ಕಟ್ಟಿದೆ ಒರೆಯ, ಬಿಟ್ಟೆ ಜನ್ನಿಗೆಯ,
ಮುಟ್ಟಿ ಬಂದಿರಿದರೆ ಓಸರಿಸುವನಲ್ಲ:
ಓಡದಿರು, ಓಡದಿರು!-
ನಿಮ್ಮ ಶರಣರ ಮನೆಯ ಬಿದುರಿನ ಅಂಕಕಾರ-
ಓಡದಿರು, ಓಡದಿರು, ಎಲೆ ಎಲೆ ದೇವಾ,
ಎಲೆ ಎಲೆ ಸ್ವಾಮೀ, ಎಲೆ ಎಲೆ ಹಂದೇ!
ಕೂಡಲಸಂಗಮದೇವಾ!
Art
Manuscript
Music Courtesy:
Video
TransliterationKaṭṭide oreya, biṭṭe jannigeyara,
muṭṭi bandiddare ōsarisuvanalla:
Ōḍadiru, ōḍadiru!-
Nim'ma śaraṇara maneya birudina aṅkakāra-
ōḍadiru, ōḍadiru, ele ele dēvā,
ele ele svāmī, ele ele handē!
Kūḍalasaṅgamadēvā!
Hindi Translationमैं ने म्यान बाँधा, याज्ञिकों को त्यागा
निकट आकर शस्त्र भोंक दो, तो पीछे नहीं हटूँगा;
मत भागो, मत भागो,
तव शरणों के घर का बिरदांकित योद्धा हूँ
मत भागो, मत भागो हे देव,
हे स्वामी, हे भीरु, कूडलसंगमदेव ॥
Translated by: Banakara K Gowdappa
English TranslationTook the sword in my hands
Leaving aside the sacred thread.
Will fight tooth and nail undeterred,
For I am a titled knight in the royal house of your devotees!
Don't run away! don't run away, O God!
Don't run away like a coward
O my Master! Kūḍala Saṅgama Lord! Translated by: Dr Shivamurthy Shivacharya Mahaswamiji Taralabalu Math, Sirigere English Translation 2
Sword at my side, leaving the priests,
I will not flinch
In fighting close at hand.
Don't run away! don't run away!
I am a titled servant of
Thy 'Śaraṇās house!
Don't run away! don't run away, O God,
O Lord, you runaway-
Kūḍala Saṅgama Lord!Translated by: L M A Menezes, S M Angadi
Tamil Translationவாளைக் கட்டிக் கொண்டேன், கறக்கும்
பசுவை நேர்ந்து கொண்டேன்
போராடவரினும், பின்னடையேன்
ஓடாய், ஓடாய்
உம் அடியாரின் இல்லத்தின் பெயர் பெற்ற வீரன்
ஓடாய், ஓடாய், தேவனே.
சுவாமியே, பேடியே
கூடல சங்கம தேவனே.
Translated by: Smt. Kalyani Venkataraman, Chennai
Telugu Translationపట్టితికత్తి విడిచితివిప్రుల
పై బడి పొడిచిన పరుగిడు వాడగాను
పాఱకు పాఱకయ్యా నీ శరణులయింట
బిరుదున్న భటుడ నేనయ్యా! నను విడిచి
పాఱకు పాఱకుమో ప్రభూ! పాఱకు మో స్వామీ!
పాఱకు మో తండ్రీ! కూడల సంగయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಮಾಹೇಶ್ವರಸ್ಥಲವಿಷಯ -
ಕರ್ಮ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಯುದ್ಧ ವೀರನು ರಣರಂಗಕ್ಕೆ ಹೋಗುವ ಮುನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳುವ ಸಮಾರಂಭವೊಂದು ವಿಧಿವತ್ತಾಗಿ ನಡೆಯಬೇಕು. ಅದಾದಮೇಲೆ ಯೋಧನು ದೇವಾಲಯಕ್ಕೆ ಹೋಗಿ ದೇವರಿಗೆ “ಕರೆಯುವ ಹಸು”ವನ್ನು ಬಿಟ್ಟು –ಆ ದೇವರು ತನ್ನನ್ನು ಕಾಪಾಡಲೆಂದು ಪ್ರಾರ್ಥಿಸಿಕೊಂಡ ರಣರಂಗದ ಕಡೆಗೆ ಹೊರಡುವನು. ಹೊರಟರಾಯಿತು -ಶತ್ರುವಿನ ಮೇಲೆ ಬಿದ್ದು ಇರಿಯದೆ ಹಿಮ್ಮೆಟ್ಟುವುದಿಲ್ಲ –ಆ “ಸ್ವಾಮಿ”ಭಕ್ತಿ ಅವನದು.
ಹಾಗೆಯೇ ಈ ದೇಹವನ್ನು ಕಟ್ಟಿಕೊಂಡು, ಮನಸ್ಸನ್ನು ಶಿವಭಕ್ತರ ಸೇವೆಗೆ ಬಿಟ್ಟಮೇಲೆ-ಬಂದ ಎಡರುತೊಡರುಗಳನ್ನು ಎದುರಿಸುವುದೇ ಬಸವಣ್ಣನವರ ಜಾಯಮಾನ. ತಮ್ಮ ಸೇವಾ ಮಾರ್ಗದಲ್ಲಿ ಶಿವನೇ-ಪರಿಕ್ಷಾರ್ಥವಾಗಿಯೇ ಆಗಲಿ ಅಡ್ಡ ಬಂದನೆಂದರೆ ಅವನನ್ನೂ ಪ್ರತಿಭಟಿಸುವ ಪೌರುಷ ಅವರದಾಗಿತ್ತು.
ಮಾನವರ ಜೊತೆಗಿದ್ದು ಆ ಮಾನವರ ನೋವು ನಲವಿಗೆ ಸ್ಪಂದಿಸುತ್ತ -ನೋವನ್ನು ನಿವಾರಿಸಿ ನಲಿವನ್ನು ಬೆಳೆಸಲು ಶ್ರಮಿಸುವುದೇ ಅವರ ನಿಲುವಾಗಿತ್ತು, ಅವರು ಪರಿಣಾಮದಲ್ಲಿ ಬಯಸಿದ್ದು ಮನುಕುಲದ ಯೋಗಕ್ಷೇಮವನ್ನೇ ಹೊರತು ಶಿವನ ಸರ್ವಾಧಿಕಾರಷಾಹಿಯನ್ನಲ್ಲ.
ರಾಜನೊಬ್ಬನು ಪ್ರಜೆಗಳಿಗೆ ದುಂಡಾವರ್ತಿಯಿಂದ ದಂಡಿಸುತ್ತಿದ್ದರೆ- ಅವನನ್ನು ಪ್ರತಿಭಟಿಸಿ ಓಡಿಸುವ ಜನನಾಯಕನ ನೆನಪನ್ನು ತರುವುದು- ಈ ವಚನದಲ್ಲಿ ಕಾಣಸಿಗುವ ಶಿವನ ಮತ್ತು ಬಸವಣ್ಣನವರ ಸಂಬಂಧ ವೈಖರಿ.
ದೇವರಿಲ್ಲದ ಅಧ್ಯಾತ್ಮಿಕೆಯ ಕಲ್ಪನೆಯೆಂದಾದರೂ ಬಸವಣ್ಣನವರ ಮನಸ್ಸಿನಲ್ಲಿ ಹಾದುಹೋಗಿತ್ತೋ?
ವಚನಸಾರ : ಎಲೇ ಶಿವನೇ, ಶರಣರ ಮನೆಯ ಬಂಟ ನಾನು, ನೀನು ಏನೇ ತೊಡರನ್ನು ಒಡ್ಡಿದರೂ ಆ ಶರಣರ ಸೇವೆಯನ್ನು ಮಾಡಲು ನಾನು ಸಿದ್ಧವಾಗಿದ್ದೇನೆ. ಬಾ ಕಾಡು, ಸೋತು ಹೇಡಿಯಾಗಿ ಓಡಬೇಡ, ಮರಳಿ ಬಂದು ನೀನು ಕಾಡದಂತಾಗಲಿ -ನಿನ್ನನ್ನು ಕೊಲ್ಲುತ್ತೇನೆ –ಎಂದು ತಮ್ಮ ಸೇವೆಗೆ ಅಡ್ಡಿಯಾಗಿ ಕಿರುಕುಳಯುದ್ಧ ಮಾಡುವನೆಂಬ ಪ್ರತೀತಿಯ ಶಿವನನ್ನು ಬಸವಣ್ಣನವರು ಮೂದಲಿಸುತ್ತಿರುವರು.
(ನೋಡಿ ವಚನ 148).
ವಿ : “ಬೇಡಿಬೇಡಿದ ಶರಣಂಗೆ ನೀಡದಿರ್ದಡೆ ತಲೆ ದಂಡ ಕೂಡಲಸಂಗ ಅವಧಾರು” ಎಂಬ ಬಸವಣ್ಣನವರ ವಚನ (ವಚನ 432, 707 ?)ವನ್ನು ಕಳಿಂಗದೇಶದ ಮಹಾದೇವಶೆಟ್ಟಿ ಓದಿ ಅವರನ್ನು ಪರೀಕ್ಷಿಸಲೆಂದು ಬರುತ್ತಿರುವ ವಾರ್ತೆಯನ್ನು ಶಿವನು ಆ ಬಸವಣ್ಣನವರ ಯೋಗನಿದ್ರೆಯಲ್ಲಿ ತಿಳಿಸಿ “ಎಂತು ಮಾಡಿದಪೆ” ಎಂದು ಆ ತಂಕಪಟ್ಟು ಮಾಯವಾಗುವನು. ಆಗ ಎಚ್ಚತ್ತ ಬಸವಣ್ಣನವರು “ಅಂಜದಿರಂಜದಿರುದೇವ. ಪರೀಕ್ಷೆಗೆ ತೆರಹಿಲ್ಲಂ ಕಟ್ಟಿದೆನೊರೆಯ ಬಿಟ್ಟೆ ಜನ್ನಿಗೆಯ, ಓಡದಿರೋಡದಿರು. ಶರಣರ ಮನೆಯ ಬಿರುದಿನಂಕಕ್ಕೆ ಹಿಮ್ಮೆಟ್ಟದಿರಲೆ ದೇವ, ಎಲೆ ತಂದೆ, ಎಲೆಲೆ ಹಂದೆ ಕೂಡಲಸಂಗ ಸ್ವಯವಾಗು ಸ್ವಯವಾಗು” ಎಂದು (ಈ 703ನೇ ವಚನವನ್ನೇ ನುಡಿದು) ಉತ್ಸಾಹಿಸಿದಂತೆ ಹರಿಹರನು ಬಸವರಾಜದೇವರ ರಗಳೆಯಲ್ಲಿ ಪ್ರಸ್ತಾಪಿಸಿರುವನು (ನೋಡಿ 12ನೇ ಸ್ಥಳದ ಆರಂಭದಲ್ಲಿ).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.