ಮಾಡುವ ನೀಡುವ ಭಕ್ತನ ಕಂಡರೆ
ನಿಧಿ ನಿಧಾನವ ಕಂಡಂತಾಯಿತ್ತು,
ಪಾದೋದಕ-ಪ್ರಸಾದಜೀವಿಯ ಕಂಡರೆ
ಹೋದ ಪ್ರಾಣ ಬಂದಂತಾಯಿತ್ತು.
ಅನ್ಯರ ಮನೆಗೆ ಹೋಗಿ, ತನ್ನುದರವ ಹೊರೆಯದ
ಅಚ್ಚ ಶರಣರ ಕಂಡರೆ
ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು.
Hindi Translationकरने और देनेवाले भक्तों को देखने पर
निधि-निधान देखने के समान होता है।
पादोदक-प्रसाद जीवी को देखने पर
मृत प्राणों के लौटने के समान होते है।
औरों के द्वार जाकर अपना उदर पोषण
नहीं करनेवाले सच्चे शरणों को देखने पर
निश्चय ही उन्हें कूडलसंगमदेव कहता हूँ॥
Translated by: Banakara K Gowdappa
English Translation Whenever I see a devotee
Rendering service and serivng food,
It is as if I saw
A hidden hoard.
Whenever I see one living of
Prasāda and Pādōdaka ,
It is as if
Departed breath had come again.
Whenever I see a perfect Śaraṇa
Not visiting other's houses to keep himself
I call him Lord Kūḍala Saṅgama,forsooth!
Translated by: L M A Menezes, S M Angadi
Tamil Translationசெய்யும், ஈயும் பக்தனைக்காணின்
செல்வப்புதையலைக் கண்டதனையதாயிற்று
ஜங்கமருக்கு உணவீந்து பிரசாதமாக உண்பவனைக்
காணின் அகன்ற உயிர் வந்ததனையதாயிற்று
பிறர் மனைக்குச் சென்று, தன் வயிற்றை
வளர்க்காத உண்மையான அடியாரைக் காணின்
உறுதியாக கூடல சங்கமதேவன் என்பேன்
Translated by: Smt. Kalyani Venkataraman, Chennai
Telugu Translationపెట్టి పోషించు భక్తునిగన నిధి నిధానము చూచినట్ల గునయ్యా,
పాదోదక ప్రసాదము చూచిన పోయిన ప్రాణము వచ్చినట్ల గునయ్యా:
పర గృహమున కేగి తన పొట్టనింపు కొనని
శరణుని జూచిన అచ్చము నా సంగడే యని పల్కెదనయ్యా
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಶರಣಸ್ಥಲವಿಷಯ -
ಪ್ರಸಾದ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಯಾವನು ತನ್ನ ಐಶ್ವರ್ಯವನ್ನು ಭಕ್ತರ ಕಷ್ಟಕಾರ್ಪಣ್ಯದ ನಿವಾರಣೆಗಾಗಿ ವೆಚ್ಚಮಾಡುವನೋ ಅವನು ಸಮಾಜದ ಒಂದು ಜೀವಂತನಿಧಿ.
ನೆಲದಲ್ಲಿ ಬಚ್ಚಿಟ್ಟ, ಸರ್ಪಕಾವಲಿರುವ, ಅಗಿಸಿಕೊಳ್ಳುವ ರಕ್ತಕಕ್ಕಿಸಿಕೊಳ್ಳುವ, ಬಲಿಕೇಳುವ ನಿಷಿದ್ಧ ನಿಧಿಯಲ್ಲವದು. ನೆಲದ ಮೇಲೆಯೇ ಪ್ರಕಟವಾಗಿರುವ, ಬಂದವರಿಗೆಲ್ಲ ಭಾಗ್ಯವಾಗುವ, ಇಲ್ಲದವರಿಗೆಲ್ಲ ಸಲ್ಲುವ (ದಾಸೋಹಿ ಎಂಬ) ಈ ಜೀವಂತನಿಧಿ -ಸ್ವಯಂ ದಾನಶೀಲವುಳ್ಳುದು. ಅದನ್ನು ಕಾಣುವುದೇ ಒಂದು ಪುಣ್ಯವಿಶೇಷ.
ಹಸಿದು ಮನೆಗೆ ಬಂದವರಿಗೆ ನೀಡಿ ಉಪಚರಿಸಿ-ಉಳಿದುದೇ ತನಗೆ ಪ್ರಸಾದವೆಂದು ಪ್ರಸನ್ನ ಚಿತ್ತವಾಗಿರುವ ಆ ಚೇತನವನ್ನು ಕಂಡರೆ –ಎಂಥ ಹತಾಶನೂ ಆತ್ಮಹಂತಕನೂ -ಬದುಕಿಗೊಂದು ಘನತೆಯಿದೆಯೆಂದು ಅರಿತುಕೊಂಡು –ದಾನಶೀಲವಾದೊಂದು ಬದುಕನ್ನು ಬದುಕಬೇಕೆಂದು ಉತ್ತೇಜಿತನಾಗುತ್ತಾನೆ.
ಹೀಗೆ ಇದ್ದುದನ್ನು ಹಂಚಿತಿನ್ನುವ, ಅದೇ ಪ್ರಸಾದವೆನ್ನುವ, ಯಾರ ಹಂಗಿನಲ್ಲೂ ಬದುಕೆನೆನ್ನುವ ಜೀವ-ಭೂಮಿಯ ಮೇಲೆ ತಿರುಗಾಡುವ ಶಿವಸ್ವರೂಪ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.