Hindi Translationवेद-विरुद्ध म्यान बाँधूँगा,
शास्त्र को बेडियाँ पहनाऊँगा
तर्क की पीठ पर कोडे लगाऊँगा,
देखो; आगम की नाक काटूँगा
महादानी कूडलसंगमदेव ,
मातंग चन्नय्या के घर का दास हूँ मैं॥
Translated by: Banakara K Gowdappa
English Translation I’ll gird myself with arms
To fight the Vedas;
I will put fetters on
The Śāstras;
I will raise weals on Logic’ s back;
Look you, I will chop off
The Agamas’ nose!
O Kūḍala saṅgama Lord,
O Thou most bountiful, I am
Mādāra Cennayya’s servant- man !
Translated by: L M A Menezes, S M Angadi
Tamil Translationவேதத்திற்கு உறை கட்டுவேன், சாத்திரத்திற்கு
விலங்கு பூட்டுவேன், தருகத்தின் முதுகுத்தோலை உரிப்பேன்
ஆகமத்தின் மூக்கைக் கொய்வேன், காணாய்
பெருவள்ளல் கூடல சங்கமதேவனே
சக்கிலி சென்னய்யனின் இல்லத்து மகன் நான் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನವೇದಶಾಸ್ತ್ರಗಳಲ್ಲಿ ಕುರುಡು ನಂಬಿಕೆ ಸಲ್ಲದು
ಬಹು ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮಶಾಸ್ತ್ರಗಳು ವೇದಗಳನ್ನೇ ಆಶ್ರಯಿಸಿಕೊಂಡು ಬಂದಿವೆ. ವೇದದಲ್ಲಿರುವ ಒಂದೂಂದು ಪದಕ್ಕೂ ಬೆಲೆಯನ್ನು ಕೊಟ್ಟು, ಅದರಲ್ಲಿ ಕಿಂಚಿತ್ತೂ ವ್ಯರ್ಥವೆಂಬುದೇ ಇಲ್ಲವೆಂಬ ವಿಶ್ವಾಸವನ್ನು ಹೊಂದಿವೆ. ದೇವರ ಬಗ್ಗೆ ಆಸ್ತಿಕ ಬುದ್ಧಿಯಿರಲಿ, ಬಿಡಲಿ, ವೇದಕ್ಕೆ ಮನ್ನಣೆಯನ್ನು ನೀಡಿದರೆ ಸಾಕು, ಅಂಥವರನ್ನು ಆಸ್ತಿಕರೆಂದು ಅಂಗೀಕರಿಸಿ, ಉಳಿದವರನ್ನು ನಾಸ್ತಿಕರೆಂದು ಕಡೆಗಣಿಸಿದೆ. ಹೀಗಾಗಿ ದೇವರಿಗಿಂತಲೂ ಮಿಗಿಲಾದ ಮಾನ್ಯತೆಯನ್ನು ವೇದಕ್ಕೇ ನೀಡಲಾಗಿದೆಯೆಂದರೆ ಅತಿಶಯೋಕ್ತಿಯೇನೂ ಆಗಲಾರದು. ಹೀಗೆ ಪರಮ ಪ್ರಧಾನವೂ ಪರಮಾಧಾರವೂ ಆದ ವೇದವೇ ಆಗಲಿ, ಅದನ್ನು ಅವಲಂಬಿಸಿ ಬಂದಿರುವ ಶಾಸ್ತ್ರಗಳೇ ಆಗಲಿ ಜಾತಿಯಿಂದ ಕುಲಹೀನರಾದವರೊಡನೆ ಕೂಡಿ ಬಾಳುವುದು ಸರಿಯಲ್ಲವೆಂದರೆ ಅವುಗಳನ್ನೂ ಪ್ರತಿಭಟಿಸಲು ಅಣ್ಣನವರು ಹಿಂಜರಿಯುವುದಿಲ್ಲ. ಜನ್ಮದಿಂದ ಕುಲಹೀನನೆಸಿದರೂ ಆಚರಣೆಯಿಂದ ಕುಲಜನಾದ, ಅನುಪಮ ಚರಿತ್ರನಾದ, ಶರಣ ಶ್ರೇಷ್ಠ ಮಾದಾರ ಚೆನ್ನಯ್ಯನನ್ನು ತನ್ನ ತಂದೆಯನ್ನಾಗಿಯೇ ಗೌರವಿಸಿ ‘ಮಾದಾರ ಚೆನ್ನಯ್ಯನ ಮನೆಯ ಮಗನಾನಯ್ಯಾ’ ಎಂದಿದ್ದಾನೆ ಬಸವಣ್ಣ. ಈ ಮಾನವತಾ ಪ್ರೇಮಕ್ಕೆ ಅಡ್ಡಬರುವ ವೇದಗಲ ಮೇಲೆ ಕೆರಳಿ ಕತ್ತಿಯನ್ನು ಝಳಪಿಸಿದ್ದಾನೆ. ಧರ್ಮಶಾಸ್ತ್ರಗಳ ಕಾಲಿಗೆ ಸರಪಳಿಯನ್ನು ಬಿಗಿದು ಬಂಧಿಸುವುದಾಗಿ ಬೆದರಿಸಿದ್ದಾನೆ. ತರ್ಕಶಾಸ್ತ್ರಗಳ ಬೆನ್ನ ಮೇಲೆ ಬಾರಿಸುವುದಾಗಿ ಬಾರಿಕೋಲನೆತ್ತಿ ಬೆನ್ನಟ್ಟಿದ್ದಾನೆ, ಆಗಮಗಳ ಮೂಗನ್ನು ಕೊಯ್ದು ಕುರೂಪಗೊಳಿಸಿ ಅವಮಾನಪಡಿಸುವುದಾಗಿ ರೊಚ್ಚಿಗೆದ್ದಿದ್ದಾನೆ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.