Hindi Translationमिथ्या मुक्त सत्य-प्रसादी,
रंजन रहित निरंजन-प्रसादी
दुःख रहित घनानंद-प्रसादी,
अनित्य रहित नित्य-प्रसादी,
खंडित रहित अखंडित-प्रसादी,
कूडलसंगमदेव में वह स्वयं प्रसादी है ॥
Translated by: Banakara K Gowdappa
English Translation Truth's own Prasadi, who has shed the false;
Immaculate withour stain,
Free of all sorrow, filled with highest bliss,
Eternal, purged of temporal taint,
Solid and whole Himself Prasādi
In Lord Kūḍala Saṅgama.
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationమిథ్యను ద్రొక్క సత్యప్రసాది తేలె; అంజనములేని నిరంజన ప్రసాది
దుఃఖమును తొలచు ఘనానందప్రసాది, అనిత్యము లేని
నిత్యప్రసాది, ఖండములేని యఖండ ప్రసాది
కూడల సంగమదేవునిలో తానే ప్రసాది.
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಐಕ್ಯನ ಪ್ರಸಾದಿಸ್ಥಲವಿಷಯ -
ಭಕ್ತ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಶಿವಲಕ್ಷಣ ಮಾಯಾಲಕ್ಷಣ
1. ಸತ್ (ಸತ್ಯ) ಅಸತ್ತು (ಮಿಥ್ಯೆ)
2. ಚಿತ್ (ನಿರಂಜನ) ಜಡ (ಅಂಜನ)
3. ಆನಂದ (ಘನಾನಂದ) ದುಃಖ
4. ನಿತ್ಯ ಅನಿತ್ಯ
5. ಪರಿಪೂರ್ಣ ಖಂಡಿತ.
ಜೀವನು ಶಿವಸ್ವರೂಪಿಯೇ ಆಗಿ ಸತ್ ಮುಂತಾದ ಪಂಚಶುಭಲಕ್ಷಣಗಳಿಂದ ಕೂಡಿರುವನು. ಆ ಜೀವನನ್ನು -ಸೂರ್ಯನನ್ನು ಮೊಡದಂತೆ –ಮುಸುಕಿರುವ ಮಾಯೆ ಅಸತ್ ಮುಂತಾದ ಪಂಚದುರ್ಲಕ್ಷಣಗಳಿಂದ ಕೂಡಿರುವಳು.
ಜೀವನು ದೇಹಧಾರಿಯಾಗಿ-ಆ ಉಪಾಧಿಯಿಂದಲೇ ಪಡೆದ ಅಸದಾದಿಯಾದ ಮಾಯಾಗುಣಗಳನ್ನು ಕೊಡವಿಕೊಂಡರೆ –ಅವನೇ ಸಚ್ಚಿದಾನಂದ ನಿತ್ಯಪರಿಪೂರ್ಣ ಶಿವನಾಗಿರುವನು.
ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಈ ವಚನವನ್ನು ಪರಿಭಾವಿಸಬೇಕು
ಶರಣನು ಒಂದು ಭ್ರಮಾತ್ಮಕ ಅಸದ್ವಸ್ತುವಲ್ಲ-ಸದ್ರೂಪನು, ಕಲ್ಲುಮಣ್ಣಿನಂತೆ ಜಡವಸ್ತುವಲ್ಲ-ಚೇತನ್ಯಾತ್ಮಕನು, ಕಣ್ಣೀರು ಕರೆಯುತ್ತಿರುವ ರೋತಿಯಲ್ಲ–ಆನಂದರೂಪಿ, ಈಗ ತೋರಿ ಇನ್ನೊಂದು ಘಳಿಗೆಗೆ ಇಲ್ಲವಾಗುವ ಅನಿತ್ಯವಸ್ತುವಲ್ಲ -ನಿತ್ಯನು. ಕಾಲದೇಶಗಳಲ್ಲಿ ಹರಿದು ಹಂಚಿಹೋಗುವ ಚಿಂದಿಯಲ್ಲ –ಅಖಂಡ ಪರವಸ್ತು.
ವಿ : (1) “ಪ್ರಸಾದ”ದ ಬಗ್ಗೆ ಒಂದು ಶ್ಲೋಕವನ್ನು ನೋಡಬಹುದು :
ಪ್ರಸಾದೋ ಜನಕಃ ಪ್ರೋಕ್ರೋ ಜನನೀ ಭಕ್ತಿರೀರಿತಾ |
ಆನಯೋರೈಕ್ಯಭಾವೇನ. ಜನಿತಾ ಮುಕ್ತಿಕನ್ಯಕಾ”
(2) ಈ ವಚನದಲ್ಲಿ ಪ್ರಸಾದಿ ಎಂಬ ಪದವನ್ನು “ಜೀವನ್ಮುಕ್ತ”ನೆಂಬ ಅರ್ಥದಲ್ಲಿ ಬಳಸಲಾಗಿದೆ. “ಪ್ರಸಾದದಿಂದತಃಪರವಿಲ್ಲ, ಪ್ರಸಾದಿಯಿಂದೆ ಮುಕ್ತರಿಲ್ಲ”ವೆನ್ನುವರು ಮಡಿವಾಳ ಮಾಚಯ್ಯ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.