ಪಿಗೆ ಶಿವನು ಘೋರವಾದ ಶಿಕ್ಷೆಯನ್ನು ನಿಗದಿ ಮಾಡಿರುವನು.
ವಿ : ಪಾತಿವ್ರತ್ಯಕ್ಕೆ ತಪ್ಪಿದ ಸ್ತ್ರೀಗೆ ಮತ್ತು ರಣರಂಗದಲ್ಲಿ ನೀಸಲಾರದೆ ಓಡಿ ಬಂದ ಯೋಧನಿಗೆ ಮೂಗುಕೊಯ್ಯುವುದೊಂದು ಶಿಕ್ಷೆ ವಿಧಿಸಲಾಗುತ್ತಿತ್ತೆಂಬುದನ್ನು ಇಲ್ಲಿ ನೆನೆಯಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.