ಹುಟ್ಟಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದರೆ
ತಪ್ಪದು ನೋಡಯ್ಯಾ.
ʼಎನಗಿನ್ನೆಂತೊ, ಎನಗಿನ್ನೆಂತೊ, ಎನಗಿನ್ನೆಂತೋʼ ಎಂದೆನಬೇಡ.
"ನಾಭೋಕ್ತಾ ಕ್ರಿಯತೇ ಕರ್ಮ" ಎಂಬ ಶ್ರುತಿ ತಪ್ಪದು,
ಕೂಡಲಸಂಗಮದೇವಾ.
Hindi Translationजन्म लेने के पश्चात् प्राप्त भोगों से
मुक्त होना चाहो, तो नहीं हो सकता ।
मत कहो, आगे मेरा क्या होगा?
आगे मेरा क्या होगा? आगे मेरा क्या होगा?
‘न भुक्तं क्षीयते कर्म’ यह श्रुति वचन
टल नहीं सकता, कूडलसंगमदेव॥
Translated by: Banakara K Gowdappa
English Translation Look you, it is futility to hope
You can escape your destined lot
Once you are born: so do not say
'How then for me, how then, how then?'
O Kūḍala Saṅgama Lord,
One can't escape the text that says,
'Do not do aught
Whose fruit you can't enjoy.'
Translated by: L M A Menezes, S M Angadi
Tamil Translationபிறந்த பிறகு, அளித்த இன்ப துன்பத்தை மறுப்பின்
தப்பாது காணாய்
என் கதி என்ன? என் கதி என்ன என் கதி என்ன
எனக் கூறாதீர்
“நா புக்தம் க்ஷீயதே கர்ம” என்னும்
சுருதியானது தவறுமோ கூடல சங்கமதேவனே.
Translated by: Smt. Kalyani Venkataraman, Chennai
Telugu Translationపుట్టిన వెనుక పెట్టిన భోగములు వలదనినా వదలవు
ఎటులో యికనా కెటులో యని విలపింపకురా;
‘‘నా భోక్తా క్రియతే కర్మా’’ యను శ్రుతి తప్పదు
తప్పదురా కూడల సంగమదేవా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಅರ್ಜುನನು ಕುರುಕ್ಷೇತ್ರದಲ್ಲಿ ಕರ್ಣನನ್ನು ಎದುರಿಸಿ ಮೂದಲಿಸುತ್ತಾನೆ. ಆ ವೇಳೆಗಾಗಲೇ ಕರ್ಣನ ಮಗ ವೃಷಷೇಣ ಯುದ್ಧದಲ್ಲಿ ಮಡಿದಿರುತ್ತಾನೆ. ಆ ವಿಷಾದಪೂರ್ಣ ಹಿನ್ನೆಲೆಯಲ್ಲಿ ಕರ್ಣನು ಹೇಳುವ ಮಾತು-ಬಸವಣ್ಣನವರ ಈ ವಚನವನ್ನು ಬಹ್ವಂಶ ಹೋಲುತ್ತದೆ : “ಬಿದಿವಸದಿಂದೆ ಪುಟ್ಟುವುದು, ಪುಟ್ಟಿಸುವಂ ಬಿದಿ, ಪುಟ್ಟಿದಂದಿವಂ | ಗಿದು ಬಿಯಮೊಳ್ಪಿ(ಳ್ಪು, ಇ)ವಂಗಿದು ವಿನೋದಮಿ(ಮ್,ಇ)ವಂಗಿದು ಸಾವ ಪಾಂಗಿ(ಗು, ಇ)ವಂ| ಗಿದು ಪಡೆಮಾತಿ(ತು, ಇ)ವಂಗಿದು ಪರಾಕ್ರಮವೆಂಬುದನೆಲ್ಲ ಮಾಳ್ಕೆಯಿಂ | ಬಿದಿ ಸಮಕಟ್ಟಿ ಕೊಟ್ಟೊಡೆಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್” (ಪಂಪಭಾರತ 12-182).
ಹುಟ್ಟುವುದು ವಿಧಿಯ ಅನುಸಾರವೆ, ಹುಟ್ಟಿಸುವವನೂ ಆ ವಿಧಿಯೇ. ಒಬ್ಬನು ಹುಟ್ಟಿದಾಗ –ಅವನಿಗಿದು ಜೀವನಾಂಶ, ಅವನಿಗಿದು ಸುಖಸಂತೋಷ, ಈ ರೀತಿ ಅವನು ಸಾಯುವುದು ಎಂಬುದನ್ನೆಲ್ಲ –ಅವನು ಹುಟ್ಟುವ ಮೊದಲೇ ಆ ವಿಧಿ ಕಟ್ಟಳೆ ಮಾಡಿರುತ್ತಾನೆ, ಅಂದ ಮೇಲೆ –ಯಾವನ ಜೀವಿತದಲ್ಲಿಯಾಗಲಿ ಯಾವನೂ ಏನನ್ನೂ ಮಧ್ಯಂತರದಲ್ಲಿ ತಪ್ಪಿಸಲೂ ಸಾಧ್ಯವಿಲ್ಲ, ಒದಗಿಸಲೂ ಸಾಧ್ಯವಿಲ್ಲ” – ಇದು ಮೇಲೆ ಉಲ್ಲೇಖಿಸಿರುವ ಪಂಪನ ಪದ್ಯದ ತಿರುಳು.
ಬಸವಣ್ಣನವರಾದರೂ ಹೇಳುತ್ತಿರುವುದು ಇದನ್ನೇ –ಈ ಜನ್ಮಕ್ಕೆ ಪಡೆದು ಬಂದುದನ್ನು ಪರಿಹರಿಸುವೆನೆಂದರೆ ಪರಿಹಾರವಾಗುವುದಿಲ್ಲವಾಗಿ -ನನಗಿನ್ನೇನು ಗತಿಯೆಂದು ಗೊಣಗುತ್ತ ವಿಕ್ಷಿಪ್ತವಾಗುವುದು ತರವಲ್ಲ. ದುರ್ವಿಧಿಯ ಎದುರಲ್ಲೂ ಆತ್ಮ ತನ್ನ ಘನತೆಯನ್ನು ಉಳಿಸಿಕೊಳ್ಳುವುದು ಹೀಗೆ !
ಪಡೆದು ಬಂದದ್ದೆಂದರೆ –ಅದು ತಾನು ಮಾಡಿದ ಕರ್ಮಕ್ಕೆ ಅನುಗುಣವಾಗಿಯೇ ಇರುವುದು. ಆದ್ದರಿಂದಲೇ ತನ್ನ ಪಾಲಿನ ಸಂಸಾರವೆಲ್ಲಕ್ಕೂ ಮೂಲವಾದ ಈ ಕರ್ಮವನ್ನು ಮಾನವನು ಎದೆಗೆಡದೆ ಸವಾಲೆಸದು ಕರೆದು ಹುಣ್ಣಿಗೆ ಹುಣ್ಣು ತಾಕಿ ನೀಸಬೇಕು. ಹಾಗಲ್ಲದೆ ಮಾಡಿದ ಕರ್ಮ ಸವೆಯದು. ಮಾಡಿದ್ದುಣ್ಣೋ ಮಾರಾಯ ಎಂಬ ಜಾನಪದ ವೇದವಾಕ್ಯ ಸುಳ್ಳಾಗುವುದೇ ?
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.