Hindi Translationकर्ण सूतक सद्गुरु वचन से दूर हुआ।
नयन सूतक सद्भक्तों के दर्शन से दूर हुआ।
काय सूतक तव चरणों के स्पर्श से दूर हुआ।
मुख सूतक तव प्रसाद प्राप्ति से दूर हुआ।
नाना सूतक तव शरणों के अनुभाव प्राप्ति से दूर हुआ।
सुनो कूडलसंगमदेव, मेरे मन का सूतक दूर हुआ।
क्योंकि मैंने जाना कि तुम्हारे सिवा दूसरा नहीं है॥
Translated by: Banakara K Gowdappa
English Translation Thanks to the real Guru's word,
The impurity of my ears has gone;
Thanks to the real bhaktas' sight,
The impurity of my eyes has gone;
Thanks to the touch of Thy feet,
My body's impurity has gone;
Because I took what was offered to Thee,
My tongue's impurity has gone;
Because I experienced Thy Śaraṇās,
My various impurities have gone.
Hear me, O Kūḍala Saṅgama Lord,
The impurities of my mind have gone
Because I've known nought but Thyself.
Translated by: L M A Menezes, S M Angadi
Tamil Translationஉயர்குருவின் அருள்மொழியால்
செவியின் அழுக்கு அகன்றது
உயர்ந்த பக்தரைக் கண்டதால்
கண்களின் அழுக்கு அகன்றது
உம் திருவடிகளைத் தீண்டியதால்
உடலின் அழுக்கு அகன்றது
உம் பிரசாதத்தைப் பெற்றதால்
வாயின் அழுக்கு அகன்றது
உம் அடியாரை உணர்ந்ததால்
பலவகை அழுக்கு அகன்றது
கூடல சங்கமதேவனே, கேளாய்
ஐயனே, உம்மை உணர்ந்தால்
என் மனஅழுக்கு அகன்றது ஐயனே
Translated by: Smt. Kalyani Venkataraman, Chennai
Telugu Translationచెవి సూతకము పోయె సద్గురుని వచనమున;
కంటి సూతకము పోయె సద్భక్తుల చూడగనే;
తను సూతకము పోయె మీ చరణముల తాకగనే;
నోటి సూతకము పోయె మీ ప్రసాదము భుజింప
నానా సూతకములు నశియించె; శరణుల అనుభావమున
వినవయ్యా నా మనోసూతకము పోయె
నీవులేనిది లేదని సంగా! తెలియగనే!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಪ್ರಸಾದಿಯ ಭಕ್ತಸ್ಥಲವಿಷಯ -
ಸೂತಕ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಗುರುವಚನ-ಶಬ್ದ-ಕಿವಿ
ಶಿವಚರಣ ಸ್ಪರ್ಶನ-ಸ್ಪರ್ಶ-ಕಾಯ
ಭಕ್ತಿದರ್ಶನ-ರೂಪ-ಕಣ್ಣು
ಶಿವಪ್ರಸಾದ-ರಸ-ರಸನೆ
ಶರಣರ ಅನುಭಾವ-ಗಂಧ-ನಾಸಾ(ಮೂಗು)
ಶಿವಜ್ಞಾನ-ಮನದ ಸೂತಕ-ಮನ.
ಪಂಚೇಂದ್ರಿಯಗಳನ್ನು ಮಿಸುಕದಂತೆ ನಿಗ್ರಹಿಸುವುದು ಸಾಹಸದ ಮಾತು. ಎಷ್ಟೇ ಪ್ರಾಜ್ಞನಿಗಾದರೂ ಅವನ್ನು ಸ್ತಬ್ಧಗೊಳಿಸುವ ಅರ್ಥದಲ್ಲಿ ನಿಗ್ರಹಿಸುವುದು ಸಾಧ್ಯವೇ ಇಲ್ಲ, ಕಿವಿಯಿಂದ ಚೋದಕ ಶಬ್ದವನ್ನೇ ಸದಾ ಕೇಳುತ್ತಿರುವುದು ಎಷ್ಟು ಅಧಮವೋ, ಅದನ್ನು ಸುತರಾಂ ದಮನ ಮಾಡುವುದಾದರೆ ಅದೂ ಅಧಮವೆ. ಆ ವಿಧಾನದಿಂದ ಮಾನಸಿಕ ದುಷ್ಪರಿಣಾಮಗಳು ಉಂಟಾಗುವವು. ಆದುದರಿಂದಲೇ –“ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು” (ವಚನ 640) ಎಂದಿರುವುದು ಬಸವಣ್ಣನವರು. ಈ ದೋಷ ತಲೆದೋರದಂತೆ ಮಾಡಲು ಕಿವಿಯನ್ನು ಗಂಭೀರಶಬ್ದಗಳಲ್ಲಿ ತೊಡಗಿಸಬೇಕು –ಅದರಿಂದ ಜೀವನ ಪರಿಷ್ಕಾರ(ಸುಲಭ)ಗೊಳ್ಳುವುದಲ್ಲದೆ –ಆಧ್ಯಾತ್ಮಿಕ ದಿವ್ಯಜೀವನಕ್ಕೆ ಅದು ತೆರೆದ ಬಾಗಿಲೂ ಆಗುವುದು. ಇದೇ ಮಾತು ಕಣ್ಣು ಮುಂತಾದ ಇನ್ನಿತರ ಇಂದ್ರಿಯಗಳಿಗೂ ಅನ್ವಯಿಸುವುದು.
ಇಂದ್ರಿಯಗಳನ್ನು ಹೀಗೆ ದುರ್ವಿಷಯಗಳಿಗೆ ಬದಲಾಗಿ ಸದ್ವಿಷಯಗಳಿಗೆ ತೊಡಗಿಸುವುದೊಂದೇ ಮನಸ್ಸನ್ನು ಸಂಯಮಿಸುವುದಕ್ಕಿರುವ ಏಕೈಕ ಮಾರ್ಗ.
ಆದ್ದರಿಂದಲೇ ಬಸವಣ್ಣನವರು ಶ್ರವಣಾದಿ ಪಂಚೇಂದ್ರಿಯಗಳ ದುಶ್ಚಟ(ಸೂತಕ)ಗಳನ್ನು ಕ್ರಮವಾಗಿ ಗುರುವಚನಶ್ರವಣ, ಶಿವಪಾದಸ್ಪರ್ಶನ, ಶಿವಭಕ್ತದರ್ಶನ, ಶಿವಪ್ರಸಾದಾಸ್ವಾದನ, ಸದ್ವಾಸನಾಪ್ರೇರಿತ ಶಿವಾನುಭಾವ ಪ್ರಸಂಗಗಳಿಂದ ಪ್ರತಿನಿಧಾನಿಸಿ ಆ ಶ್ರವಣಾದಿ ಇಂದ್ರಿಯಗಳನ್ನು ಶುದ್ಧೀ ಕರಿಸಬೇಕೆಂದೂ –ಆಗ ಶಿವೈಕಶರಣ್ಯಜ್ಞಾನ ಅಳವಟ್ಟು ಮನಸ್ಸು ತಲಸ್ಪರ್ಶಿಯಾಗಿ ತಿಳಿಯಾಗುವುದೆಂದೂ ಸ್ವಾನುಭಾವದಿಂದ ಬೋಧಿಸುತ್ತಿರುವರು.
ವಿ : (1) ಈ ವಚನದಲ್ಲಿ –“ಕಂಗಳ ಸೂತಕ ಹೋಯಿತ್ತು ಸದ್ಭಕ್ತರ ಕಂಡೆನಾಗಿ” ಎಂಬ ವಾಕ್ಯ ಖಂಡವು- “ಕಾಯದ ಸೂತಕ ಹೋಯಿತ್ತು ನಿಮ್ಮ ಚರಣವ ಮುಟ್ಟಿದೆನಾಗಿ” ಎಂಬುದಾದ ಮೇಲೆ ಬರಬೇಕು. (2) “ನಾನಾ ಸೂತಕ” ಎಂಬುದಕ್ಕೆ ಬದಲಾಗಿ “ನಾನಾಸೂತಕ” ಎಂಬುದೇ ಸುಪಾಠವಾಗಿ –ಅದನ್ನೇ ಒಪ್ಪಬೇಕಾಗುವುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.