ಕುಲಮದವಳಿಯದನ್ನಕ್ಕ ಶರಣನಾಗಲೇಕೆ?
ವಿಧಿವಶ ಬಿಡದನ್ನಕ್ಕ ಭಕ್ತನಾಗಲೇಕೆ?
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕಿಲ ಕಿಂಕಿಲ ಕಿಂಕಿಲನಾಗಿರಬೇಕು!
ಹೆಪ್ಪನೆರೆದ ಹಾಲು ಕೆಟ್ಟು ತುಪ್ಪವಪ್ಪಂತೆ
ಇಪ್ಪರು, ಕೂಡಲಸಂಗಮದೇವಾ, ನಿಮ್ಮ ಶರಣರು!
Hindi Translationकुलमद का नाश न होने तक शरण कैसे बन सकता है?
विधि के न छूटने तक भक्त कैसे बन सकता है?
अहं व धन का संबंध त्यागकर किंकर का किंकर बनना चाहिए ।
जमन के योग से दूघ बिगड़कर जैसे घी बनता है
वैसे हैं तव शरण कूडलसंगमदेव ॥
Translated by: Banakara K Gowdappa
English Translation Unless the pride of caste is gone,
How can one be a Śaraṇa?
Unless the bonds of fate have left,
How can one be a devotee?
Leaving all trace of I and Mine,
One has to be the lowest of the low!
O Kūḍala Saṅgama Lord, Thy Śaraṇa''s are
Like ghee that comes
When milk is mixed with sour and breaks!
Translated by: L M A Menezes, S M Angadi
Tamil Translationகுலம், மதம் அழியும்வரை சரணனாக வியலுமோ?
பிணைப்பை விடும்வரை பக்தனாக வியலுமோ?
செருக்கு, செல்வத்தொடர்பை விடுத்து
தொண்டன், தொண்டனாக இருக்க வேண்டும்
உறை ஊற்றியபால், மாறுதலடைந்து
நெய் ஆவதனைய இருப்பர்
கூடல சங்கமதேவனே, உம் அடியார் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನವಚನದ ಸರಳಾನುವಾದ : ಕುಲಮದವಳಿಯದೆ ಶರಣನಾಗುವುದಿಲ್ಲ, ವಿಧಿವಶ ಬಿಡದೆ ಭಕ್ತನಾಗುವುದಿಲ್ಲ. ಅಹಂಕಾರದ ಐಶ್ವರ್ಯದ ಪೂರ್ವ ಸಂಬಂಧಗಳನ್ನು ತೊರೆದು ಶಿವಭಕ್ತರ ಆಳಿನ ಅಡಿಯಾಳಾಗಿರಬೇಕು ಭಕ್ತನು. ಹೆಪ್ಪು ಬೆರೆತ ಹಾಲು ಪರಿವರ್ತನೆಗೊಂಡು ಗಟ್ಟಿತುಪ್ಪವಾಗುವಂತೆ -ಶಿವಧರ್ಮವನ್ನು ಬೆರಸಿದ ನರಮಾನವರು ಘನಲಿಂಗ ಘನತೆಯನ್ನು ಪಡೆಯುವರು.
ವಿಧಿವಶದಿಂದ ಯಾವನಾದರೊಬ್ಬನು ಯಾವುದೋ ಒಂದು ಜಾತಿಯಲ್ಲಿ ಹುಟ್ಟುತ್ತಾನೆ. ಆದರೆ ಅವನು ಶರಣಧರ್ಮಕ್ಕೆ ಸೇರಿ ಶರಣನಾದ ಮೇಲೆ –ಹಿಂದೆ ತಾನು ಕೀಳುಜಾತಿಯಲ್ಲಿ ಹುಟ್ಟಿದವನೆಂದು ತಲೆಗ್ಗಿಸುವುದಾಗಲಿ, ಮೇಲುಜಾತಿಯಲ್ಲಿ ಹುಟ್ಟಿದವನೆಂದು ತಲೆ ತಿರುಕನಾಗುವುದಾಗಲಿ ಅವನಿಗಿಲ್ಲ. ಶರಣನು ಎಲ್ಲ ಜಾತಿಯನ್ನೂ ಸಮಾನವಾಗಿ ಗೌರವಿಸುವನಾಗಿ ಅವನಿಗೆ ಯಾವ ಕುಲಮದವಾಗಲಿ ಇರುವುದಿಲ್ಲ. ತಾನು ಶಿವಭಕ್ತರ ಆಳಿನ ಅಡಿಯಾಳೆಂಬ ಭಾವವಳವಟ್ಟಿರುವುದಾಗಿ –ಅವನಲ್ಲಿ ಐಶ್ವರ್ಯಮದವೂ ಇರುವುದಿಲ್ಲ.
ಶಿವಧರ್ಮಕ್ಕೆ ಸೇರಿದ ಮೇಲೆ ಅವನಲ್ಲಿ ಮಹತ್ತರವಾದ ಪರಿವರ್ತನೆಗಳು ತಲೆದೋರುತ್ತವೆ-ಹೆಪ್ಪನ್ನು ಎರೆದ ಹಾಲು ಭವಿಷ್ಯದಲ್ಲಿ ಕೆಡುವ ಸ್ಥಿತಿಯನ್ನು ಕಳೆದುಕೊಂಡು ಆ ಹಾಲಿಗಿಂತಲೂ ಬೆಲೆಬಾಳುವ, ಬಹುಕಾಲ ಬಾಳುವ ಗಟ್ಟಿತುಪ್ಪವಾಗುವಂತೆ ಅವನು ನಶ್ವರತೆಯನ್ನು ನೀಗಿಕೊಂಡು ಶಾಶ್ವತ ಮೌಲ್ಯಗಳನ್ನು ಪಡೆದಿರುವನು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.