ಐದು ಮಾನವ ಕುಟ್ಟಿ ಒಂದು ಮಾನವ ಮಾಡು, ಕಂಡಾ ಮದವಳಿಗೆ :
ಇದು ನಮ್ಮ ಬಾಳುವೆ, ಮದವಳಿಗೆ ;
ಇದು ನಮ್ಮ ವಿಸ್ತಾರ, ಮದವಳಿಗೆ !
ಮದವಳಿದು ನಿಜವುಳಿದ ಬಳಿಕ, ಅದು ಸತ್ಯ ಕಾಣಾ,
ಕೂಡಲಸಂಗಮದೇವಾ.
Hindi Translationपाँच मापों को कूटकर एक माप बनाओ वधू
यह हमारा जीवन है, दुलहन,
यह हमारा विकास है, दुलहन,
मद नष्ट होने पर बचा तत्व विकास
ही सत्य है, कूडलसंगमदेव ॥
Translated by: Banakara K Gowdappa
English Translation The five bushels – pound them, bride,
And make them one ;
This is our life, O bride,
This is our growth, O bride!
When pride is crushed and the grain remains
Look you, that is the Truth,
O Kūḍala saṅgama Lord!
Translated by: L M A Menezes, S M Angadi
Tamil Translationஐம்புலன்களை இடித்து, ஒருமுகப்
படுத்துவாய், மணப்பெண்ணே
இது நம் வாழ்வு, மணப்பெண்ணே
இது நம் அகத்தின் மலர்ச்சி மணப்பெண்ணே
மதம் அழிந்து, உண்மை எஞ்சியபிறகு
அது இறைவன் காணாய் கூடல சங்கமதேவனே.
Translated by: Smt. Kalyani Venkataraman, Chennai
Telugu TranslationTranslated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಜ್ಞಾನಿಸ್ಥಲ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಐದು ಇಂದ್ರಿಯಗಳನ್ನು ಶಿಕ್ಷಿಸಿ ಮನವನ್ನು ಏಕಾಗ್ರಮಾಡಬೇಕು. ಇದೇ ನಮ್ಮ ಬಾಳುವೆ, ಮತ್ತು ನಮ್ಮ ಸತ್ಯ ಸಂಪತ್ತು.
ಈ ಕಣ್ಣು ನಾಲಗೆ ಮುಂತಾದ ಇಂದ್ರಿಯಗಳಿಗೆ ಅಂಟಿರುವ ಮದವನ್ನು ಥಳಿಸಿ ಕಳೆದರೆ ಉಳಿಯುವುದು ನಮಗೆ ನಿಜಾನಂದಸ್ಥಿತಿ : ಎಂದು ಲಿಂಗಪತಿಯ ಕೈಹಿಡಿದ ಶರಣಸತಿಗೆ ಅವಳ ಹಿರಿಯ ಸಖಿಯಾದ ಇನ್ನೊಬ್ಬ ಶರಣಸತಿ ಬುದ್ಧಿವಾದ ಹೇಳುತ್ತಿರುವ ಧಾಟಿಯಲ್ಲಿದೆ ಈ ವಚನ.
ಎಲ್ಲ ಕಾಲದ ಎಲ್ಲ ಭಕ್ತರಿಗೂ ಪತಿಯಾದವನು ಶಿವನೊಬ್ಬನೇ. ಅವನು ಪುರಾತನಪುರುಷನಾದರೂ –ವಸಂತದಂತೆ ನಿತ್ಯ ಯೌವನಿಗ. ಅಂದಂದಿನ ಜೀವ ಅವನ ಪ್ರಿಯತಮೆಯಾದಂದಂದಿಗೆ ಈ ಬುದ್ಧಿವಾದವನ್ನು ಪರಂಪರೆಯ ಗುರುಸ್ಥಾನದಲ್ಲಿರುವವರು ಹೇಳುತ್ತಲೇ ಇರುವರು. ಕೇಳಿದವರು ಬದುಕುತ್ತಾರೆ –ಇಲ್ಲದವರು ಬೀದಿಪಾಲಾಗುತ್ತಾರೆ.
ಇನ್ನೊಂದು ರೀತಿಯಲ್ಲೂ ಹೇಳಬಹುದು : ಮನೆಗೆ ಹೊಸದಾಗಿ ಬಂದ ಹೆಣ್ಣಿಗೆ –ಆ ಮನೆಯಲ್ಲಿ ಅವಳು ನಡೆದುಕೊಳ್ಳಬೇಕಾದ ವಿಶಿಷ್ಟ ರೀತಿನೀತಿಗಳನ್ನು ಕುರಿತು ಅವಳಿಗೆ ಮುತ್ತೈದೆಯರು ಮುದ್ದು ಮಾತಿನಲ್ಲಿಯೇ ಬುದ್ಧಿವಾದ ಹೇಳುತ್ತಾರೆ. ಹಾಗೆಯೇ ಶಿವನ ಸಂಸಾರಕ್ಕೆ ಸೇರಿದ ಭಕ್ತನೊಬ್ಬನು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅವನಿಗೆ ಹಿರಿಯ ಭಕ್ತರು ಹೇಳುತ್ತಿದ್ದಾರೆಂದು –ಈ ವಚನ ಸಂದರ್ಭವನ್ನು ಕಲ್ಪಿಸಿಕೊಳ್ಳಬೇಕು. ಆ ಸುಸಂಸ್ಕೃತರ ಮನೆಯಲ್ಲಿ ಅನ್ನ ಮಲ್ಲಿಗೆಯಂತೆ ಬೆಳ್ಳಗು ಇರಬೇಕು ಸುವಾಸಿತವೂ ಆಗಿರಬೇಕು -ಹಾಗಾಗುವಂತೆ ಭತ್ತವನ್ನು ಹೇಗೆ ಕುಟ್ಟಬೇಕೋ ಹಾಗೆ –ಶಿವನ ವಿಶ್ವನೀಡಂನಲ್ಲಿ ಅವನ ಹೆಂಡಿರಾದ ಜೀವರು ಇಂದ್ರಿಯಗಳನ್ನು ಶುದ್ಧವಾಗಿಟ್ಟುಕೊಂಡಿರಬೇಕು –ಮತ್ತು ಮನಸ್ಸನ್ನು ಅತ್ತಿತ್ತ ಹರಿಯಬಿಡದೆ ಪತಿರತ್ನದಲ್ಲಿಯೇ ಹುರಿಗೊಳಿಸಿ ಪೋಣಿಸಿಕೊಂಡಿರಬೇಕು. ಶಿವಸಂಸಾರದಲ್ಲಿ ಶರಣಸತಿಯು ರೂಢಿಸಿಕೊಳ್ಳಬೇಕಾದ ಸತ್ಸಂಪ್ರದಾಯವಿದು.
ವಿ : ಈ ವಚನದಲ್ಲಿ ಬಳಸಿರುವ “ಮದವಳಿಗೆ”ಎಂಬ ಪದ ನಾಮಪದವಾದರೆ ನವವಧುವೆಂದರ್ಥ, ಕ್ರಿಯಾಪದವಾದರೆ ಮದವಳಿಯಲಿ ಅಥವಾ ಮದ ನೀಗಲಿ ಎಂದರ್ಥ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.