Hindi Translationभक्त कहलाऊँगा शनैः शनैः,
युक्त कहलाऊँगा शनैः शनैः,
शरण कहलाऊँगा शनैः शनैः,
विघ्न बाधाओं को पारकर
क्रमशः “लिंगैक्य”कहलाऊँगा शनैः शनैः,
कूडलसंगमदेव तुमसे भी श्रेष्ट कहलाऊँगा ॥
Translated by: Banakara K Gowdappa
English Translation Gradually I make Myself
Reputed as a devotee;
Gradually I make myself
Reputed as a worthy man;
Gradually I make myself
Reputed as a wandering Śaraṇa !
By clearing hurdles gradually I make myself
Reputed as a man at one with Liṅga.
O Kūḍala Saṅgama Lord, I make myself
Reputed as a greater one than Thou!
Translated by: L M A Menezes, S M Angadi
Tamil Translationமெல்ல மெல்ல பக்தன் என நினைவேன் ஐயனே
மெல்ல மெல்ல யுக்தன் என நினைவேன் ஐயனே
பொருத்தமுற சரணன் என நினைவேன் ஐயனே
இடறி வீழும் குழிகளைத் தாண்டி வரவர
இலிங்கத்துடன் ஒன்றியவன் என நினைவேன்
கூடல சங்கமதேவனே, உம்மிலும்
மிக்கவன் என நினைவேன் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಭಕ್ತನೆನಿಸಿ ಅಲ್ಲಿ ಸಂವೇದಿಸಿ ಯುಕ್ತನಾಗಬೇಕು. ಆಗಿ ಭವಭಾರವನ್ನೆಲ್ಲ ನೀಗಿಕೊಂಡು ಶಿವನಿಗೆ ಶರಣಾಗತನಾಗಿ ಶರಣನೆನಿಸಿ ಶಿವನಲ್ಲಿ ಅವಿರಳವಾಗಿ ಶಿವನಲ್ಲಿ ಅವಿರಳವಾಗಿ ಬೆರತು ಲಿಂಗೈಕ್ಯನೆನಿಸಬೇಕು.
ಇದೆಲ್ಲ ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಈ ಸಾಧನ ಮಾರ್ಗದಲ್ಲಿ ಎಷ್ಟೋ ಸಲ ಪ್ರಗತಿಗೆ ಬದಲಾಗಿ ವಿಗತಿಯಾಗುವ ಸಾಧ್ಯತೆ ಬಹಳವಿದೆ. ಆದರೂ ಇಂದ್ರಿಯಗಳನ್ನು ಸಂಯಮಿಸಿಕೊಂಡು, ಸಜ್ಜನರ ಸೇವೆಯನ್ನು ನಡೆಸಿಕೊಂಡು ಮಹಾನುಭಾವರ ಪ್ರೀತಿಯನ್ನು ಗಳಿಸಿಕೊಂಡು, ಶಿವನೇ ನನ್ನ ಪತಿ ನಾನವನ ಸತಿಯೆಂಬ ಮಧುರಭಾವದಿಂದ ಶಿವಸಂಕಲ್ಪಗಳನ್ನು (ಪ್ರಾಣಗಳನ್ನು ಪಣವಾಗಿ ಒಡ್ಡಿಯಾದರೂ) ನಿರ್ವಹಿಸಿಕೊಂಡು, ಶಿವಶರಣರೇ ಶಿವನಿಗಿಂತ ಅಧಿಕರೆಂಬ ಭಾವನೆಯನ್ನು ರೂಢಿಸಿಕೊಂಡು ಬದುಕಬೇಕು.
ಇಷ್ಟು ದೊಡ್ಡ ಬದುಕಿನ ಕನಸೊಂದನ್ನು ಕಂಡು ಅದನ್ನು ನನಸಾಗಿಸಿಕೊಂಡು ನಮಗೆಲ್ಲಾ ಮೇಲ್ಪಂಕ್ತಿಯಾದವರು ಬಸವಣ್ಣನವರು.
ವಿ : (1) ಲಿಂಗೈ ಶಬ್ದವನ್ನು ಜೀವನ್ಮುಕ್ತನೆಂಬ ಅರ್ಥದಲ್ಲಿ ಗ್ರಹಿಸಬೇಕು. ಷಟ್ಸ್ಥಲದ ಶರಣ ಮತ್ತು ಐಕ್ಯ ಸ್ಥಲಗಳೆರಡೂ ಜೀವನ್ಮುಕ್ತ ಸ್ಥಿತಿಯನ್ನೇ ಕುರಿತುವಾಗಿವೆ. (2) ಭಕ್ತ-ಗುರು-ಲಿಂಗ-ಶರಣ-ಜಂಗಮ ಎಂಬ ಬಸವಧರ್ಮದ (ಸಮಾಜದ) ಅನುಶ್ರೇಣಿಯಲ್ಲಿ ಭಕ್ತ ಮತ್ತು ಶರಣರು ವೃಕ್ಷ ಮತ್ತು ಫಲಸ್ವರೂಪಿಗಳಾದರೆ –ಅವನ್ನು ರೋದೋಂತವಾಗಿ ಬೆಳೆಯುವ ಅಖಂಡಪ್ರಣಾಳಿಯೇ ಗುರುಲಿಂಗಜಂಗಮಾಭಿಧಾನವಾಗಿರುವುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.