ಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿ.
ಅನುಭಾವಲಿಂಗವಿಡಿದು ಮಾರ್ಗಕ್ರಿಯಾಲಿಂಗಸಿದ್ಧಿ.
ಮಾರ್ಗಕ್ರಿಯಾಲಿಂಗವಿಡಿದು ಮೀರಿದ ಕ್ರಿಯಾಲಿಂಗಸಿದ್ಧಿ,
ಮೀರಿದ ಕ್ರಿಯಾಲಿಂಗವಿಡಿದು ಕ್ರಿಯಾನಿಷ್ಪತ್ತಿಲಿಂಗಸಿದ್ಧಿ,
ಇದು ಕಾರಣ, ಕೂಡಲಸಂಗಮದೇವ, ಲಿಂಗವಿಡಿದು ಲಿಂಗಸಿದ್ಧಿ!
Hindi Translationआचारलिंग द्वारा अनुभावलिंग सिद्धि है,
अनुभावलिंग द्वारा मार्गक्रियालिंग सिद्धि है,
मार्गक्रियालिंग द्वारा श्रेष्ठ क्रियालिंग सिद्धि है,
श्रेष्ठ क्रियालिंग द्वारा क्रिया निष्पत्तिलिंग सिद्धि है ।
अतः कूडलसंगमदेव, लिंग द्वारा लिंग सिद्धि है ॥
Translated by: Banakara K Gowdappa
English Translation By aid of divine discipline
Divine experience is attained;
Divine experience is the means
To action which the Rule demands;
Through proper action you attain
Transcendent action; and through that
The consummation of all acts.
Therefore, O Kūḍala Saṅgama Lord,
By aid of Liṅga, Liṅga is attained!
Translated by: L M A Menezes, S M Angadi
Tamil Translationநன்னெறியைப் பின்பற்றி இலிங்கத்தை
உணர்ந்தேன், இலிங்கத்தை உணர்ந்ததால்
மூன்று நிலைகளை அடைந்தேன், அதன்
பிறகு பிராணலிங்கி, சரணன், ஐக்கிய
நிலைகளை அடைந்தேன் இதனால்
மிக உயரிய நிலையான அனுபவம்
செயலில் வெளிப்படும் நிலையை அடைவது
எனவே கூடல சங்கமதேவனே
இலிங்கத்தைப் பிடித்து இலிங்கத்தை உணர்ந்தேன்
Translated by: Smt. Kalyani Venkataraman, Chennai
Telugu TranslationTranslated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಶರಣಸ್ಥಲವಿಷಯ -
ಭಕ್ತಿಮಾರ್ಗ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿಯಾಗುವುದೆಂದರೆ ಆಚರಣೆಯ ಮೂಲಕ ಒಂದು ತತ್ತ್ವ ವಿಶದಗೊಳ್ಳುವುದೆಂದರ್ಥ. ಆಮೂರ್ತತತ್ತ್ವಗಳು ಕ್ರಿಯಾರೂಪದಲ್ಲಿ ಅಳವಟ್ಟಾಗ ಆ ತತ್ತ್ವಗಳ ಸ್ವರೂಪ ಸ್ಫುಟಗೊಳ್ಳುತ್ತದೆ. ದಾನತತ್ತ್ವವನ್ನು ಕುರಿತು ದೀರ್ಘವಾಗಿ ಮತ್ತೆಯೂ ದೀರ್ಘತರವಾಗಿ ವಿವರಿಸುವುದಕ್ಕೆ ಬದಲಾಗಿ ಹಸಿದು ಬಂದವನಿಗೆ ಅನ್ನ ನೀರಿನಿಂದ ಉಪಚರಿಸುವ ಒಂದು ಸೇವಾವಕಾಶವನ್ನು ಒದಗಿಸಿ ಕೊಟ್ಟರೆ ಆ ದಾನತತ್ತ್ವದ ಶಬ್ದಾರ್ಥಜ್ಞಾನಕ್ಕಿಂತಲೂ ಮಿಗಿಲಾದ ಹಿಂದು ಅನುಭಾವ ಉಂಟಾಗುತ್ತದೆ. ಈ ವಿಧವಾದ ಅನುಭಾವವೆ ಅಚ್ಚ ಜೀವನದರ್ಶನ –ಮಿಕ್ಕ ವಿವರಣಗಳೆಲ್ಲ ಆ ಜೀವನವನ್ನು ಕುರಿತ ಅಂತೆಕಂತೆಗಳಷ್ಟೆ.
ಆದ್ದರಿಂದಲೇ ಬಸವಣ್ಣನವರು ಹೇಳುತ್ತಾರೆ : ನೀನು ಅನುಭಾವಿಯಾಗಬೇಕೋ –ಕ್ರಿಯೆಗಳನ್ನು ಕೌಶಲ್ಯದಿಂದ ಮಾಡು. ಆ ಮೂಲಕವೇ ನಿನ್ನ ಪ್ರಸ್ತುತಕಾಲದವರೆಗಿನ ಮಾನವ ಮಹಾಸಾಹಸಗಳನ್ನು ನೀನು ಅರಿತಂತಾಗುತ್ತದೆ, ಮತ್ತು ಅದನ್ನು ಮುಂದುವರೆಸಲು ನಿನ್ನ ಪಾಲಿನ ಕಾಣಿಕೆಯನ್ನೂ ನೀನು ಕೊಡಲನುವಾಗುತ್ತದೆ-ಎಂದು. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ -ಭಕ್ತನು ಮಹಾವಿಚಾರ ಪಂಥದಲ್ಲಿ ಪ್ರವಾಸ ಹೊರಟ ಒಬ್ಬ ಸಾಹಸಿ ಎಂಬುದನ್ನು.
ನಡೆದುಬಂದೊಂದು ಸಿದ್ಧಾಂತಕ್ಕೆ ಕಾಲಕ್ರಮದಲ್ಲಿ ಕೆಲವು ಆಕ್ಷೇಪಗಳು ಬರುವವು. ಆ ಹಿನ್ನೆಲೆಯಲ್ಲಿ ಹೊಸ ಪ್ರಮೇಯವೊಂದು ಹುಟ್ಟಿಕೊಂಡು -ಹಿಂದಿನ ಸಿದ್ಧಾಂತ ಪರಿಷ್ಕಾರಗೊಳ್ಳುವುದು. ಹೀಗೆ ಚಿಂತನಶೀಲ ಮಾರ್ಗದಲ್ಲಿ ಸತ್ಯವು ನಿರಂತರವಾಗಿ ನವೋನವೀನವಾಗಿ ಅವಿಷ್ಕರಣಗೊಳ್ಳುತ್ತಲೇ ಇರುವುದು. ಅದೇ ಸತ್ಯದ ಘನತೆ ಮತ್ತು ದ್ರುವತೆ ಕೂಡ.
ವಿ : (1) ಹಿಂದಿನವರು ಹೇಳಿದ ಆಚರಣೆಗಳನ್ನು ಆಚರಿಸಿ ಅವರ ವಿಚಾರಪ್ರಗತಿಯ ಘಟ್ಟವನ್ನು ಗುರುತಿಸಿಕೊಳ್ಳುವುದು ಮಾರ್ಗಕ್ರಿಯಾಲಿಂಗಸಿದ್ಧಿ. (2) ಅಲ್ಲಿಂದ ಮುಂದಕ್ಕೆ ಭಕ್ತನು ತನ್ನದೇ ಆದ ವಿಚಾರಗಳಿಗೆ ತಕ್ಕ ಆಚರಣೆಗಳನ್ನು ಜೋಡಿಸಿ ಆ ಆಚರಣೆಗಳ ಅಖಂಡತೆಯನ್ನು ಗುರುತಿಸಿಕೊಲ್ಳುವುದೇ ಮೀರಿದ ಕ್ರಿಯಾಲಿಂಗಸಿದ್ಧಿ. ಈ ಮೀರಿದ ಕ್ರಿಯಾಲಿಂಗವಿಡಿದು ಪಡೆಯುವ ನಿಮಗ್ನಸ್ಥಿತಿಯೇ ಕ್ರಿಯಾನಿಃಪತಿಲಿಂಗಸಿದ್ಧಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.