Hindi Translationपंडित हो या मूर्ख
संचित कर्म बिना भोगे नहीं छूटता;
श्रुति घोषणा करती है,
बिना भोगे प्रारब्ध कर्म नहीं छूटता;
किसी लोक में रहने पर भी कर्म-फल से मुक्ति नहीं।
वही धन्य है जो अपने कर्म-फल समेत
कूडलसंगमदेव को आत्मार्पण करता है॥
Translated by: Banakara K Gowdappa
English Translation Let one be scholar or a fool,
The stored-up karma will not leave
Unless he can consume it.
Look you, the Revelations say
Your current karma will not go
Unless you use it up-it will not leave
In whatever world you be.
Blessed is he
Who makes an offering of his soul
To Lord Kūḍala Saṅgama
Along with his karma's fruit.
Translated by: L M A Menezes, S M Angadi
Tamil Translationபண்டிதனாயினும் அறிவிலியாயினும்
முன்செய்த தீவினைகளை துய்க்காமல் விடவியலாது
முன்செய்த தீவினைகள் துய்க்காமல்
அகல்வதில்லை என வேதம் கூறுகிறது
எந்த உலகிலிருப்பினும் விடாது
கர்ம பலன்களைக் கூட்டி, கூடல சங்கனுக்கு
ஆன்ம நிவேதனம் செய்யின் புண்ணியசாலி ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಬಸವಣ್ಣನವರು ಕರ್ಮ ಎಂಬ ಪದವನ್ನು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಪಾಪದ ಫಲವೆಂಬ ಅರ್ಥದಲ್ಲಿ (ವಚನ 19, 861) ಬಳಸಿರುವರಾದರೂ –ಅದನ್ನು ಸಂಚಿತ ಪ್ರಾರಬ್ಧ ಆಗಾಮಿ ಎಂದು ವಿಭಜಿಸಿ ಹೆಸರು ಹಿಡಿದು (ಇನ್ನೆಲಿಯೂ) ಬಳಸಿಲ್ಲ. ಮತ್ತು ಸಂಚಿತಕರ್ಮವೇ ಅಲ್ಲ ಪ್ರಾರಬ್ಧಕರ್ಮವೂ ಭೋಗಿಸಿದಲ್ಲದೆ ಬಿಡದೆಂಬ ಕಲ್ಪನೆಯೂ ಅವರಿಗಿರಲಿಲ್ಲ (ವಚನ, 142-178, 474, 510) ಈ ಯಾವ ಕರ್ಮವನ್ನಾದರೂ ಪೂಜೆಯಿಂದ ಪ್ರಸಾದದಿಂದ ಪರಿಹರಿಸಿಕೊಳ್ಳಬಹುದೆಂದಿರುವರು ಅವರು : “ಕರ್ಮ ಹರಿಯದೊಡಾ ಪೂಜೆಯೇಕೋ ? (ವಚನ 803), “ನಿಮ್ಮ ಪಾದವ ಮುಟ್ಟಿ ಎನ್ನ ಕರ್ಮ ಹರಿಯಿತ್ತು” (ವಚನ 796) ಎಂದು ಮುಂತಾಗಿ.
ಅಲ್ಲದೆ ವೈದಿಕರ ಕಲ್ಪನೆಯ ಕರ್ಮಸ್ವರೂಪವನ್ನೂ ಆ ಕರ್ಮಮಾರ್ಗವನ್ನೂ ಬಸವಣ್ಣನವರು ಸಂಪೂರ್ಣವಾಗಿ ತಿರಸ್ಕರಿಸಿರುವರು (ವಚನ-209, 363, 384, 577, 625, 751). ಅವರು ಕೆಲವೆಡೆ ಕಾಯಕವೆಂಬ ಅರ್ಥದಲ್ಲಿ ಕರ್ಮಫಲವನ್ನು ಬಳಸಿರುವರಾದರೂ (ವಚನ 711) ಆ ಕರ್ಮವನ್ನು ಅಜೇಯವಾದೊಂದು ಪಿಡುಗೆಂಬ ಅರ್ಥದಲ್ಲಿ ಬಳಸಿಯೇ ಇಲ್ಲ. ಕುಪ್ರಸಿದ್ಧವಾದ ಈ ಕರ್ಮದೊಡನೆ ಅವರು ಹೋರಾಡುವೆನೆಂದಿರುವರೇ ಹೊರತು –ಅದಕ್ಕೆ ಬಲಿಬೀಳುವ ಮಾತೇ ಇಲ್ಲ (ವಚನ-702)
ವಸ್ತು ಸ್ಥಿತಿ ಹೀಗಿರುವಲ್ಲಿ “ಸಂಚಿತಕರ್ಮವ ಉಂಡಲ್ಲದೆ ಬಿಡದು, ಪ್ರಾರಬ್ಧಕರ್ಮವ ಭೋಗಿಸಿದಲ್ಲದೆ ಹೋಗದೆಂದು ಶ್ರುತಿ ಸಾರುತ್ತೈದಾವೆ ನೋಡಾ” ಎಂಬಂಥ ವೈದಿಕ ಕರ್ಮಸಿದ್ಧಾಂತದನುಮತದ ಮಾತುಗಳು ಬಸವಣ್ಣನವರದು ಹೇಗಾದವು? ಮತ್ತು –“ತಾನಾವ ಲೋಕದೊಳಗಿದ್ದರೆಯೂ ಬಿಡದು ಕರ್ಮ” ಎಂಬಂಥ ಕರ್ಮಗುಲಾಮತನ ಬಸವಣ್ಣನವರದಲ್ಲವೇ ಅಲ್ಲ.
“ಕರ್ಮಫಲಗೂಡಿ ಕೂಡಲ ಸಂಗಮದೇವಂಗೆ ಆತ್ಮನೈವೇದ್ಯವ ಮಾಡಿದವನೇ ಧನ್ಯ”ಎಂಬ ಭಾವ ಬಸವಣ್ಣನವರದೇ ಎನ್ನಬಹುದಾದರೂ-ಅದರ ಅಭಿವ್ಯಕ್ತಿಪ್ರಕಾರ ಮತ್ತು ಅದಕ್ಕೆ ಹಿನ್ನೆಲೆಯಾಗಿ ಚಿತ್ರಿಸಿರುವ ವೈದಿಕ ಕರ್ಮದ ರಣರಣಕ ಅವರದಲ್ಲವೆಂಬುದನ್ನು ಮನಗಾಣಬೇಕು.
ಈ ವಚನ “ಪಂಡಿತನಾಗಲಿ ಮೂರ್ಖನಾಗಲಿ”ಎಂದು ಪ್ರಾರಂಭವಾಗಿರುವುದೇ ನಮ್ಮನ್ನು ಬಸವಣ್ಣನವರ ನುಡಿಗಟ್ಟಿನಿಂದ ದೂರ ಒಯ್ದಂತೆನಿಸುವುದು. ಅವರು ಪಂಡಿತ*ಮೂರ್ಖ ಪದಗಳನ್ನು ಜೋಡಿಸಿಯಾಗಲಿ ಬಿಡಿಸಿಯಾಗಲಿ ಮತ್ತೆಲ್ಲಿಯೂ ಬಳಸಿರುವುದಿಲ್ಲ.
ಆದ್ದರಿಂದ-“ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ| ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ (3-30) ಎಂದು ಮುಂತಾದ ಭಗವದ್ಗೀತೆಯ ಮಾತುಗಳನ್ನು ತಿದ್ದಿ –ಕರ್ಮಸಿದ್ಧಾಂತದೊಡನೆ ಬೆರಸಿ ಈ ವಚನವನ್ನು ಸನಾತನೀ ವೀರಶೈವನೊಬ್ಬನು ಬರೆದು ಬಸವಣ್ಣನವರ ಹೆಸರಿನಲ್ಲಿ ಪ್ರಕ್ಷೇಪಿಸಿರುವನು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.