Hindi Translationहाथी अंकुश से नहीं डरता स्वामी,
उसे सिंह नख समझ कर ही तो डरता है
मैं बिज्जळ से डरता हूँ? कूडलसंगमदेव।
मैं तुम से डरता हूँ क्योंकि
तुम सर्वजीव दयापर हो॥
Translated by: Banakara K Gowdappa
English Translation Does an elephant fear the goad, O Lord,
Save that he thinks it is a lion's claw?
And should I fear this Bijjaḷa, Lord
Kūḍala Saṅgama?
I only fear Thee, because Thou art
Compassionate to all things that live!
Translated by: L M A Menezes, S M Angadi
Tamil Translationயானை அங்குசத்திற்கு அஞ்சுமோ ஐயனே
இடையறாது சிங்கத்தின் நகம் என அஞ்சுவதன்றி?
கூடல சங்கம தேவனே, நீ அனைத்து உயிருக்கும்
அருள்வதால் உனக்கு அஞ்சுவதன்றி
நான் பிஜ்ஜளனுக்கு அஞ்சுவேனோ, ஐயனே
Translated by: Smt. Kalyani Venkataraman, Chennai
Telugu Translationఏనుగంకుశమునకు వెఱచునే అయ్యా?
మానక సింహపు గోళ్ళని వెఱచుగాని;
నే నీబిజ్జలునకు వెఱతునే? అయ్యా సంగయ్యా :
సకల జీవదయామయుడ వగుటచే నీకు వెఱతునయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಪ್ರಾಣಲಿಂಗಿಸ್ಥಲವಿಷಯ -
ದೇವರು
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಬಸವಣ್ಣನವರು ಕಲ್ಯಾಣದಲ್ಲಿದ್ದಷ್ಟು ಕಾಲವೂ ಬಿಜ್ಜಳನ ಆಸ್ಥಾನದಲ್ಲಿದ್ದರು. ವೇದಜಡರು ಅವರ ಪ್ರಗತಿಪರ ಧೋರಣೆಗಳನ್ನು ಸಹಿಸದೆ ರಾಜನನ್ನೇ ಅವರ ಮೇಲೆ ಎತ್ತಿಕಟ್ಟಿದರೂ ಅವರು ಆ ರಾಜನ ಭಂಡಾರಿಯಾಗಿಯೇ ಉಳಿದಿದ್ದು ಗಮನಾರ್ಹವಾದ ಸಂಗತಿ.
ಬಸವಣ್ಣನವರು ಕಲ್ಯಾಣದ ಹೊಲೆಗೇರಿಯ ಸಂಬೋಳಿ ನಾಗಿದೇವನೆಂಬ ದಲಿತ ಶರಣನ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಅರಮನೆಗೆ ಬಂದ ದಿನವಂತೂ ಬಿಜ್ಜಳನ ವೈದಿಕರ ಮಾತು ಕೇಳಿ ಅವರನ್ನು “ಅತಿಭಕ್ತಿ ತಲೆಗೇರಿ ಹಿರಿಯ ಮಾಹೇಶ್ವರರೆಂದು ಪೊಲೆಗಲಿಸಿ ಅವರ ಮನೆಯೊಳುಂಡುದಲ್ಲದೆ ಇಲ್ಲಿ ಬಂದ ಎಲ್ಲರಂಗೋಜಾಗತಂ ಮಾಳ್ಪದು ಮಾರ್ಗವಲ್ಲ” ಎಂದು ಕಟುವಾಗಿ ಆಕ್ಷೇಪಿಸುತ್ತಾನೆ. ಮತ್ತೊಂದು ಸಲ -ರಾಜ ಭಂಡಾರವನ್ನು ದುರುಪಯೋಗಪಡಿಸಿರುವುದಾಗಿ ಆಪಾದಿಸಿ ಬಸವಣ್ಣನವರನ್ನು ಹೊರಹಾಕುತ್ತಾನೆ. ಆಗ ಬಸವಣ್ಣನವರು ಮತ್ತಿಘಟ್ಟವೆಂಬ ಪಾಳ್ಗಾನಿಗೆ ಬಂದು ನೆಲಸಿದ್ದರು (ಸಿಂಗಿರಾಜಪುರಾಣ 31-32). ಈ ಅವಧಿಯಲ್ಲಿ ಬಿಜ್ಜಳನಿಗೆ ಬಸವಣ್ಣನವರು ನಿರಪರಾಧಿಗಳೆಂದು ರುಜುವಾತಾಗಲು ಅವರನ್ನು ಮರಳಿ ಕಲ್ಯಾಣಕ್ಕೆ ಕರೆಸಿಕೊಂಡನು.
ಈ ಹಿನ್ನೆಲೆಯಲ್ಲಿ ನಮ್ಮನ್ನು ಕಾಡುವ ಒಂದು ಪ್ರಶ್ನೆಯೆಂದರೆ-ಈ ಅನುಸರಣೆಯಲ್ಲಿ ಬಸವಣ್ಣನವರು ಬಿಜ್ಜಳನಿಗೆ ಹೆದರಿದ್ದರೆ? ಅದು ಹಾಗೆ ಕಂಡರೂ ಜನಪ್ರಿಯರಾಗಿದ್ದ ಬಸವಣ್ಣನವರಿಗೆ ಸಾಕ್ಷಾತ್ ಬಿಜ್ಜಳನೇ ಒಳಗೊಳಗೆ ಹೆದರಿದ್ದನು. ಬಸವಣ್ಣನವರಿಗಾದರೋ ಬಿಜ್ಜಳನಿಗೇನೂ ಅಪಾಯವಾಗಬಾರದೆಂಬ ದಯಾಭೀತಿಯಿತ್ತೇ ಹೊರತು, ಬಿಜ್ಜಳನ ಭಯ ಅವರಿಗಿರಲಿಲ್ಲ.
ಇದರ ಸಮರ್ಥನೆ ಈ ವಚನದಲ್ಲಿಯೇ ದೊರೆಯುವುದು. ಇಲ್ಲಿ ಬಸವಣ್ಣನವರು ತಮ್ಮನ್ನು ಆನೆಗೆ ಹೋಲಿಸಿಕೊಂಡು –ಅದು ಅಂಕುಶಕ್ಕೇಕೆ ಹೆದರುವುದೆಂದು ತಾವೇ ಪ್ರಶ್ನಿಸುತ್ತ –ಆ ಅಂಕುಶ ಸಿಂಹದ ಉಗುರೆಂದು ತೋರುವುದರಿಂದ ಆನೆ ಅದಕ್ಕೆ ಹೆದರುವುದೇ ಹೊರತು –ಆ ಲೋಹದ ಚೂರಿಗಲ್ಲವೆಂದಿರುವರು.
ಹಾಗೆಯೇ ಬಸವಣ್ಣನವರು ಬಿಜ್ಜಳನಿಗೆ (ಆತಂಕಮಿಶ್ರಿತ) ಭಯವನ್ನು ಪಟ್ಟಿದ್ದರು–ಅದಕ್ಕೆ ಕಾರಣ–ಆ ಬಿಜ್ಜಳನೊಬ್ಬ ಶೈವ–ಅವನಿಗೆಲ್ಲಿಯಾದರೂ ಕೇಡಾದೀತೆಂಬ ದಯೆಯಿಂದ ಮಾತ್ರ. ಆದುದರಿಂದ ಆ ರಾಜನನ್ನು ಮೃದುಮಾರ್ಗವಾಗಿಯೇ ತಿದ್ದುವುದು ಸೂಕ್ತವಷ್ಟೇ ಅಲ್ಲ, ಅದು ತಮ್ಮ ಕರ್ತವ್ಯವೆಂದೂ ಬಸವಣ್ಣನವರು ಭಾವಿಸಿದ್ದರು.
ಈ ವಚನದಿಂದ ಹೊಳೆಯುವ ಬಹುಮುಖ್ಯವಾದ ಚಾರಿತ್ರಿಕ ಅಂಶವೆಂದರೆ-ಬಿಜ್ಜಳನು ಸತ್ತಿದ್ದು ಶರಣರ ದೊಂಬಿಯಿಂದ ಮತ್ತು ಬಸವಣ್ಣನವರು ಅದರ ಮುಂಚೂಣಿಯಲ್ಲಿದ್ದರು ಎಂದು ಮುಂತಾದೆಲ್ಲಾ ಕಟ್ಟುಕತೆಯೆಂಬುದು.
ಆದ್ದರಿಂದ ಬಿಜ್ಜಳನನ್ನಷ್ಟೇ ಅಲ್ಲ–ವೈದಿಕರನ್ನೂ, ಕುಲಬಾಂಧವರೇ ಆದ ವೀರಶೈವಸಂಪ್ರದಾಯವಾದಿಗಳನ್ನೂ ಬಸವಣ್ಣನವರು ಎದುರಿಸಿದ್ದು ವೈಚಾರಿಕವಾಗಿಯೇ ಹೊರತು ಹಿಂಸಾಮತಿಯಿಂದಲ್ಲವೆಂಬುದನ್ನು ತಿಳಿಯಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.