ಜಂಬುದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ
ಎರಡಾಳಿನ ಭಾಷೆಯ-
ʼಕೊಲುವೆನೆಂಬʼ ಭಾಷೆ ದೇವನದು:
ʼಗೆಲುವೆನೆಂಬʼ ಭಾಷೆ ಭಕ್ತನದು!
ಸತ್ಯವೆಂಬ ಕೂರಲಗನೆ ತಳೆದುಕೊಂಡು
ಸದ್ಭಕ್ತರು ಗೆದ್ದರು, ಕಾಣಾ, ಕೂಡಲಸಂಗಮದೇವಾ!
Art
Manuscript
Music Courtesy:Vachanamrutha Savi ℗ 2020 Ashwini Recording Company, Released on: 2020-03-11 Composer: Devendra Kumar Mudhol Music Publisher: Times Music
Hindi Translationजंबूद्वीप नवखंड पृथ्वी वासियों
सुनो उभयों की प्रतिज्ञा;
देव की प्रतिज्ञा है, मैं मारूँगा;
भक्त की प्रतिज्ञा है, मैं जीतूँगा ।
सत्य रूपी क्रूर तेज खङ्ग धारणकर
सद्भक्त जीत गये कूडलसंगमदेव ॥
Translated by: Banakara K Gowdappa
English Translation Hark you, upon this nine-part earth
On jambū isle,
The words of these two:
The words 'I will slay' is the gods';
The word 'I will' is devotees'!
Mark you, Kūḍala Saṅgama Lord,
The real devotees have won
By drawing the sword of Truth!
Translated by: L M A Menezes, S M Angadi
Tamil Translationஉலகிலே ஜம்புத்தீவின் ஒன்பது பகுதிகளில்
இருவரின் சூளுரையைக் கேளீர்
வாட்டுவேன் என்பது இறைவனின் சூளுரை
வெல்வேன் என்பது பக்தனின் சூளுரை
உண்மை எனும் கூரான கத்தியை
நல்ல பக்தர் வென்றனர் காணாய்
கூடல சங்கமதேவனே.
Translated by: Smt. Kalyani Venkataraman, Chennai
Urdu Translationاے ساکنان ِبحر و بر، سنو، یہ غورسے سنو
کہ دوصدائیں آرہی ہیں ایک ایک کنج سے
خدا پکارتا ہے میری زد میں ہے تری حیات
بھگت لگارہے ہیں نعرے جیت اپنے ہاتھ ہے
اگرچہ ہاتھ میں کوئی تفنگ ہے، نہ تیرہے
یہ فیض صدق کا ہے جوسدا بھگت ہیں فیض یاب
یہ امتحاں بھی کوڈلا سنگا ہےخوب تر
Translated by: Hameed Almas
ಕನ್ನಡ ವ್ಯಾಖ್ಯಾನಭೂಮಿಯನ್ನು ಸಪ್ತದ್ವೀಪಗಳಾಗಿಯೂ, ಆ ಸಪ್ತದ್ವೀಪಗಳಲ್ಲಿ ಒಂದಾದ ಜಂಬೂದ್ವೀಪವನ್ನು (1 ನಾಭಿ 2 ಕಿಂಪುರುಷ 3 ಹರಿ 4 ಇಳಾವೃತ 5 ರಮ್ಯಕ 6 ಹಿರಣ್ಯಕ 7 ಉತ್ತರಕುರು 8 ಭದ್ರಾಶ್ವ 9 ಕೇತು ಮಾಲ್ಯ ಎಂದು) ಒಂಭತ್ತು ಖಂಡಗಳಾಗಿಯೂ ವಿಭಾಗಿಸುವರು (ನೋಡಿ ವಿವೇಕಚಿಂತಾಮಣಿ ಚತುರ್ಥ ಪರಿಚ್ಛೇದ).
ಒಟ್ಟಾರೆಯಾಗಿ ಈ ಜಂಬೂದ್ವೀಪ ನವಖಂಡವನ್ನು ಜೀವನ ಶರೀರವೆಂದು ಈ ವಚನದಲ್ಲಿ ಸಂಭಾವಿಸಲಾಗಿದೆ. ಈ ಶರೀರವನ್ನು (ಗಂಧಾದಿ ಪಂಚತನ್ಮಾತ್ರಾತ್ಮಕವಾದ) ಪೃಥಿವ್ಯಾದಿ ಪಂಚಭೂತ ಎಂದು ಮತ್ತು ಮನ-ಬುದ್ಧಿ-ಚಿತ್ತ-ಅಹಂಕಾರ-ಜ್ಞಾನ ಎಂದು ಒಟ್ಟು ಒಂಬತ್ತು ಪ್ರಕಾರವಾಗಿ ವಿಂಗಡಿಸಬಹುದಾದ ಸಾಧ್ಯತೆಯೂ ಇದೆ. ಹೀಗೆ ಜಂಬೂದ್ವೀಪದನವಖಂಡ್ವ ಪೃಥ್ವಿಯಾದ ಶರೀರದಲ್ಲಿ ದೇವರು ಸಾವಿಗೆಳೆದರೆ ಜೀವನು ಬದುಕಿಗೆಳೆಯುವ ಸೆಣಸಾಟ ನಡೆಯುತ್ತಲೇ ಇರುವುದು.
ಈ ಹೋರಾಟ ದ್ವೇಷಾತ್ಮಕವಲ್ಲ-ದೇವರ ದೃಷ್ಟಿಯಿಂದ ಪರೀಕ್ಷಾತ್ಮಕ, “ಜೀವ”ನ ದೃಷ್ಟಿಯಿಂದ ನಿಷ್ಠಾತ್ಮಕ. ರೂಪರಸಾದಿ ಆಹ್ಲಾದಕಗಳಿಂದಲೂ ಬುದ್ಧಿ ಅಹಂಕಾರಾದಿ ಉತ್ತೇಜಕಗಳಿಂದಲೂ ತುಂಬಿ ತುಳುಕುತ್ತಿರುವರ ಈ ಶರೀರಭೂಮಿ ಜೀವನಿಗಂತೂ ಒಂದು ಕುರುಕ್ಷೇತ್ರವಿದ್ದಂತೆಯೇ. ಅದರಲ್ಲಿ ಅವನು ಸತ್ಯ ಮಾರ್ಗವನ್ನು ಹಿಡಿದು ಶಿವನೊಡ್ಡಿದ ಸವಾಲಿಗೆಲ್ಲಾ ಮರುಸವಾಲೆಸೆದು ಹೋರಾಟ ಮಾಡಿ ವಿಜಯಶಾಲಿಯಾಗುವನು ಅಥವಾ ವೀರಮರಣವನ್ನಾದರೂ ಅಪ್ಪುವನು. ಅದು ಬಿಟ್ಟು ಚಪಲಚಿತ್ತನೂ ಲಂಪಟನೂ ಆದರೆ ಮಾಯೆಯಿಂದ ಹತನಾಗುವನು. ಆದುದರಿಂದ ಕೃತಸಂಕಲ್ಪನಾದ ಶರಣನು ತನ್ನ ನಿತ್ಯಜೀವನಮಾರ್ಗದಲ್ಲಿ ಬರುವ ಅಡ್ಡಿ ಆತಂಕಗಳನ್ನು (ಶಿವನಿಂದಲೇ ಕಲ್ಪಿತವಾದುವಾಗಿರಲಿ) ಅವನ್ನು ದಿಟ್ಟತನದಿಂದಲೇ ಆ ಭಕ್ತನು ಎದುರಿಸಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.