ಆ ರತ್ನ ಪ್ರಸಾದವನಾರಾಧಿಸುತ್ತಿರಲು
ಆ ಪ್ರಸಾದವಲ್ಲಿ ಬೀಳುತ್ತ ಆಳುತ್ತೆದ್ದಿತ್ತು, ನೋಡಾ!
ಅದ ಹಲಬರು ನೋಡಿ ನೋಡಿ ಹೋಗುತ್ತಿದ್ದರು;
ಆ ಪ್ರಸಾದ ತಾನೇ ಬಂದು ಎನ್ನ ಸುತ್ತಿಕೊಂಡಿತ್ತು;
ಇದ ಪದಾರ್ಥವ ಮಾಡಿಕೊಡೈ ಕೂಡಲಸಂಗಮದೇವಾ.
Hindi Translationवह जब रत्न-प्रसाद की आराधना करता था
तब देखो वह प्रसाद गिरकर शासन करता था
कुछ लोग उसे देख देखकर जाते थे
उस प्रसाद ने स्वयं आकर मुझे घेर लिया ।
इससे कोई पदार्थ बनाकर दो, कूडलसंगमदेव ॥
Translated by: Banakara K Gowdappa
English Translation As he adored that jewel as a grace,
Lo then and there it fell and dived and rose !
Many a person looked at it intent
And walked away
Thats grace has come unhidden now
And wrapped me round...
Transform it to a thing,
Kūḍala Saṅgama Lord,
And give it me :
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఆ రత్న ప్రసాదము నారాధింపు చుండ;
ఆ ప్రసాదమట పడి లేచి తేలుచు వెలుగొందు చుండె
దానిని పలువురు చూచిచూచి తరలుచుండిరి;
తనకుదానే వచ్చి ఆ ప్రసాదమునను చుట్టుకొనుచుండె;
దానినే పదార్ధముచేసి ప్రసాదింపుమయ్యా సంగయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಪ್ರಸಾದಿಸ್ಥಲವಿಷಯ -
ಪ್ರಸಾದ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನವಿ:ಈ ಮೇಲಣ ಎರಡೂ ವಚನಗಳೂ ಒಂದರ ಮುಂದುವರಿಕೆ ಇನ್ನೊಂದಾಗಿದೆ.
ದ್ವೈತಿಗಳೂ ಅದ್ವೈತಿಗಳೂ ವಾದಿಸಿ ಪ್ರತಿವಾದಿಸಿ ಹೆಣಗಾಡುತ್ತಿರುವುದೇಕೆ? ತಿಳಿಗೊಂಡ ಮಾನವ ಮಾನಸಕ್ಕೆ ಸಂಕೇತವಾದ ಪ್ರಾಣಲಿಂಗ ಸಾಕ್ಷಾತ್ಕಾರಕ್ಕೆ?
ಆದರೆ ಆ ಪ್ರಾಣಲಿಂಗ ಬರೀ ವಾದದಿಂದೆಂದಿಗೂ ಸಾಧ್ಯವಾಗುವುದಿಲ್ಲವಲ್ಲ! ಸತ್ಯವನ್ನು ತಿಳಿದ ನಿಜವಾದ ಸಾಧಕನು ಜಗಳವಾಡುವ ದ್ವೈತಿಗಳನ್ನೂ ಅದ್ವೈತಿಗಳನ್ನೂ ಧಿಃಕರಿಸಿ ವಾದತೀತವಾದ ಪ್ರಾಣಲಿಂಗವನ್ನೆತ್ತಿ ತನ್ನೆದೆಯಲ್ಲಿ ಪ್ರತಿಷ್ಠಾಪಿಸಿಕೊಂಡು ಉಪಾಸಿಸುವನು. ಉಪಾಸನೆಯೊಂದರಿಂದ ಅದು ಸಾಧ್ಯವಾದೀತೇ ಹೊರತು ಉಪನ್ಯಾಸ ಪ್ರವಚನಗಳಿಂದಲ್ಲ.
ವಿ : 907ನೇ ವಚನದ (ಈ ಮೇಲಣ) ತಾತ್ಪರ್ಯಕ್ಕೆ ಪೂರಕವಾಗಿ 908ನೇ ವಚನದ ತಾತ್ಪರ್ಯವನ್ನು ಈ ಮುಂದೆ ನೋಡಿ:
ನಾನು ಮಾನಸವಾಗಿ ಪ್ರಾಣಲಿಂಗೋಪಾಸನೆ ಮಾಡುತ್ತಿರಲು ಅದು ನನ್ನ ಪ್ರಾಣದಿಂದ ತೇಲಿಬಂದು ನನ್ನ ಅಂಗೈಯಲ್ಲಿ ಇಷ್ಟಲಿಂಗವಾಗಿ ಮೂರ್ತಿಗೊಂಡಿತು. ಆಗ ನಾನು ಆ ಇಷ್ಟಲಿಂಗವನ್ನು ಅಷ್ಟವಿಧಾರ್ಚನೆಯಿಂದ ಉಪಾಸಿಸುತ್ತಿರಲು ಮರಳಿ ಅದು ನನ್ನ ಅಂಗೈಯಿಂದ ಜಾರಿ ನನ್ನ ಪ್ರಾಣದಲ್ಲಿ ಮುಳುಗಿತು. ಹೀಗೆ ನಿರಾಕರವನ್ನು ಆಕಾರದಲ್ಲಿ ನಿಲ್ಲಿಸಿ, ಆಕಾರವನ್ನು ನೀರಾಕರದಲ್ಲಿ ಲೀನಗೊಳಿಸಿ ಮಾಡುವ ನನ್ನ ಸಾಧನೆಯೆಲ್ಲಾ ವ್ಯರ್ಥಪ್ರಯಾಸವೆಂದು ಕೆಲವರು ಭಾವಿಸಿದರೇನಂತೆ -ನನಗೆ ಮಾತ್ರ ಆಕಾರ ನಿರಾಕಾರಗಳೆರಡೂ ಒಂದೇ ಶಿವತತ್ತ್ವದ ಎರಡು ಮಗ್ಗುಲೆಂಬ ವಿಶ್ವಾಸ ಮೂಡಿದೆ. ಎಲೆ ಶಿವನೇ, ಈ ವಿಶ್ವಾಸವನ್ನು ನನಗೆ ನಿಜಾನುಭಾವ ಮಾಡಿಕೊಡು ಎಂದು ಬಸವಣ್ಣನವರು ಶಿವನಲ್ಲಿ ಬಿನ್ನಹಮಾಡಿಕೊಳ್ಳುತ್ತಿರುವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.