ಮರಮರ ಮಥನದಿಂದ ಅಗ್ನಿ ಹುಟ್ಟಿ ಆ ಮರನೆಲ್ಲವ ಸುಡದಿಪ್ಪುದೆ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ?
ಇದು ಕಾರಣ, ಮಹಾನುಭಾವರ ತೋರಿಸು, ಕೂಡಲಸಂಗಮದೇವಾ.
Hindi Translationतरुओं के घर्षण से उत्पन्न अग्नि
उन तरुओं को जलाए बिना रहेगी?
महानुभावों के संग से उत्पन्न ज्ञानाग्नि
मेरे दैहिक गुणों को जलाए बिना रहेगी ?
अतः हे कूडलसंगमदेव महानुभावों को दिखाओ ॥
Translated by: Banakara K Gowdappa
English Translation When fire is kindled, as
Tree rubs on tree, does not the whole tree burn?
When the great illumination dawns
By contact of Experients,
Do not the body's traits all burn?
Therefore, O Kūḍala Saṅgama Lord,
Show me the great Experients!
Translated by: L M A Menezes, S M Angadi
Tamil Translationமரமும், மரமும் உராய்ந்து தீப்பற்றி
அம்மரத்தைச் சுடாதிருக்குமோ?
அனுபவம் பெற்றோரின் தொடர்பால்
ஞானத்தீ ஏற்படும் என் உடல்
இயல்புகளைச் சுடாமல் இருக்குமோ?
எனவே அனுபவம் பெற்றோரைக் காட்டுவாய்
கூடல சங்கம தேவனே.
Translated by: Smt. Kalyani Venkataraman, Chennai
Telugu Translationచెట్టు చెట్టున కొరసి చిచ్చుపుట్టి ఆ చెట్టునే కాల్చునయ్యా
మహాత్ముల స్నేహామున జ్ఞానాగ్ని రగిలి ఆ కాయమును కాల్పదే?
మహానుభావుల చూపింపుమో కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಭಕ್ತಸ್ಥಲವಿಷಯ -
ಅನುಭಾವ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನವಿವೇಕಿಯು ವಿವೇಕಿಯೊಡನೆ ಮಥನಮಾಡಿದರೆ ಜ್ಞಾನಾಗ್ನಿ ಹುಟ್ಟುತ್ತದೆ. ಒಬ್ಬರಿಂದೊಬ್ಬರು ತಂತಮ್ಮ ಲೋಪದೋಷಗಳನ್ನು ಸುಟ್ಟು ಪುಟವಿಟ್ಟುಕೊಂಡು ಶುದ್ಧವಾಗುತ್ತಾರೆ. ಶೀಘ್ರಕೋಪಿಗಳಿಬ್ಬರ ನಡುವೆ ಮಥನವಾಯಿತೋ –ಒಬ್ಬರಿಂದೊಬ್ಬರು ಕೊಲೆಯಾಗಿ ಇಬ್ಬರು ಸಾಯುತ್ತಾರೆ.
ವೈಚಾರಿಕವಾಗಿ ನಡೆಯುವ (ಮೇಲೆ ಹೇಳಿದ) ಸಹಬಾಳ್ವೆಗೆ ನಿದರ್ಶನವಾಗಿ –ಎರಡು ಮರಗಳ ನಡುವೆ ತಿಕ್ಕಾಟವಾಗಿ ಆ ಎರಡೂ ಮರಗಳು ಸುಟ್ಟು ಹೋಗುವುದನ್ನು ಬಸವಣ್ಣನವರು ಪ್ರಸ್ತಾಪಿಸಿರುವುದು ಹೇಗೂ ಸಮಂಜಸವೇ ಆಗಿದೆ. ಜಡವಾದ ಎರಡು ಮರಗಳ ನಡುವೆ ಮಥನವಾದಾಗಲೂ ಜ್ಞಾನಪ್ರತೀಕವಾದ ಅಗ್ನಿ ಹುಟ್ಟುವುದೆಂದಮೇಲೆ-ಚೈತನ್ಯಾತ್ಮಕನೇ ಆದ ಮಾನವನು ಮಾತಿಗೆ ಮಾತು ಬೆಳಸಿ ಕೋಪ ಮಾಡಿಕೊಂಡು ತನ್ನ ಮತ್ತು ಎದುರಾಳಿಯ ನಡುವೆ ವಿರಸ ಹುಟ್ಟುವಂತಾಗುವುದು ಅವನ ಜೀವಂತಿಕೆಗೆ ಸಾಕ್ಷಿಯಲ್ಲ.
ವಿ : ಮರವೆಂದರೆ ಒಣಮರ ಅಥವಾ ಕಡ್ಡಿಯೆಂದು ಅರ್ಥೈಸಬೇಕು. ಬೆಂಕಿಕಡ್ಡಿ ಬರುವ ಮುನ್ನ – ಆದಿಕಾಲಕ್ಕೆ –ಒಣಮರದ ತುಂಡುಗಳೆರಡನ್ನು ತಿಕ್ಕಿ ಬೆಂಕಿ ಮಾಡುವುದು ರೂಢಿಯಲ್ಲಿತ್ತು. ಯಜ್ಞ ಸಂದರ್ಭದಲ್ಲಿಯಂತು –ಇಂಥ ಅಗ್ನಿ ಪ್ರಶಸ್ತವೂ ಆಗಿತ್ತು. ದೇವರ ದಾಸಿಮಯ್ಯನ ಈ ವಚನವನ್ನು ಪರಾಮರ್ಶಿಸಿರಿ : “ನಿಡಿದೊಂದು ಕೋಲನು ಎರಡು ಮಾಡಿ –ಅಡಿಯ ಹೆಣ್ಣು ಮಾಡಿ, ಒಡತಣದ ಗಂಡು ಮಾಡಿ -ನಡುವೆ ಹೊಸೆದೊಡೆ ಹುಟ್ಟಿದ ಕಿಚ್ಚು ಹೆಣ್ಣೋ ಗಂಡೋ ರಾಮನಾಥ ?” (ಡಾ. ಎಲ್. ಬಸವರಾಜು ಸಂಪಾದಿತ ದೇವರ ದಾಸಿಮಯ್ಯನ ವಚನಗಳು -121).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.