Hindi Translationगुरू, लिंग, जंगम से पादोदक प्रसाद बनता है।
वह भाव ही मेरे लिए महानुभाव है,
मेरे लिए और कोई अन्य प्रसाद नहीं है,
कूडलसंगमदेव॥
Translated by: Banakara K Gowdappa
English Translation Prāsāda and Pādōdaka are what they are
Because of Guru, Liṅga and Jaṅgama
Seeing that I have experience in full
Of this idea, nought else besides
Is Prāsāda now for me,
O Kūḍala Saṅgama Lord!
Translated by: L M A Menezes, S M Angadi
Tamil Translationபிரசாதியின் பிரசாதித்தலம்
குரு, இலிங்க, ஜங்கமரால் திருவடித்
திருநீர் பிரசாதமாயிற்று
அவ்வுணர்வே பேருணர்வாகி
எனக்கு வேறு பிரசாதம் என்பதில்லை
கூடல சங்கம தேவனே.
Translated by: Smt. Kalyani Venkataraman, Chennai
Telugu Translationగురులింగ జంగమముచే పాదోదకము ప్రసాదమయ్యె
తద్భావమే మహానుభావమై నాకు వేరు ప్రసాదములేకుండెరా సంగా! Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಪ್ರಸಾದಿಯ ಪ್ರಸಾದಿಸ್ಥಲವಿಷಯ -
ಲಿಂಗಜಂಗಮ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನದಶಪಾದೋದಕ ಪಟ್ಟಿ
1 2 3
1. ನೇತ್ರೋದಕ ಪಾದೋದಕ ಗುರುಪಾದೋದಕ (ಕರುಣಜಲ)
2. ಶ್ರೋತ್ರೋದಕ ಲಿಂಗೋದಕ
3. ಘ್ರಾಣೋದಕ ಮಜ್ಜನೋದಕ ಲಿಂಗಪಾದೋದಕ (ವಿನಯಜಲ)
4. ಜಿಹ್ವೋದಕ ಸ್ಪರ್ಶನೋದಕ
5. ಸ್ಪರ್ಶನೋದಕ ಅವಧಾರೊ(ನೊ) ದಕ ಜಂಗಮ ಪಾದೋದಕ (ಸಮತಾಜಲ)
6. ಪಾದೋದಕ ಅಪ್ಯಾಯನೋದಕ
7. ಮಜ್ಜನೋದಕ ಹಸ್ತೋದಕ
8. ಅರ್ಪಿತೋದಕ ಪರಿಣಾಮೋದಕ
9. ಹಸ್ತೋದಕ ನಿರ್ನಾಮೋದಕ
10. ಸತ್ಯೋದಕ ಸತ್ಯೋದಕ
(ಉರಿಲಿಂಗಪೆದ್ದಿ - (ಚೆನ್ನಬಸವ –ಅದೇ 4-5) (ಚೆನ್ನಬಸವ –ಅದೇ 4-10)
ವೀರಶೈವಚಿಂತಾ ಮಣಿ 4-22)
ಪಟ್ಟಿ -4
ಗುರು ಲಿಂಗ ಜಂಗಮ
ಪ್ರಸಾದ : ಶುದ್ದ ಸಿದ್ಧ ಪ್ರಸಿದ್ಧ
ಪಾದೋದಕ : ಕರುಣಜಲ ವಿನಯಜಲ ಸಮತಾಜಲ
ಏಕಾದಶಪ್ರಸಾದ (ಪಟ್ಟಿ 5)
1. ಗುರುಪ್ರಸಾದ
2. ಲಿಂಗಪ್ರಸಾದ
3. ಜಂಗಮಪ್ರಸಾದ
4. ಪ್ರಸಾದಿಯ ಪ್ರಸಾದ
5. ಆಪ್ಯಾಯನ ಪ್ರಸಾದ
6. ಸಮಯಪ್ರಸಾದ
7. ಪಂಚೇಂದ್ರಿಯ ವಿರಹಿತಪ್ರಸಾದ
8. ಅಂತಃಕರಣ ಚತುಷ್ಟಯ ವಿರಹಿತಪ್ರಸಾದ
9. ಸದ್ಭಾವ ಪ್ರಸಾದ
10. ಶಮತಾ ಪ್ರಸಾದ
11. ಜ್ಞಾನಪ್ರಸಾದ
(ಚೆನ್ನ ಬಸವ, ವೀರಶೈವ ಚಿಂತಾಮಣಿ 4-22)
ಪಾದೋದಕವು ದಶವಿಧವೆನ್ನುವರು –ಇದು ಗುರು(ಲಿಂಗ)ಜಂಗಮವನ್ನು ಕಂಡು ಸ್ವಾಗತಿಸಿ ಸತ್ಕರಿಸಿ ಪರಿಣಾಮಿಸುವ ಭಕ್ತನ ಸೇವೆಯ ಹತ್ತು ಹಂತಗಳಲ್ಲದೆ ಬೇರೆಯಲ್ಲ : ಗುರುಲಿಂಗಜಂಗಮವನ್ನು ಕಣ್ಣಿಂದ ಕಾಣುವುದು ನೇತ್ರೋದಕ, ಅವರ ಶಬ್ದವನ್ನು ಆಲಿಸುವುದು ಶ್ರೋತ್ರೋದಕ, ಅವರು ಸಮೀಪಿಸಿದಾಗ ಅವರ ಮೈಗಂಧವನ್ನು ಆಘ್ರಾಣಿಸುವುದು ಘ್ರಾಣೋದಕ, ಅವರ ಆಶೀರ್ವಾದ ಜಿಹ್ವೋದಕ, ಅವರ ಸ್ಪರ್ಶ ಸ್ಪರ್ಶನೋದಕ, ಅವರ ಪಾದಪ್ರಕ್ಷಾಳನವು ಪಾದೋದಕ, ಅವರಿಗೆ ಸ್ನಾನಮಾಡಿಸುವುದು ಮಜ್ಜನೋದಕ, ಅವರಿಗೆ ಊಟಕ್ಕಿಡುವುದು ಅರ್ಪಿತೋದಕ, ಉಂಡ ಕೈ ತೊಳೆಯಲು ನೀರು ಕೊಡುವುದು ಹಸ್ತೋದಕ –ಈ ಎಲ್ಲ ಸೇವಾಕ್ರಮದಿಂದ ಸಿಕ್ಕಿದ ಆನಂದವೇ ಸತ್ಯೋದಕ.
ಪಾದೋದಕದ ಇನ್ನೊಂದು ದಶವಿಧ (ಪಟ್ಟಿ -2)ವನ್ನೂ ಮೇಲಣ ರೀತಿಯಲ್ಲೇ –ಆದರೆ ಮತ್ತೆ ಕೆಲವು ಅಳವಡಿಕೆಗಳಿಂದ –ವಿವರಿಸಬಹುದಾಗಿದೆ. ಮುಖ್ಯವಾಗಿ ಪಾದೋದಕಪ್ರಸಾದಗಳ ಕಲ್ಪನೆಯು -ಪಾದ್ಯ ಮಧುಪರ್ಕಾದಿಗಳಿಂದಲೆಂಬಂತೆ -ಬಂದ ಅತಿಥಿಯನ್ನು ಸತ್ಕರಿಸುವ ಸೇವಾಭಾವಮೂಲವುಳ್ಳದಾಗಿದೆ.
ಪ್ರಸಾದ
ಧರ್ಮದ ಶೋಧಕಾಂಗದಲ್ಲಿ ಪ್ರವೇಶಿಸಿ ದೇಹ-ಇಂದ್ರಿಯ-ಅಂತಃಕರಣಗಳನ್ನು ಶುದ್ಧೀಕರಿಸಿಕೊಂಡು ಈ ಲೋಕದಲ್ಲಿ ಶಿವನಾಗಿ ಶಂಕರನಾಗಿ ಪಂಚಪುರುಷಮೂರ್ತಿಯಾಗಿ ಬದುಕಲು ಬೇಕಾದ ಪ್ರಸನ್ನತೆಯೇ “ಪ್ರಸಾದ.”
ಮುಮುಕ್ಷುವಾದೊಂದು ಜೀವ ಗುರುವಿನ ಆಶ್ರಯ ಪಡೆಯುವುದು ಗುರುಪ್ರಸಾದ, ಆ ಗುರುಕೊಟ್ಟ ಲಿಂಗವನ್ನು ಉಪಾಸಿಸುವುದು ಲಿಂಗಪ್ರಸಾದ, ಜಂಗಮವೇ ಲಿಂಗವೆಂದು ನಿಜತಿಳಿಯುವುದು ಜಂಗಮ ಪ್ರಸಾದ, ಈ ಗುರುಲಿಂಗಜಂಗಮ ಸನ್ನಿಧಿಯಲ್ಲಿ ಪಡೆದ ಅನುಭಾವದಿಂದ ಸಂವೇದನೆಗಳು ತಿಳಿಗೊಳ್ಳುವುದು ಪ್ರಸಾದಿಯ ಪ್ರಸಾದ, ಕ್ರಮವಾಗಿ ಶಿವತತ್ತ್ವ ಜಿಜ್ಞಾಸೆ ದಟ್ಟಗೊಳ್ಳುವುದು ಆಪ್ಯಾಯನಪ್ರಸಾದ, ಆ ಹಿನ್ನಲೆಯಲ್ಲಿ ಸಹಧರ್ಮೀಯರನ್ನೆಲ್ಲ ಸಮವೆಂದು ಕಾಣುವುದು ಸಮಯಪ್ರಸಾದ, ಈ ಆದರ್ಶಗಳನ್ನು ಇಷ್ಟಲಿಂಗದ ಮೂಲಕ ಅನುಷ್ಠಾನಿಸಿ ಇಂದ್ರಿಯಶುದ್ಧಿಯನ್ನು ಸ್ಥಿರಪಡಿಸಿಕೊಳ್ಳುವುದು ಪಂಚೇಂದ್ರಿಯ ವಿರಹಿತ ಪ್ರಸಾದ, ಪ್ರಾಣಲಿಂಗದ ಮೂಲಕ ಅನುಷ್ಠಾನಿಸಿ ಅಂತಃಕರಣಚತುಷ್ಟಯ ಶುದ್ಧಿಯನ್ನು ರೂಢಿಸಿಕೊಳ್ಳುವುದು ಅಂತಃಕರಣಚತುಷ್ಟಯವಿರಹಿತ ಪ್ರಸಾದ, ಭಾವಲಿಂಗದ ಮೂಲಕ ಅನುಷ್ಠಾನಿಸಿ ಅಂತರಂಗದ ಅಂತರತಮ ಭಾವಮೂಲವನ್ನು ಸತ್ತ್ವಯುತ ಮಾಡಿಕೊಳ್ಳುವುದು ಸದ್ಭಾವಪ್ರಸಾದ. ಕೊನೆಕೊನೆಯ ಹೆಜ್ಜೆಯಾಗಿ -ಲಿಂಗವು ತನ್ನಿಂದ ಅನ್ಯವೆನಿಸದೆ ನಿರಂತರ ಸಮಾಧಾನಿಯಾಗುವುದು ಶಮತಾ ಪ್ರಸಾದ, ಲಿಂಗವೇ ತಾನಾಗಿ ಅನ್ಯವರಿಯದಿರುವುದು ಜ್ಞಾನಪ್ರಸಾದ.
ಈ ಶಿವಜ್ಞಾನಪ್ರಕಾಶವೇ ನನಗೆ ಪಾದೋದಕ ಪ್ರಸಾದ ಇನ್ನಿತರವಲ್ಲವೆನ್ನುತ್ತಿರುವರು ಬಸವಣ್ಣನವರು.
ವಿ : ಈ ದಶವಿಧ ಪಾದೋದಕ ಮತ್ತು ಏಕಾದಶವಿಧ ಪ್ರಸಾದದ ಆಚರಣೆಯ ವಿವರವನ್ನು ಡಾ. ಎಲ್. ಬಸವರಾಜು ಅವರ ವೀರಶೈವ ತತ್ತ್ವ ಮತ್ತು ಆಚರಣೆಯೆಂಬ ಗ್ರಂಥದ 9ನೇ ಅನುಬಂಧದಿಂದ ತಿಳಿಯಬಹುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.