Hindi Translationमैं वेतनभोत्री नहीं हूँ
समय-बद्ध सेवक हूँ,
नष्ट भ्रष्ट होकर भागनेवाला भृत्य नहीं हूँ;
सुनो कूडलसंगमदेव, मरण ही महानवमी है ॥
Translated by: Banakara K Gowdappa
English Translation Not I the man to serve
For wages;
I am a servant at a time of need;
Not I a servant to take flight.
Hear me, Kūḍala Saṅgama Lord,
Death is to me
A solemn festival!
Translated by: L M A Menezes, S M Angadi
Tamil Translationநான் நன்றிக்கடன் பட்டவனில்லை ஐயனே
உடையருக்கு உயிர் ஈவோன் நான் ஐயனே
பாழாகிக் கெட்டு ஓடுபவன் நான் இல்லை ஐயனே
கூடல சங்கம தேவனே, கேளாய்
மரணமே மகாநவமி ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನರಾಜಸೇವಕರಲ್ಲಿ ಎರಡು ವಿಧ -ಪಡೆದ ಜೀವನಾಂಶಕ್ಕಾಗಿ ದುಡಿಯುವವರು “ಜೋಳಿವಾಳಿ”ಗಳು. ಇವರು ರಾಜನ ಆಡಳಿತಾಂಗಕ್ಕೆ ಸಂಬಂಧಿಸಿದವರು. ರಾಜ ಸತ್ತರೆ ಅವನ ಜೊತೆಯಲ್ಲಿ ಇವರೂ ಸಾಯಬೇಕೆಂಬುದೇನೂ ನಿಯಮವಿರಲಿಲ್ಲ. “ವೇಳಿವಾಳಿ”ಗಳೆಂಬ ಇನ್ನೊಂದು ವರ್ಗದವರು ರಾಜನ ವೀರಯೋಧರೋ ಅಂಗರಕ್ಷಕರೋ ಆಗಿದ್ದು ನೇರವಾಗಿ ಆ ರಾಜನ ರಕ್ಷಣಾಂಗಕ್ಕೆ ಸೇರಿದವರು. ರಾಜ ಸತ್ತರೆ ಇವರೂ ಆತ್ಮಾರ್ಪಣ ಮಾಡಿಕೊಂಡು ಸಾಯುತ್ತಿದ್ದರು. ಇಂಥವರು ಗರುಡರೆಂಬ ಹೆಸರಿಂದ ಹೊಯ್ಸಳರ ಕಾಲದ ಇತಿಹಾಸದಲ್ಲಿ ಗುರುತಿಸಲ್ಪಡುವರು. ಅನ್ಯತ್ರ ಇವರನ್ನು ಲೆಂಕರೆಂದೂ ಕರೆಯಲಾಗುತ್ತಿತ್ತು. (ನೋಡಿ ವಚನ 731)
ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ತಮ್ಮ ತಮ್ಮ ಆರಾಧ್ಯ ದೈವಕ್ಕೆ ಪ್ರಾಣಾರ್ಪಣ ಮಾಡಿಕೊಳ್ಳುತ್ತಿದ್ದ ಒಂದು ವೀರ(ಭಕ್ತ)ವರ್ಗ “ಶಿವಸೋದರ” ಮುಂತಾದ ಹೆಸರಿಂದ ಬಹುಮಟ್ಟಿಗೆ ಬಸವ ಪೂರ್ವಕಾಲದಲ್ಲಿ ಮತ್ತು ಕ್ವಚಿತ್ತಾಗಿ ಬಸವಸಮಕಾಲದಲ್ಲಿಯೂ ಇದ್ದುದನ್ನು ಗುರುತಿಸಬಹುದು. ಈ ಹಿನ್ನಲೆಯಲ್ಲಿ ಬಸವಣ್ಣನವರು ಶಿವನಿಗೆ ತಾವೊಬ್ಬ ವೇಳೆವಾಳಿಯೆಂಬಂತೆ ಅರಿಕೆ ಮಾಡಿಕೊಳ್ಳುತ್ತಿರುವರು.
ಶಿವಸಮಯವನ್ನು ರಕ್ಷಿಸಲಾರದ ವಿಪನ್ನಾವಸ್ಥೆ ಒದಗಿದಲ್ಲಿ ಪ್ರಾಣಾರ್ಪಣೆ ಮಾಡಲಾದರೂ ಅವರು ಸಿದ್ಧರಾಗಿದ್ದವರೇ ಹೊರತು –ಆಶಿವದೊಡನೆ ರಾಜಿಮಾಡಿಕೊಂಡು ಬದುಕುವ ಹೇಡಿಗಳಾಗಿರಲಿಲ್ಲ ಬಸವಣ್ಣನವರು, ಸಾಧಿಸಬೇಕಾದ್ದನ್ನು ಸಾಧಿಸುವುದಕ್ಕಾಗಿ ಅಥವಾ ಅದನ್ನು ಸಾಧಿಸಲು ಆಗದಾಗ –ಆ ಕಾರಣಕ್ಕಾಗಿಯೇ ಸಾಯಲೂ ತಾವು ಹಿಂಜರಿಯುವುದಿಲ್ಲವೆಂಬುದಾಗಿ ಅವರು ಹೇಳಿಕೊಂಡಿರುವರು.
ಮರಣವೆನ್ನುವುದು ಅವರಿಗೆ ದುರ್ವ್ಯವಸ್ಥೆಯ ಮೇಲೆ ಎತ್ತಿ ನಡೆದ ದಾಳಿಯಂತೆ ಉತ್ಸಾಹಭರಿತವಾದುದಾಗಿತ್ತೇ ಹೊರತು ಎಳೆಯುವ ಯಮಕಿಂಕರರ ಕಾಲ ಬಳಿ ದೇಕುವುದಾಗಿರಲಿಲ್ಲ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.